For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್ ಏನೂ ಮಾಡಿಲ್ಲ ಎಂದವರಿಗೆ ಸಮಾಜ ಸೇವೆಯ ಪಟ್ಟಿ ನೀಡಿದ ನಟ

  |

  ಸಿನಿಮಾ ನಟ-ನಟಿಯರ ಸಾಮಾಜಿಕ ಬದ್ಧತೆಯ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಓಟು ಹಾಕಿ ಗೆಲ್ಲಿಸಿದ ರಾಜಕಾರಣಿಗಳನ್ನು ಕೇಳಬೇಕಾದ ಎಷ್ಟೋ ಪ್ರಶ್ನೆಗಳನ್ನು ನಟ-ನಟಿಯರಿಗೆ ಕೇಳುತ್ತಾರೆ ಜನ. ಇದು ಮೊದಲಿನಿಂದಲೂ ಹೀಗೆಯೇ ರೂಢಿಯಾಗಿಬಿಟ್ಟಿದೆ.

  ಸಂಕಷ್ಟದ ಸಮಯದಲ್ಲಿ ನೆರವಿಗೆ ಬರಬೇಕಾದ ಸರ್ಕಾರವನ್ನು ಪ್ರಶ್ನಿಸುವುದರ ಬದಲಿಗೆ ಯಾವ ನಟ ಎಷ್ಟು ದಾನ ನೀಡಿದ, ಯಾವ ನಟ ಎಷ್ಟು ಸಹಾಯ ಮಾಡಿದ ಎಂದು ನಟರನ್ನು ಪ್ರಶ್ನಿಸುವ ಪದ್ಧತಿ ಮೊದಲಿನಿಂದಲೂ ಇದೆ. ಹಲವರು ನಟರು ಪ್ರತಿದಿನ ಸಾಮಾಜಿಕ ಬದ್ಧತೆಯ ಪ್ರಶ್ನೆಗಳನ್ನು ಎದುರಿಸುತ್ತಲೇ ಇರುತ್ತಾರೆ. ನಟ ಅಮಿತಾಬ್ ಬಚ್ಚನ್ ಸಹ ಇದಕ್ಕೆ ಹೊರತಲ್ಲ.

  ಕೋವಿಡ್ ಸಂಕಷ್ಟಕ್ಕೆ ಅಮಿತಾಬ್ ಬಚ್ಚನ್ ಯಾವುದೇ ಸಹಾಯ ಮಾಡಿಲ್ಲ ಎಂದು ಕೆಲವರು ಬಚ್ಚನ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ತಮ್ಮ ಬ್ಲಾಗ್‌ನಲ್ಲಿ ಉತ್ತರಿಸಿರುವ ಅಮಿತಾಬ್ ಬಚ್ಚನ್, ತಾವು ಎರಡು ಕೋಟಿ ಹಣವನ್ನು ಕೋವಿಡ್ ವಿರುದ್ಧ ಹೋರಾಟಕ್ಕೆ ನೀಡಿರುವುದಾಗಿ ಹೇಳಿದ್ದಾರೆ. 'ಮಾಡಿರುವ ಸಹಾಯವನ್ನು ಹೀಗೆ ಪಟ್ಟಿ ಮಾಡಿ ಬಹಿರಂಗ ಹೇಳಿಕೊಳ್ಳಲು ಮುಜುಗರವಾಗುತ್ತದೆ' ಎಂದಿದ್ದಾರೆ ಬಚ್ಚನ್.

  ಕೋವಿಡ್‌ಗೆ ಮಾಡಿದ ಸಹಾಯವಷ್ಟೆ ಅಲ್ಲದೆ ತಾವು ಈ ಹಿಂದೆ ಮಾಡಿರುವ ಕೆಲವು ಉತ್ತಮ ಸಾಮಾಜಿಕ ಕಾರ್ಯದ ಪಟ್ಟಿಯನ್ನೂ ಕೊಟ್ಟಿದ್ದಾರೆ ಅಮಿತಾಬ್, '1500 ರೈತರ ಬೆಳೆಸಾಲವನ್ನು ನನ್ನ ಸ್ವಂತ ಹಣದಿಂದ ತೀರಿಸಿದ್ದೇನೆ. ಅವರುಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದ್ದೇನೆ' ಎಂದಿದ್ದಾರೆ ಬಚ್ಚನ್.

  ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿದಿನ ಕನಿಷ್ಟ 5000 ಜನ ಕಾರ್ಮಿಕರಿಗೆ ಉಚಿತವಾಗಿ ಆಹಾರ ನೀಡಿದ್ದಾಗಿ ಹೇಳಿದ್ದಾರೆ. ಈ ಉಚಿತ ಆಹಾರ ಅಭಿಯಾನವನ್ನು ಒಂದು ತಿಂಗಳವರೆಗೆ ಮಾಡಿದ್ದಾಗಿ ಬಚ್ಚನ್ ಹೇಳಿದ್ದಾರೆ.

  ಯುಪಿ, ಬಿಹಾರಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರಿಗೆಂದು ಕನಿಷ್ಟ 30 ಬಸ್ಸುಗಳ ವ್ಯವಸ್ಥೆ ಮಾಡಿದ್ದೆ. ಅವರಿಗೆ ಊಟ, ನೀರು, ಕಾಲಿಗೆ ಚಪ್ಪಲಿ ವ್ಯವಸ್ಥೆ ಮಾಡಿದ್ದೆ. 2800 ಕಾರ್ಮಿಕರನ್ನು ಮುಂಬೈನಿಂದ ಉತ್ತರ ಪ್ರದೇಶಕ್ಕೆ ಕರೆತರಲು ಇಡೀಯ ರೈಲನ್ನು ಬುಕ್ ಮಾಡಿದ್ದೆ. ಜೊತೆಗೆ 3 ಇಂಡಿಗೋ ಪ್ಲೇನ್‌ಗಳ ಮೂಲಕ ಸುಮಾರು 540ಕ್ಕೂ ಹೆಚ್ಚು ಕಾರ್ಮಿಕರನ್ನು ಸ್ವಂತ ಸ್ಥಳಗಳಿಗೆ ಕಳುಹಿಸಿದ್ದೇನೆ ಎಂದಿದ್ದಾರೆ ಅಮಿತಾಬ್.

  ಬಾಹುಬಲಿ ಜೋಡಿಯನ್ನು ಮತ್ತೆ ಒಂದು ಮಾಡಿದ ಪ್ರಶಾಂತ್ ನೀಲ್ | Filmibeat Kannada

  ದೆಹಲಿಯಲ್ಲಿ ಒಂದು ಡಯಾಗ್ನಾಸ್ಟಿಕ್ ಸೆಂಟರ್ ಅನ್ನು ಸರ್ಕಾರಕ್ಕೆ ಕೋವಿಡ್ ಸಮಯದಲ್ಲಿ ಬಳಸಿಕೊಳ್ಳಲು ನೀಡಿದ್ದೇನೆ. ಜೊತೆಗೆ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಇಬ್ಬರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದೇನೆ ಎಂದು ಪಟ್ಟಿ ನೀಡಿದ್ದಾರೆ ಅಮಿತಾಬ್.

  English summary
  Actor Amitabh Bachchan gave list of charity work he did in the COVID 19 crisis situation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X