For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಗ್ ಬಿ ಅಮಿತಾಬ್ ಬಚ್ಚನ್

  |

  ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಮಗ ಅಭಿಷೇಕ್ ಬಚ್ಚನ್ ಜತೆ ಆಸ್ಪತ್ರೆಗೆ ದಾಖಲಾಗಿದ್ದ ನಟ ಅಮಿತಾಬ್ ಬಚ್ಚನ್, ಕೊನೆಗೂ ಕೊರೊನಾದಿಂದ ಗುಣಮುಖರಾಗಿದ್ದಾರೆ. ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ 23 ದಿನ ಚಿಕಿತ್ಸೆ ಪಡೆದಿದ್ದ ಅಮಿತಾಬ್, ಅವರಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂಬ ವರದಿ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

  ಆದರೆ ಅವರೊಂದಿಗೆ ಇದೇ ಆಸ್ಪತ್ರೆಗೆ ದಾಖಲಾಗಿದ್ದ ಅವರ ಮಗ ಅಭಿಷೇಕ್ ಬಚ್ಚನ್ ಇನ್ನೂ ಗುಣಮುಖರಾಗಿಲ್ಲ. ತಮ್ಮಲ್ಲಿ ಕೊರೊನಾ ವೈರಸ್ ಇನ್ನೂ ಪಾಸಿಟಿವ್ ಇದ್ದು, ತಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ, ಹೀಗಾಗಿ ಆಸ್ಪತ್ರೆ ವಾಸವನ್ನು ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.

  'ಕೊರೊನಾದಿಂದ ಸತ್ತು ಹೋಗಿ' ಎಂದು ಟ್ರೋಲ್ ಮಾಡಿದವರಿಗೆ ಅಮಿತಾಬ್ ಬಚ್ಚನ್ ಕ್ಲಾಸ್'ಕೊರೊನಾದಿಂದ ಸತ್ತು ಹೋಗಿ' ಎಂದು ಟ್ರೋಲ್ ಮಾಡಿದವರಿಗೆ ಅಮಿತಾಬ್ ಬಚ್ಚನ್ ಕ್ಲಾಸ್

  ತಮಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದಾಗಿ ಜುಲೈ 11ರಂದು ಅಮಿತಾಬ್ ಬಚ್ಚನ್ ತಿಳಿಸಿದ್ದರು. ನಂತರ ಮಗನೊಂದಿಗೆ ಆಸ್ಪತ್ರೆಗೆ ತೆರಳಿದ್ದರು. ಕೆಲವು ಗಂಟೆಗಳ ಬಳಿಕ ಅಭಿಷೇಕ್ ಬಚ್ಚನ್ ಅವರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಎಂಬ ವರದಿ ಕೈಸೇರಿತ್ತು. ಮರುದಿನ ಐಶ್ವರ್ಯಾ ರೈ ಹಾಗೂ ಆರಾಧ್ಯಾ ಅವರಲ್ಲಿ ಕೂಡ ಸೋಂಕು ದೃಢಪಟ್ಟಿತ್ತು. ಆದರೆ ಅವರಿಬ್ಬರೂ ಈಗಾಗಲೇ ಗುಣಮುಖರಾಗಿ ಮನೆ ಸೇರಿದ್ದಾರೆ. ಮುಂದೆ ಓದಿ...

  ವರದಿಯಲ್ಲಿ ನೆಗೆಟಿವ್

  ವರದಿಯಲ್ಲಿ ನೆಗೆಟಿವ್

  'ನನ್ನ ತಂದೆ ಅವರ ಇತ್ತೀಚಿನ ಕೋವಿಡ್ 19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಮನೆಯಲ್ಲಿ ಇದ್ದು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಹಾರೈಕೆಗಳಿಗೆ ಧನ್ಯವಾದ' ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

  ಗೆದ್ದು ಬರುತ್ತೇನೆ ಎಂದ ಅಭಿಷೇಕ್

  ಗೆದ್ದು ಬರುತ್ತೇನೆ ಎಂದ ಅಭಿಷೇಕ್

  'ದುರದೃಷ್ಟವಶಾತ್ ಕೆಲವು ಆರೋಗ್ಯ ಸಮಸ್ಯೆಗಳ ಕಾರಣ ನಾನು ಇನ್ನೂ ಕೋವಿಡ್ 19 ಪಾಸಿಟಿವ್ ಆಗಿ ಉಳಿದುಕೊಂಡಿದ್ದೇನೆ. ಹೀಗಾಗಿ ಆಸ್ಪತ್ರೆಯಲ್ಲಿಯೇ ಇದ್ದೇನೆ. ನಾನು ಇದನ್ನು ಎದುರಿಸ ಸೋಲಿಸುತ್ತೇನೆ ಮತ್ತು ಆರೋಗ್ಯವಂತನಾಗಿ ಮರಳುತ್ತೇನೆ. ಪ್ರಾಮಿಸ್ ಎಂದು ಅಭಿಷೇಕ್, ತಮ್ಮ ಕುಟುಂಬಕ್ಕೆ ಒಳಿತನ್ನು ಆಶಿಸಿರುವ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

  ಆಸ್ಪತ್ರೆಯಲ್ಲಿ ಕುಳಿತು ಕಣ್ಣೀರಿಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್ಆಸ್ಪತ್ರೆಯಲ್ಲಿ ಕುಳಿತು ಕಣ್ಣೀರಿಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್

  ಅಮಿತಾಬ್ ಬಚ್ಚನ್ ಪೋಸ್ಟ್

  ಅಮಿತಾಬ್ ಬಚ್ಚನ್ ಪೋಸ್ಟ್

  ಅಮಿತಾಬ್ ಬಚ್ಚನ್ ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ನನ್ನಲ್ಲಿ ಕೋವಿಡ್ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಮನೆಗೆ ಮರಳಿ ಕ್ವಾರೆಂಟೈನ್ ಆಗಿರುತ್ತೇನೆ ಎಂದು ತಿಳಿಸಿರುವ ಅವರು ಅಭಿಮಾನಿಗಳು, ಕುಟುಂಬದವರು ಮತ್ತು ಸ್ನೇಹಿತರ ಹಾರೈಕೆಗೆ ಹಾಗೂ ನಾನಾವತಿ ಆಸ್ಪತ್ರೆಯ ಆರೈಕೆಗೆ ಕೃತಜ್ಞತೆ ಅರ್ಪಿಸಿದ್ದಾರೆ.

  ಗುಣಮುಖರಾದ ಐಶ್ವರ್ಯಾ, ಆರಾಧ್ಯಾ

  ಗುಣಮುಖರಾದ ಐಶ್ವರ್ಯಾ, ಆರಾಧ್ಯಾ

  ಅಭಿಷೇಕ್ ಪತ್ನಿ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾ ಅವರಲ್ಲಿಯೂ ಜುಲೈ 12ರಂದು ಬಂದ ವರದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಎಂದಿತ್ತು. ಆದರೆ ಅವರು ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದರು. ಜುಲೈ 17ರಂದು ಆಸ್ಪತ್ರೆಗೆ ಇಬ್ಬರೂ ದಾಖಲಾಗಿದ್ದರು. ನಂತರ ಜುಲೈ 28ರಂದು ಗುಣಮುಖರಾಗಿ ಮನೆಗೆ ಮರಳಿದ್ದರು.

  ಮರಳಿ ಮನೆಗೆ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಮರಳಿ ಮನೆಗೆ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ

  English summary
  Bollywood star Amitabh Bachchan has tested negative for coronavirus and has been discharged from Mumbai's Nanavati hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X