'ಅಮಿತಾಭ್ ಬಚ್ಚನ್ ' ಬಾಲಿವುಡ್ ನ 'ಕುಬೇರ' ; ಬೆಚ್ಚಿ ಬೀಳ್ತೀರಾ ಕೇಳಿದರೆ 'ಆಸ್ತಿ-ಪಾಸ್ತಿ'ಯ ಕಥೆ..!

ಕೂತು ಉಣ್ಣುವವನಿಗೆ ಕುಡುಕೆ ಹೊನ್ನೂ ಸಾಲದು ಎಂಬ ಮಾತನ್ನ ಚೆನ್ನಾಗಿ ಅರಿತು ಬದುಕು ಕಟ್ಟಿಕೊಂಡವರು ಅಮಿತಾಭ್ ಬಚ್ಚನ್ . 81ರ ಪ್ರಾಯದಲ್ಲಿಯೂ ಕೂಡ ದುಡಿಮೆಯೇ ದುಡ್ಡಿನ ತಾಯಿ ಎಂದು ನಂಬಿ, ಕಾಯಕವೇ ಕೈಲಾಸ ಎಂಬ ಮಂತ್ರವನ್ನ ಪಠಿಸುತ್ತಿರುವ ಅಮಿತಾಭ್ ಬಚ್ಚನ್ ಬಳಿ 1.578 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದರೆ ನೀವೂ ನಂಬ್ತೀರಾ. ನಂಬ್ಲೇಬೇಕು. ಯಾಕೆಂದರೆ ಅಮಿತಾಭ್ ಪತ್ನಿ ಜಯಾ ಬಚ್ಚನ್ ತಮ್ಮ ಆಸ್ತಿಯ ಕಥೆಯನ್ನ ವಿವರವಾಗಿ ಹೇಳಿದ್ದಾರೆ.

ಹೌದು, ಹಿರಿಯ ನಟಿ ಮತ್ತು ರಾಜಕಾರಣಿ ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷದಿಂದ (ಎಸ್‌ಪಿ) ರಾಜ್ಯಸಭೆಗೆ ಸತತ ಐದನೇ ಅವಧಿಗೆ ಮರುನಾಮಕರಣಗೊಂಡಿದ್ದಾರೆ. ಮಂಗಳವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಇದೇ ಸಮಯದಲ್ಲಿ ತಮ್ಮ ಆಸ್ತಿಯ ವಿವರವನ್ನೂ ಕೂಡ ಜಯಾ ಬಚ್ಚನ್ ನೀಡಿದ್ದಾರೆ

Amitabh Bachchan Has Joint Net Worth Of 1.578 Crore With Jaya Bachchan

ನಾಮನಿರ್ದೇಶನದ ವೇಳೆ ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ , ಜಯಾ ಬಚ್ಚನ್ ಅವರ ಬ್ಯಾಂಕ್ ನಲ್ಲಿ 10 ಕೋಟಿ ಹಣ ಇದ್ದರೆ, ಅಮಿತಾಭ್ ಅವರ ಬ್ಯಾಂಕ್ ಬ್ಯಾಲೆನ್ಸ್ 120 ಕೋಟಿ ಇದೆ. ಇನ್ನೂ ವಿಶೇಷ ಅಂದರೆ ಜಯಾ ಬಚ್ಚನ್ ಕ್ಕಿಂತ ಅಮಿತಾಭ್ ಬಳಿ ಆಭರಣದ ಬೆಲೆ ಹೆಚ್ಚು ತೂಗುತ್ತೆ. ಬಿಗ್ ಬಿ ಬಳಿ 54 ಕೋಟಿ ರೂಪಾಯಿ ಮೌಲ್ಯದ ಆಭರಣ ಇದ್ದರೆ, ಜಯಾ ಅವರ ಬಳಿ 40.97 ಕೋಟಿ ಬೆಲೆ ಬಾಳುವ ಜ್ಯುವೆಲರಿ ಇದೆ.

ಇನ್ನೂ ಬಾಲಿವುಡ್ ನ ಶೆಹನ್ ಷಾ ಅಮಿತಾಭ್ ಅವರ ಹತ್ತಿರ ಮರ್ಸಿಡಿಸ್ ಮತ್ತು ರೇಂಜ್ ರೋವರ್ ಸೇರಿದಂತೆ ಒಟ್ಟು 17.66 ಕೋಟಿ ಬೆಲೆ ಬಾಳುವ 16 ವಾಹನಗಳು ಇವೆ. ಜಯಾ ಬಚ್ಚನ್ ಅವರ ಬಳಿ ವಾಹನಗಳ ಸಂಖ್ಯೆ ಕಡಿಮೆ ಇದೆ. ಕೇವಲ ನಾಲ್ಕು ಕಾರುಗಳನ್ನ ಜಯಾ ಬಚ್ಚನ್ ಹೊಂದಿದ್ದಾರೆ.

