ಐಶ್ವರ್ಯ ರೈಗೆ ಡಿವೋರ್ಸ್ ಕೊಡ್ತಾರಾ ಅಭಿಷೇಕ್ ಬಚ್ಚನ್ ? ಅಮಿತಾಬ್ ಬಚ್ಚನ್ ಹೇಳಿದ್ದೇನು ?
ಕೆಲವರು ಪ್ರೇಮ ಪಾಶದಲ್ಲಿ ಸಿಲುಕಿ ಕಾಯಾ, ವಾಚಾ, ಮನಸಾ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ, ಮದುವೆಯಾದ ನಂತರ ಪರಸ್ಪರ ಅಸಹನೆ ಮತ್ತು ಅನುಮಾನ ಬೆಳೆಸಿಕೊಳ್ಳುತ್ತಾರೆ. ಆ ನಂತರ ಇನ್ನೂ ಸಾಧ್ಯವೇ ಇಲ್ಲ ಎಂದು ವಿಚ್ಛೇದನ ಪಡೆಯುತ್ತಾರೆ. ಪ್ರೀತಿಸಿ ಮದುವೆಯಾದವರು, ಮದುವೆಯಾಗಲೆಂದೇ ಪ್ರೀತಿಸಿದವರು ಹೀಗೇ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಸದ್ಯಕ್ಕೆ ಇಲ್ಲದಿದ್ದರೂ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ವಿಚ್ಛೇದನದ ಕುರಿತು ಹರಡಿರುವ ಅಂತೆ-ಕಂತೆಯ ಸುದ್ದಿಗಳ ಬಗ್ಗೆ ಅಮಿತಾಬ್ ಬಚ್ಚನ್ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಈ ವಿಚಾರದ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.
ಹೌದು, ಅಸಲಿಗೆ 82ರ ಪ್ರಾಯದಲ್ಲಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟಿವ್ ಆಗಿರುತ್ತಾರೆ. ಸಮಯ ಸಿಕ್ಕಾಗ ತಮ್ಮ ಬ್ಲಾಗ್‌ನಲ್ಲಿ ಬರಹಗಳನ್ನು ಬರೆಯುತ್ತಾರೆ. ಈ ಬ್ಲಾಗ್‌ನಲ್ಲಿ ಅಮಿತಾಬ್ ಈಗ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ದಾಂಪತ್ಯ ಜೀವನದ ಕುರಿತು ಬರೆದುಕೊಂಡಿದ್ದಾರೆ. ಮಾಧ್ಯಮಗಳು ಬಳಸುವ ಪ್ರಶ್ನಾರ್ಥಕ ಚಿಹ್ನೆಯನ್ನು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅಮಿತಾಬ್ ಬಚ್ಚನ್, ಅಭಿಷೇಕ್ ಮತ್ತು ಐಶ್ವರ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎಂದು ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿ ಬರೆಯಲಾಗುತ್ತೆ. ವಿಷಯ ಆಧಾರ ರಹಿತವಾಗಿದ್ದರೂ ಕೂಡ ಅದು ಓದುಗರ ಮನಸಿನಲ್ಲಿ ಅನುಮಾನದ ಬೀಜವನ್ನು ಬಿತ್ತುತ್ತೆ ಎಂದಿದ್ದಾರೆ.
