ಉತ್ತರಾಖಂಡ್ ಸಿಎಂ ಹೇಳಿಕೆಯನ್ನು ದಿಟ್ಟವಾಗಿ ಖಂಡಿಸಿದ ಅಮಿತಾಬ್ ಬಚ್ಚನ್ ಮೊಮ್ಮಗಳು

ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಸಾಮಾಜಿಕ ಜಾಲತಾಣದ ಸೆಲೆಬ್ರಿಟಿ ಆಗಿದ್ದಾರೆ. ಅಮಿತಾಬ್ ಪುತ್ರಿ ಶ್ವೇತಾ ನಂದಾ, ಪತಿ ನಿಖಿಲ್ ನಂದಾ ಮಗಳಾಗಿರುವ ನವ್ಯಾ ನವೇಲಿ ನಂದಾ ಈಗ ತಮ್ಮ ದಿಟ್ಟ ನಿಲವಿನಿಂದ ಮತ್ತೆ ಸುದ್ದಿಗೆ ಬಂದಿದ್ದಾರೆ.

24 ವರ್ಷ ವಯಸ್ಸಿನ ಯುವತಿ ನವ್ಯಾ ನವೇಲಿ, ಉತ್ತರಖಾಂಡ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಇತ್ತೀಚೆಗೆ ನೀಡಿದ ಹೇಳಿಕೆಯೊಂದನ್ನು ದಿಟ್ಟವಾಗಿ ಖಂಡಿಸಿದ್ದಾರೆ.

ಮಹಿಳೆಯರು 'ರಿಪ್ಡ್‌ ಜೀನ್ಸ್' ತೊಡುವ ಬಗ್ಗೆ ಉತ್ತರಖಾಂಡ ಸಿಎಂ ತೀರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಅರೆ-ಬರೆ ಹರಿದ ಜೀನ್ಸ್ ತೊಡುವ ಮಹಿಳೆ ಸಮಾಜಕ್ಕೆ ಯಾವ ಸಂದೇಶ ನೀಡಬಲ್ಲಳು' ಎಂದು ಅವರು ಪ್ರಶ್ನೆ ಮಾಡಿದ್ದರು. ಮಹಿಳೆಯರು ತೊಡುವ ಉಡುಪಿನ ಮೂಲಕ ಅವರನ್ನು 'ಜಡ್ಜ್' ಮಾಡುವ ಈ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು.

Amitabh Bachchan Daughter In Law Reply To Uttarkhand CM Statement

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನವ್ಯಾ ನವೇಲಿ, 'ನಮ್ಮ ಉಡುಪು ಬದಲಿಸಲು ಯತ್ನಿಸುವ ಮೊದಲು ನಿಮ್ಮ ಯೋಚನೆ ಬದಲು ಮಾಡಿಕೊಳ್ಳಿ. ನಾನು ನನ್ನ ರಿಪ್ಡ್ ಜೀನ್ಸ್ ಅನ್ನು ಹೆಮ್ಮೆಯಿಂದ ಧರಿಸುತ್ತೇನೆ. ಮುಂದೆಯೂ ಧರಿಸುತ್ತೇನೆ' ಎಂದು ರಿಪ್ಡ್ ಜೀನ್ಸ್ ಧರಿಸಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಟ್ಟಿತನ ಪ್ರದರ್ಶಿಸುತ್ತಿರುವ ನವ್ಯಾ ನವೇಲಿ, ''ಹರೆಯದವರ ಲೈಂಗಿಕ ಹಕ್ಕು, ಲೈಂಗಿಕ ಆರೋಗ್ಯ ಮತ್ತು ಹರೆಯದಲ್ಲಿ ಗರ್ಭಧಾರಣೆ' ವಿಷಯದ ಬಗ್ಗೆ ಕೆಲವು ದಿನಗಳ ಹಿಂದಷ್ಟೆ ಮಾತನಾಡಿದ್ದರು. ಈ ವಿಷಯವಾಗಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಸಹ ಅವರು ಪಾಲ್ಗೊಂಡಿದ್ದಾರೆ.

ನಟನಾ ಕುಟುಂಬದ ಹಿನ್ನೆಲೆಯಿದ್ದರೂ ನಟನೆ ಬಗ್ಗೆ ಆಸಕ್ತಿ ಇಲ್ಲದ ನವ್ಯಾ ನವೇಲಿಗೆ ಉದ್ಯಮಿ ಆಗಬೇಕೆಂಬ ಹೆಬ್ಬಯಕೆ. 'ನಾನು ನನ್ನ ತಂದೆಯಂತೆ ಉದ್ಯಮಿ ಆಗುತ್ತೇನೆ. ತಂದೆಗೆ ಉದ್ಯಮದಲ್ಲಿ ಸಹಾಯ ಮಾಡುತ್ತೇನೆ' ಎಂದಿದ್ದಾರೆ ನವ್ಯಾ ನವೇಲಿ.

ನವ್ಯಾ ನವೇಲಿ ಹೆಸರು ಜಾವೇದ್ ಜೆಫ್ರಿ ಮಗ ಮೀನಾದ್ ಜೆಫ್ರಿ ಜೊತೆ ಆಗಾಗ್ಗೆ ಕೇಳಿಬರುತ್ತಿರುತ್ತದೆ.

More from Filmibeat

English summary
Amitabh Bachchan daughter in law Navya Naveli gave reply to Uttarkhand CM statement about women dress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X