ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ಅಮಿತಾಭ್

ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಅಮಿತಾಭ್ ಬಚ್ಚನ್ ನಿನ್ನೆ ರಾತ್ರಿ ಡಿಸ್ಜಾರ್ಸ್ ಆಗಿದ್ದಾರೆ. ಪುತ್ರ ಅಭಿಷೇಕ್ ಬಚ್ಚನ್, ಪತ್ನಿ ಜಯಾ ಬಚ್ಚನ್ ಜೊತೆಗೆ ಮನೆಗೆ ಮರಳಿದ್ದಾರೆ.

ಲಿವರ್ ಸಮಸ್ಯೆ ಹೊಂದಿರುವ ಬಚ್ಚನ್ ಮಂಗಳವಾರ ಮಧ್ಯಾಹ್ನ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಮೂರು ದಿನ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡಿದ್ದರು. ನಿನ್ನೆ ಅಮಿತಾಭ್ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಡಿಸ್ಜಾರ್ಸ್ ಮಾಡಲಾಗಿದೆ.

ಬಚ್ಚನ್ ಲಿವರ್ ಸಮಸ್ಯೆ ಹೊಂದಿರುವುದು ನಿಜ ಆದರೆ, ಆ ಕಾರಣಕ್ಕೆ ಆಸ್ಪತ್ರೆಗೆ ತೆರಳಿರಲಿಲ್ಲ, ಇದೊಂದು ರೆಗ್ಯೂಲರ್ ಚೆಕಪ್ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅಮಿತಾಬ್ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಇದ್ದ ಗೊಂದಲ ನಿವಾರಣೆಯಾಗಿದೆ.

Amitabh Bachchan Goes Discharged From Nanavati Hospital In Mumbai

ಅಮಿತಾಬ್ ಅನೇಕ ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. 1982 ಕೂಲಿ ಚಿತ್ರದ ಚಿತ್ರೀಕರಣ ಸಮಯದಲ್ಲಿ ಅಪಘಾತವಾದಾಗ ಅಮಿತಾಬ್ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಮಯದಲ್ಲಿ ರಕ್ತ ಪಡೆದ ಅಮಿತಾಭ್ ರಕ್ತದಾನಿಯಲ್ಲಿದ್ದ ಹೆಪಟೈಟೀಸ್ ಬಿ ಅಮಿತಾಬ್ ದೇಹ ಸೇರಿಕೊಂಡಿತ್ತು.

ಅಲ್ಲಿಂದ ಅಮಿತಾಬ್ ಹೆಪಟೈಟೀಸ್ ಬಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿಗ್ ಬಿ ಲಿವರ್ ಕೇವಲ 25ರಷ್ಟು ಮಾತ್ರ ಕೆಲಸ ಮಾಡುತ್ತಿರುವುದಂತೆ. ಈ ಬಗ್ಗೆ ಸ್ವತಃ ಅಮಿತಾಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಮಿತಾಬ್ ಬೇಗ ಗುಣಮುಖರಾಗಲಿ ಎನ್ನುವುದು ಅಭಿಮಾನಿಗಳ ಆಶಯ.

More from Filmibeat

English summary
Bollywood actor Amitabh Bachchan Goes discharged From Nanavati Hospital in Mumbai. Superstar has been hospitalised since three days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X