ಮುಂದುವರೆದು ನಿಮಗೆ ಇಷ್ಟ ಬಂದಿದ್ದನ್ನೇ ನೀವು ಬರೆದುಕೊಳ್ಳಿ ಆದರೆ ನೀವು ಪ್ರಶ್ನಾರ್ಥಕ ಚಿಹ್ನೆ ಹಾಕಿದಾಗ ಅದು ಪ್ರಶ್ನೆಯೇ ಆಗಿರುತ್ತೆ. ಆದರೆ ಜನರು ಆ ಪ್ರಶ್ನೆಗೆ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಸತ್ಯಕ್ಕೆ ದೂರವಾದ ಸುದ್ದಿಗಳನ್ನು ನಂಬುತ್ತಾರೆ.. ಇದರಿಂದ ವಿಚಾರ ಇನ್ನೂ ದೊಡ್ಡದಾಗುತ್ತಾ ಹೋಗುತ್ತೆ, ನಿಮ್ಮ ಬರವಣಿಗೆಗೆ ಬೆಲೆ ಬರುತ್ತೆ ಆದರೆ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತೆ ಎಂದಿರುವ ಅಮಿತಾಬ್ ಬಚ್ಚನ್ ನಾನು ನಿಮ್ಮ ವೃತ್ತಿಯನ್ನು ಗೌರವಿಸುತ್ತೇನೆ, ನೀವು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯ ಪ್ರಶಂಸೆಯನ್ನು ಮಾಡುತ್ತೇನೆ ಆದರೆ ಸುಳ್ಳು ಮತ್ತು ಉಪಯೋಗಿಸುವ ಪ್ರಶ್ನಾರ್ಥಕ ಚಿಹ್ನೆ ದಾರಿ ತಪ್ಪಿಸುತ್ತೆ ಎಂದಿದ್ದಾರೆ. ಸುಳ್ಳು ಮಾಹಿತಿಯನ್ನು ಹರಡುವುದರಿಂದ ಜನರ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ. ಈ ಮೂಲಕ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಜೀವನದ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು ಎನ್ನುವುದನ್ನು ಅಮಿತಾಬ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ.
ಇನ್ನೂ ನಾನು ನನ್ನ ಕುಟುಂಬದ ಕುರಿತು ಮೊದಲಿಂದ ಹೆಚ್ಚು ಮಾತನಾಡಲು ಬಯಸುವುದಿಲ್ಲ ಯಾಕೆಂದರೆ ಅದು ನಮ್ಮ ಖಾಸಗಿ ವಿಚಾರ ಎಂದು ಕೂಡ ಹೇಳಿರುವ ಅಮಿತಾಬ್ ಬಚ್ಚನ್, ಊಹಾಪೋಹಳು ಯಾವತ್ತು ಇದ್ದರೂ ಕೂಡ ಊಹಾಪೋಹಗಳು ಅಷ್ಟೇ ಎಂದು ಹೇಳಿದ್ದಾರೆ. ಪರಿಶೀಲನೆ ಮಾಡದೇ ಅಜೆಂಡಾಗಳಿಗಾಗಿ ಹೇಳಲಾದ ವಿಚಾರ ಯಾವತ್ತು ಸುಳ್ಳೇ ಎಂದು ಹೇಳಿದ್ದಾರೆ. ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರ ವಿರುದ್ಧ ಈ ಮೂಲಕ ಕಿಡಿಯನ್ನು ಅಮಿತಾಬ್ ಬಚ್ಚನ್ ಕಾರಿದ್ದಾರೆ.
ಅಂದ್ಹಾಗೇ ಮೊನ್ನೆಯಷ್ಟೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಮುದ್ದಿನ ಮಗಳು ಆರಾಧ್ಯ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಇತ್ತು. ಆದರೆ ಈ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಕೂಡ ಶುಭ ಕೋರದ ಅಭಿಷೇಕ್ ಬಚ್ಚನ್ ಮಗಳ ಬರ್ತ್‌ಡೇ ಸಂಭ್ರಮದಿಂದ ಕೂಡ ದೂರ ಇದ್ದರು. ಹೀಗಾಗಿ ಅನೇಕರು ಅಭಿಷೇಕ್ ಮತ್ತು ಐಶ್ವರ್ಯ ಕುರಿತು ಹರಡಿರುವ ಸುದ್ದಿಯನ್ನು ನಿಜವೆಂದು ಅಂದುಕೊಂಡಿದ್ದರು. ಚರ್ಚೆ ಮಾಡುತ್ತಿದ್ದರು. ಇವರೆಲ್ಲರಿಗೆ ಈಗ ಅಮಿತಾಬ್ ಬಚ್ಚನ್ ತಮ್ಮ ಬರಹದ ಮೂಲಕ ಉತ್ತರ ನೀಡಿದ್ದಾರೆ. ವಿಚ್ಛೇದನದ ವಿಚಾರ ಸುಳ್ಳು ಎಂದಿದ್ದಾರೆ.


Click it and Unblock the Notifications











