»   » ಮೊಮ್ಮಗಳ ಹೆಸರು ಕನ್ಫರ್ಮ್ ಮಾಡಿದ ಅಮಿತಾಬ್

ಮೊಮ್ಮಗಳ ಹೆಸರು ಕನ್ಫರ್ಮ್ ಮಾಡಿದ ಅಮಿತಾಬ್

Posted By:
Subscribe to Filmibeat Kannada

ಕೊನೆಗೂ ಬಚ್ಚನ್ ಕುಟುಂಬದ ಮೊಮ್ಮಗಳ ಹೆಸರು ಆರಾಧ್ಯಾ ಎಂಬುದು ಪಕ್ಕಾ ಆಗಿದೆ. ಹುಟ್ಟಿ ನಾಲ್ಕು ತಿಂಗಳುಗಳ ಬಳಿಕ ಹೆಸರಿಟ್ಟಿದ್ದರೂ, ಅದನ್ನು ಇಲ್ಲಿಯವರೆಗೂ ಬಚ್ಚನ್ ಕುಟುಂಬದ ಯಾವುದೇ ಸದಸ್ಯರು ಬಹಿರಂಗ ಪಡಿಸಿರಲಿಲ್ಲ. ಅಷ್ಟೇ ಅಲ್ಲ, ಸ್ವತಃ ಅಮಿತಾಬ್ ಮೊಮ್ಮಗಳ ಹೆಸರು ಆರಾಧ್ಯಾ ಎಂಬುದನ್ನು ಸಾಕಷ್ಟು ಬಾರಿ ಟ್ಟಿಟ್ಟರ್ ನಲ್ಲೂ ತಳ್ಳಿಹಾಕಿದ್ದರು. ಆದರೀಗ ಟ್ವಿಟ್ಟರಿನಲ್ಲೇ ಒಪ್ಪಿಕೊಂಡಿದ್ದಾರೆ.

ನವೆಂಬರ್ 16, 2012 ರಂದು ಜನಿಸಿದ ಐಶ್ವರ್ಯಾ ರೈ ಮಗಳ ರೂಪ ಹಾಗೂ ಹೆಸರಿನ ಬಗ್ಗೆ ಇಲ್ಲಿಯವರೆಗೂ ಬಂದ ಸುದ್ದಿ ಕೇವಲ ವದಂತಿ ಅಷ್ಟೇ ಆಗಿತ್ತು. ಇದೇ ಮೊದಲ ಬಾರಿಗೆ ಅಮಿತಾಬ್ ಅಧಿಕೃತಗೊಳಿಸಿದ್ದಾರೆ. ಬಚ್ಚನ್ ಕುಟುಂಬದ ಅಭಿಮಾನಿಯೊಬ್ಬಳು ಟ್ವಿಟ್ಟರಿನಲ್ಲಿ ಕೇಳಿದ ಪ್ರಶ್ನೆಗೆ ಅಮಿತಾಬ್, 'ಮೊಮ್ಮಗಳ ಹೆಸರು ಆರಾಧ್ಯಾ' ಎಂದು ಬರೆದಿದ್ದಾರೆ. ಅಷ್ಟು ಬರೆದಿದ್ದೇ ತಡ, ಆ ಹೆಸರೀಗ ಜಗತ್ತಿನ ತುಂಬಾ ಸುದ್ದಿಯಾಗುತ್ತಿದೆ.

ಆರಾಧ್ಯಾ ಎಂಬ ಹೆಸರು ನೋಂದಣಿ ಕೂಡ ಆಗಿದೆ. ಸಂಸ್ಕೃತದಲ್ಲಿ ಆರಾಧ್ಯಾ (Aaradhya) ಅಂದರೆ ಪೂಜೆ, ಆರಾಧನೆ ಎಂದರ್ಥ. ಪ್ರಪಂಚವೆಲ್ಲಾ ಆರಾಧ್ಯಾಳನ್ನು ಪೂಜಿಸುತ್ತಿರುವುದು ಕಾಕತಾಳೀಯವಾದರೂ ಸತ್ಯ. ಅಂದಹಾಗೆ, ಅಮಿತಾಭ್ ರ ಮಿಕ್ಕ ಮೊಮ್ಮಕ್ಕಳ ಹೆಸರು (ಪುತ್ರಿ ಶ್ವೇತಾ ಮತ್ತು ನಂದಾ ದಂಪತಿ) ನವ್ಯ ನವೇಲಿ ಮತ್ತು ಅಗಸ್ತ್ಯಾ. ಇದೀಗ ಮೂರನೇ ಮೊಮ್ಮಗಳಿಗೆ ಅಮಿತಾಭ್ ಇಟ್ಟಿರುವ ಹೆಸರು ಆರಾಧ್ಯಾ (ಏಜೆನ್ಸೀಸ್)

English summary
Amitabh Bachchan confirms Aishwarya Rai's daughter name as Aaradhya Bachchan.Recently, Amitabh Bachchan wrote on the twitter, 'Her name is Aaradhya'. The Big B confirmed her name, after one of his fan wanted to know the name of his grand-daughter.
 
Please Wait while comments are loading...