»   »  ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ?

ಬಿಗ್ ಬಿಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತೇ?

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
ನಟ ಅಮಿತಾಬ್ ಬಚ್ಚನ್ ಗೆ ಶ್ರೀದೇವಿಯ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ | Filmibeat Kannada

ಸೂಪರ್ ಸ್ಟಾರ್ ಶ್ರೀದೇವಿಯವರ ನಿಧನದ ವಾರ್ತೆ ಸ್ಫೋಟಗೊಳ್ಳುವುದಕ್ಕೂ ಮುಂಚಿತವಾಗಿ ಬಿಗ್ ಬಿ ಅಮಿತಾಬ್ ಅವರು ಮಾಡಿದ್ದ ಒಂದು ಟ್ವೀಟ್ ಈಗ ಬಹು ಚರ್ಚೆಗೊಳಲಾಗುತ್ತಿದೆ. ಶ್ರೀದೇವಿಯ ಸಾವಿನ ಮುನ್ಸೂಚನೆ ಬಿಗ್ ಬಿ ಸಿಕ್ಕಿತ್ತೇ? ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.

ದುಬೈನಲ್ಲಿ ಮದುವೆ ಸಮಾರಂಭದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಶ್ರೀದೇವಿಯವರು ನಿಧನರಾದ ಸುದ್ದಿ ಹಬ್ಬುತ್ತಿದ್ದಂತೆ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು,ಸೆಲೆಬ್ರಿಟಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಆದರೆ, ಶ್ರೀದೇವಿ ಸಾವಿಗೂ ಕೆಲ ನಿಮಿಷಗಳ ಮುನ್ನ ನಟ ಅಮಿತಾಬ್ ಬಚ್ಚನ್ ಮಾಡಿದ್ದ ಟ್ವೀಟ್ ಚರ್ಚೆಗೆ ಕಾರಣವಾಗಿದೆ.

ಶ್ರೀದೇವಿ ಅಗಲಿಕೆ : ನೋವಿನಲ್ಲಿ ನಟ ಶಿವರಾಜ್ ಕುಮಾರ್ ಮಾತು

ಈ ನಡುವೆ ಶ್ರೀದೇವಿಯವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಮುಂಬೈಗೆ ಕರೆ ತರುವ ವ್ಯವಸ್ಥೆಯನ್ನು ಪತಿ ಬೋನಿ ಕಪೂರ್ ಮಾಡುತ್ತಿದ್ದು, ಅಂತ್ಯಕ್ರಿಯೆಯ ಸಮಯ ಇನ್ನೂ ನಿರ್ಧಾರವಾಗಿಲ್ಲ. ಪುತ್ರಿ ಜಾಹ್ನವಿ ತಮ್ಮ ಚೊಚ್ಚಲ ಚಿತ್ರ ಶೂಟಿಂಗ್ ನಲ್ಲಿದ್ದರು, ಪತಿ ಬೋನಿ ಕಪೂರ್, ಮತ್ತೊಬ್ಬ ಪುತ್ರಿ ಖುಷಿ ಅವರು ಕೂಡಾ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬಿಗ್ ಬಿ ಅಮಿತಾಬ್ ಟ್ವೀಟ್ ಮಾಡಿದ್ದೇನು?

"ಯಾಕೋ ಗೊತ್ತಾಗುತ್ತಿಲ್ಲ. ಒಂದು ರೀತಿಯ ತಳಮಳ, ಹೆದರಿಕೆ ಉಂಟಾಗುತ್ತಿದೆ" ಎಂದು ಬಿಗ್ ಬಿ ಅಮಿತಾಬ್ ಅವರು ಫೆ. 25ರ ರಾತ್ರಿ 1.15ರ ಸುಮಾರಿಗೆ ಟ್ವೀಟ್ ಮಾಡಿದ್ದರು. ಇದಾದ ಸುಮಾರು ಕೆಲ ನಿಮಿಷಗಳ ಬಳಿಕ ಶ್ರೀದೇವಿ ಅವರ ಸಾವಿನ ಸುದ್ದಿ ಹೊರ ಬಂದಿತು.

ಶ್ರೀದೇವಿಯನ್ನು ಬಿ ಟೌನ್ ರಾಣಿ ಪಟ್ಟಕ್ಕೆ ಏರಿಸಿದ 10 ಸಿನಿಮಾಗಳು

ಅಮಿತಾಬ್ ಅವರ 'ಸಿಕ್ತ್ ಸೆನ್ಸ್'

‘ಬಿಗ್ ಬಿ' ಅಮಿತಾಬ್ ಅವರ 'ಸಿಕ್ತ್ ಸೆನ್ಸ್' ಅವರನ್ನು ಎಚ್ಚರಿಸಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.

ಕೊನೆಯುಸಿರೆಳೆದ ಶ್ರೀದೇವಿ: ಮಮ್ಮಲ ಮರುಗಿದ ದಕ್ಷಿಣ ಭಾರತ ಚಿತ್ರರಂಗ

ನೆಗಟಿವ್ ವೈಬ್ಸ್ ಎಂದು ಬಿಗ್ ಬಿ ಟ್ವೀಟ್

ನೆಗಟಿವ್ ವೈಬ್ಸ್ ಎಂದು ಬಿಗ್ ಬಿ ಟ್ವೀಟ್ ಮಾಡಿದ 20 ನಿಮಿಷದಲ್ಲೇ ಸಾವಿನ ಸುದ್ದಿ ಬಂದಿದೆ.

ಶ್ರೀದೇವಿ ನಮಗೆಲ್ಲ ದೊಡ್ಡ ಸ್ಫೂರ್ತಿ ಎಂದ ಕನ್ನಡ ಚಿತ್ರರಂಗದ ನಟಿಯರು

ನಿಮ್ಮ ಸಹನಟಿ ನಿಮ್ಮ ದುಃಖ

ನಿಮ್ಮ ಸಹನಟಿ ನಿಮ್ಮ ದುಃಖ ಅರ್ಥವಾಗುತ್ತದೆ. ನಿಮಗೆ ದುಃಖ ಭರಿಸುವ ಶಕ್ತಿ ಕೊಡಲಿ

ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ಫೋಟೋ: ಖುಷಿಖುಷಿಯಾಗಿದ್ದ ನಟಿ ಇನ್ನಿಲ್ಲ!

ಬಿಗ್ ಬಿಗೆ ಮುನ್ಸೂಚನೆ ಸಿಕ್ಕಿತ್ತೇ

ಬಿಗ್ ಬಿಗೆ ಮುನ್ಸೂಚನೆ ಸಿಕ್ಕಿತ್ತೇ ಅಥವಾ ಸಾವಿನ ಸುದ್ದಿ ಮೊದಲೆ ಸಿಕ್ಕಿತ್ತೆ ನಂತರ ಮಾಧ್ಯಮಗಳಿಗೆ ಸುದ್ದಿ ಬಂತೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.

'ಡ್ರೀಮ್ ಗರ್ಲ್' ಶ್ರೀದೇವಿ ವಿಧಿವಶ: ಕಿಚ್ಚ ಸುದೀಪ್ ಹೃದಯ ಛಿದ್ರ

English summary
Amitabh Bachchan Had an Intuition Sridevi's Demise, Tweeted that h was feeling uneasy before the news of actress Sridevi's demise was reported.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada