2021ಕ್ಕೆ ನಿಂಬೆಹಣ್ಣು, ಮೆಣಸು ತೂಗುಹಾಕಿದ ಅಮಿತಾಬ್ ಬಚ್ಚನ್; ಫೋಟೋ ವೈರಲ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೊಸ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಅಮಿತಾಬ್ ಸದಾ ಒಂದಲ್ಲೊಂದು ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ 2021ರ ಬಗ್ಗೆ ಮಾಡಿರುವ ಬಿಗ್ ಬಿ ಹೊಸ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಮಿತಾಬ್ ಬಚ್ಚನ್ 2021ರ ಬಗ್ಗೆ ಪೋಸ್ಟ್ ಮಾಡಿ, 2021ಕ್ಕೆ ನಿಂಬೆಹಣ್ಣು, ಮೆಣಸನ್ನು ದಾರದಲ್ಲಿ ತೂಗುಹಾಕಿದ್ದಾರೆ. ದುಷ್ಟಕಣ್ಣುಗಳಿಂದ 2021ಅನ್ನು ರಕ್ಷಿಸುವಂತೆ ನಿಂಬು ಮತ್ತು ಮೆಣಸು ಕಟ್ಟಿದ್ದಾರೆ. ಈ ಪೋಸ್ಟ್ ಅನ್ನು ಅನೇಕರು ಶೇರ್ ಮಾಡುತ್ತಿದ್ದಾರೆ. ಅಮಿತಾಬ್ ಈ ಪೋಸ್ಟ್ ಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ.

'2021ಕ್ಕೆ ನಿಂಬೆಹಣ್ಣು, ಮೆಣಸು ತೂಗು ಹಾಕಿ, 2020 ಮುಗಿಯಲು ಕೆಲವೇ ದಿನಗಳು ಉಳಿದಿದೆ. ದುಷ್ಟಕಣ್ಣಿನಿಂದ ರಕ್ಷಿಸಬೇಕೆಂದು ನಾನು ಬಯಸುತ್ತೇನೆ. ಹಾಗಾಗಿ ನಿಂಬೆ ಮತ್ತು ಮೆಣಸಿನಕಾಯಿಗಳನ್ನು ತೂಗು ಹಾಕಿದ್ದೇನೆ' ಎಂದು ಹೇಳಿದ್ದಾರೆ.

Amitabh Bachchan Hangs Nimbu Mirchi on 2021

2020 ಈ ವರ್ಷ ತುಂಬಾ ಕೆಟ್ಟವರ್ಷವಾಗಿತ್ತು. ಕೊರೊನಾದಿಂದ ಇಡೀ ವಿಶ್ವ ತತ್ತರಿಸಿಹೋಗಿದೆ. ಈ ವರ್ಷ ಬಹುತೇಕ ಮನೆಯಲ್ಲೇ ಕುಳಿತು ಕಾಲಕಳೆಯುವಂತಾಯಿತು. ಅನೇಕರು ಮೋಡದ ಮರೆಗೆ ಸರಿದಿದ್ದಾರೆ. ಈ ವರ್ಷ ಬೇಗ ಕಳೆಯಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ. ಇದೀಗ 2020 ಮುಗೀತ ಬಂತು. 2021ರನ್ನು ಅದ್ದೂರಿಯಾಗಿ ಸ್ವಾಗತ ಮಾಡಲು ಇಡೀ ವಿಶ್ವವೇ ಕಾಯುತ್ತಿದೆ.

2021 ಆಶಾದಾಯಕ ವರ್ಷವಾಗಿರಲಿ ಎನ್ನುವುದು ಎಲ್ಲರ ಆಶಯ. ಕೊರೊನಾ ದೂರವಾಗಿ ಮತ್ತೆ ಜನ ಜೀವನ ಸಹಜ ಸ್ಥಿತಿಗೆ ಬರಲಿ ಎಂದು ಇಡೀ ವಿಶ್ವ ಕೇಳಿಕೊಳ್ಳುತ್ತಿದ್ದಾರೆ.

Recommended Video

ಕುಮಾರಣ್ಣನಿಗೆ ವಿಶ್ ಮಾಡಿದ Modi, Yeddyurappa | Filmibeat Kannada

More from Filmibeat

English summary
Bollywood Big B Amitabh Bachchan Hangs Nimbu Mirchi on 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X