ಮೊದಲ ಕಾರನ್ನು ಮರಳಿ ಪಡೆದು ಭಾವುಕರಾದ ಬಿಗ್ ಬಿ ಅಮಿತಾಬ್
ಮೊದಲ ಕೆಲಸ, ಮೊದಲ ಸಂಬಳ, ಮೊದಲ ಕಾರು ಹೀಗೆ ಜೀವನದ ಸಾಕಷ್ಟು ಮೊದಲುಗಳನ್ನು ಯಾರಿಂದನು ಮರೆಯಲು ಸಾಧ್ಯವಿಲ್ಲ. ಸದ್ಯ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಮೊದಲ ನೆನಪನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ಅಮಿತಾಬ್ ಮೊದಲು ಖರೀದಿಸಿದ ಫ್ಯಾಮಿಲಿ ಕಾರ್ ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಇತ್ತೀಚಿಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಹಳದಿ ಬಣ್ಣದ ಫೋರ್ಡ್ ಪ್ರಿಫೆಕ್ಟ್ ಕಾರಿನ ಫೋಟೋವನ್ನು ಹಂಚಿಕೊಂಡಿದ್ದರು. "ಕೆಲವು ಸಂದರ್ಭ ನಿಮ್ಮನ್ನು ಮೂಕರನ್ನಾಗಿಸುತ್ತೆ. ನನಗೂ ಈಗ ಹಾಗೆ ಆಗಿದೆ. ಏನೊ ವ್ಯಕ್ತಪಡಿಸಲು ಪ್ರಯತ್ನ ಪಡುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ" ಎಂದು ಹೇಳಿ ಕಾರಿನ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಅಮಿತಾಬ್ ಮೊದಲ ಫ್ಯಾಮಿಲಿ ಕಾರು
ಅಮಿತಾಬ್ ಅವರು ಈ ಪ್ರೀತಿಯ ಕಾರು ಕೊಂಡುಕೊಂಡಿದ್ದು 1950ರಲ್ಲಿ. ಇದು ಅಮಿತಾಬ್ ಅವರ ಮೊದಲ ಫ್ಯಾಮಿಲಿ ಕಾರು. ಅಲಹಾಬಾದ್ ನಲ್ಲಿದ್ದ ಸಮಯದಲ್ಲಿ ಅಮಿತಾಬ್ ಈ ಕಾರನ್ನು ಖರೀದಿಸಿದ್ದರು. ಅಮಿತಾಬ್ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಖ್ಯಾತಿಗಳಿಸುತ್ತಿದ್ದಂತೆ ಈ ಕಾರನ್ನು ಮಾರಾಟ ಮಾಡುತ್ತಾರಂತೆ.

ಅಮಿತಾಬ್ ಕೈ ಸೇರಿದೆ ಮೊದಲ ಕಾರು
ಸಾಕಷ್ಟು ನೆನಪು ತುಂಬಿರುವ ಆ ಹಳೆಯ ಕಾರು ಈಗ ಮತ್ತೆ ಅಮಿತಾಬ್ ಕೈ ಸೇರಿದೆ. ಉತ್ತರ ಪ್ರದೇಶದ ನಂಬರ್ ಇರುವ ಈ ಕಾರಿಗಾಗಿ ಅಮಿತಾಬ್ ಗೆಳೆಯ ಸಾಕಷ್ಟು ಹುಡುಕುತ್ತಿದ್ದರಂತೆ. ಕೊನೆಗೂ ಅಮಿತಾಬ್ ಅವರ ಪ್ರೀತಿಯ ಕಾರನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿಗೆ ಮರುಜೀವ ನೀಡಿ ಅಮಿತಾಬ್ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಗೆಳೆಯನ ವಿಶೇಷ ಗಿಫ್ಟ್ ನೋಡಿ ಅಮಿತಾಬ್ ಭಾವುಕರಾಗಿದ್ದಾರೆ.

ಮೊದಲ ಕಾರಿನ ಮೇಲೆ ವಿಶೇಷ ಪ್ರೀತಿ
ಸಾಕಷ್ಟು ನೆನಪುಗಳನ್ನು ಹೊಂದಿರುವ ಈ ಕಾರಿನ ಬಗ್ಗೆ ಅಮಿತಾಬ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಂತಸದ ಜತೆಗೆ ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಅಮಿತಾಬ್ ಬಳಿ ಸಾಕಷ್ಟು ದುಬಾರಿ ಕಾರುಗಳಿವೆ. ಆದರೆ ಮೊದಲು ಪಡೆದ ಕಾರಿನ ಮೇಲೆ ಅಮಿತಾಬ್ ಗೆ ವಿಶೇಷ ಪ್ರೀತಿ.

ಫೋರ್ಡ್ ಪ್ರಿಫೆಕ್ಟ್ ಕಾರಿನ ಬಗ್ಗೆ
ಫೋರ್ಡ್ ಪ್ರಿಫೆಕ್ಟ್ ಬ್ರಿಟಿಶ್ ಕಾರು 1938 ಮತ್ತು 1961 ರಲ್ಲಿ ಮಾರುಕಟ್ಟೆಯಲ್ಲಿತ್ತು. ಇದು ಫೋರ್ಡ್ ಪಾಪ್ಯುಲರ್ ಮತ್ತು ಫೋರ್ಡ್ ಆಂಗ್ಲಿಯಾ ಮಾದರಿಯನ್ನು ಆಧರಿಸಿದ ದುಬಾರಿ ಕಾರಾಗಿದೆ. 1941ರಲ್ಲಿಯೆ ಉತ್ಪಾದನೆ ಸ್ಥಗಿತಗೊಂಡಿತ್ತು. 1945 ರಲ್ಲಿ ಮತ್ತೆ ಮಾರುಕಟ್ಟೆಗೆ ಬಂದ ಫೋರ್ಡ್ ಪ್ರಿಫೆಕ್ಟ್ ಕಾರು 1961ರವರೆಗೂ ಮಾರುಕಟ್ಟೆಯಲ್ಲಿ ಇತ್ತು. ಈ ದುಬಾರಿ ಕಾರು ಅಮಿತಾಬ್ ಬಳಿ 1950ರಲ್ಲಿಯೆ ಇತ್ತು.


Click it and Unblock the Notifications











