ಮತ್ತೊಮ್ಮೆ ವಿಭಿನ್ನ ಗೆಟಪ್ ನಲ್ಲಿ ಅಮಿತಾಭ್ ಬಚ್ಚನ್ ದರ್ಶನ
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈಗ ಮತ್ತೊಮ್ಮೆ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಉದ್ದ ದಾಡಿ ಬಿಟ್ಟಿರುವ ಹಣ್ಣು ಹಣ್ಣು ಮುದುಕನಾಗಿ ಅಮಿತಾಭ್ ಮಿಂಚಿದ್ದಾರೆ. ಸಾಕಷ್ಟು ಡಿಫ್ರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಮಿತಾಭ್ ಈಗ 'ಗುಲಾಬೋ ಸಿತಾಬೋ' ಚಿತ್ರದಲ್ಲಿ ಮತ್ತೊಂದು ಅವತಾರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಅಮಿತಾಭ್ ಗೆ 76 ವಯಸ್ಸಾದರು ಆದರು ಈ ವಯಸ್ಸಿನಲ್ಲಿಯೊ ಅವರ ನಟನ ಹಸಿವು ಎಷ್ಟಿರ ಮಟ್ಟಿಗಿದೆ ಎಂದರೆ, ಅವರ ಪಾತ್ರಗಳ ಮೂಲಕವೆ ಗೊತ್ತಾಗುತ್ತಿದೆ. ಪಿಕು, ಶಮಿತಾಭ್, ವಜೀರ್ ಮುಂತಾದ ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಜೊತೆಗೆ ಭಾವತಾನ್ಮಕ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತ ಬಂದಿರುವ ಬಿಗ್ ಬಿ ಈಗ ಮತ್ತೊಮ್ಮೆ ಹೊಸ ಅವತಾರದಲ್ಲಿ ದರ್ಶನ ನೀಡಿರುವುದು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಈ ಚಿತ್ರದಲ್ಲಿ ಅಮಿತಾಭ್ ಗೆ ವಿಶೇಷವಾದ ಮೇಕಪ್ ಮಾಡಿಸಲಾಗಿದೆ. ದಪ್ಪನೆಯ ಮೂಗು ಮತ್ತು ವಿಭಿನ್ನ ಕಾಸ್ಟ್ಯೂಮ್ ಧರಿಸಿರುವ ಅಮಿತಾಭ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಿಕು ನಂತರ ಶೂಜಿತ್ ಸರ್ಕಾರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ.
ಚಿತ್ರದಲ್ಲಿ ನಟ ಆಯುಷ್ಮಾನ್ ಖುರಾನ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸದ್ಯ ಅಮಿತಾಭ್ ವಿಭಿನ್ನ ಗೆಟಪ್ ಮೂಲಕವೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ 'ಗುಲಾಬೋ ಸಿತಾಬೋ' ಮುಂದಿನ ವರ್ಷ ಏಪ್ರಿಲ್ ಗೆ ತೆರೆಗೆ ಬರುತ್ತಿದೆ.


Click it and Unblock the Notifications