Amitabh Bachchan Has Joint Net Worth Of 1.578 Crore With Jaya Bachchan

2022-23 ರ ಹಣಕಾಸು ವರ್ಷದಲ್ಲಿ ಜಯಾ ಬಚ್ಚನ್ 1.63 ಕೋಟಿ ರೂಪಾಯಿ ಸಂಪಾದಿಸಿದ್ದರೆ, ಅಮಿತಾಭ್ ಬಚ್ಚನ್ 273 ಕೋಟಿಯನ್ನ ಸಂಪಾದಿಸಿದ್ದಾರೆ. ಇಬ್ಬರಿಂದ 849.11 ಕೋಟಿ ರೂ ಚರಾಸ್ತಿ ಇದ್ದು, ಸ್ಥಿರಾಸ್ತಿ ಮೊತ್ತ 729.77 ಕೋಟಿ ರೂಪಾಯಿ ಇದೆ.

ಇಬ್ಬರ ಆದಾಯದ ಮೂಲ ಏನು..?

ಬ್ರ್ಯಾಂಡ್ ಗಳ ಪ್ರಚಾರ ಹಾಗೂ ಸಿನಿಮಾಗಳಿಂದ ಜಯಾ ಬಚ್ಚನ್ ಹಣವನ್ನ ಗಳಿಸುತ್ತಾರೆ. ಇನ್ನೂ ಎಂಪಿ ಸ್ಯಾಲರಿ ಕೂಡ ಜಯಾ ಬಚ್ಚನ್ ಅವರಿಗೆ ಬರುತ್ತೆ. ಇನ್ನೂ ಅಮಿತಾಭ್ ಬಚ್ಚನ್ ಅವರಿಗೆ ಬಡ್ಡಿ, ಬಾಡಿಗೆ, ಡಿವಿಡಂಟ್, ಸೋಲಾರ್ ಪ್ಲ್ಯಾಂಟ್ ಮೊದಲಾದ ಕಡೆಗಳಿಂದ ಹಣ ಬರುತ್ತದೆ ಎಂದು ತಿಳಿಸಲಾಗಿದೆ. ಬಿಗ್ ಬಿಗೆ ಸಿನಿಮಾದಿಂದ ಬರುವ ಹಣವನ್ನ ಇಲ್ಲಿ ನಮೂದಿಸಿದಂತೆ ಇಲ್ಲ. ಆ ಹಣವನ್ನೂ ಸೇರಿಸಿದರೆ ಲೆಕ್ಕಾಚಾರ ಎಷ್ಟಾಗುತ್ತೆ ಅನ್ನುವುದು ದೇವರಿಗೆ ಗೊತ್ತು

Amitabh Bachchan Has Joint Net Worth Of 1.578 Crore With Jaya Bachchan

ಸದ್ಯಕ್ಕೆ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಅವರ ಈ ಆಸ್ತಿ ಪಾಸ್ತಿಯ ಕಥೆ ಕೇಳಿ ಮಾಯಾನಗರಿ ಮುಂಬೈ ಬೆಕ್ಕಸ ಬೆರಗಾಗಿದೆ. ಜಯಾ ಬಚ್ಚನ್ ಅವರ ಸೀರೆ ಸಂಗ್ರಹ ಎಷ್ಟಿರಬಹುದು..? ಅದರಲ್ಲಿ ಬೆಲೆ ಬಾಳುವ ಬಟ್ಟೆ ಬರೆಗಳು ಇನ್ನೆಷ್ಟು ಇರಬಹುದು..? ಇನ್ನು ಮಕ್ಕಳಿಗೆ ಮೊಮ್ಮಕ್ಕಳಿಗೆ ಉಡುಗೊರೆ ರೂಪದಲ್ಲಿ ನೀಡಿರುವ ಆಸ್ತಿಗಳು ಎಷ್ಟಿರಬಹುದು..? ಹೀಗೆ ಅನೇಕ ಪ್ರಶ್ನೆಗಳು ಅನೇಕರನ್ನ ಕಾಡ್ತಿವೆ. ನಿಜಕ್ಕೂ ಅಮಿತಾಭ್ ಬಚ್ಚನ್ ಬಾಲಿವುಡ್ ನ ಕುಬೇರ. ನೀವೇನಂತೀರಾ..?

More from Filmibeat

English summary
According to an election affidavit filed by her, Jaya Bachchan's personal net worth for the financial year 2022-23 stands at Rs 1,63,56,190 while Big B's net worth is reported to be Rs 273,74,96,590 for a similar period
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X