ಮೊದಲ ಬಾರಿಗೆ ಬಚ್ಚನ್ ತಮಿಳು ಸಿನಿಮಾ : ನಾಯಕಿ ಇವರೇ

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ವಯಸ್ಸಿಗೆ ತಕ್ಕದಾದ ಪಾತ್ರಗಳನ್ನು ನಿಭಾಯಿಸುತ್ತಿರುವ ಅಮಿತಾಭ್ ಈಗ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮಿಳಿನಲ್ಲಿ 'ಊರ್ಯಂಧ ಮನಿಧನ್' ಎನ್ನುವ ಚೊಚ್ಚಲ ಚಿತ್ರಕ್ಕೆ ಬಣ್ಣ ಹಚ್ಚುತ್ತಿರುವ ಅಮಿತಾಭ್ ಗೆ ನಟಿ ರಮ್ಯಾ ಕೃಷ್ಣ ಜೊತೆಯಾಗಿದ್ದಾರೆ.

ಸೂಪರ್ ಹಿಟ್ ಆದ 'ಬಾಹುಬಲಿ' ಚಿತ್ರದ ನಂತರ ಶಿವಗಾಮಿನಿ ಅಂತಾನೆ ಖ್ಯಾತಿ ಗಳಿಸಿರುವ ರಮ್ಯಾ ಕೃಷ್ಣ ಅಮಿತಾಭ್ ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದ್ರೆ 20 ವರ್ಷಗಳ ನಂತರ ಅಮಿತಾಭ್ ಮತ್ತು ರಮ್ಯಾ ಕೃಷ್ಣ ಒಂದಾಗುತ್ತಿದ್ದಾರೆ. 1998 ರಲ್ಲಿ ರಿಲೀಸ್ ಆಗಿದ್ದ 'ಬಡೇ ಮಿಯಾ ಚೋಟೇ ಮಿಯಾ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಈಗ ಮತ್ತೆ ತಮಿಳು ಸಿನಿಮಾ ಮೂಲಕ ಒಂದಾಗುತ್ತಿರುವುದು ವಿಶೇಷ.

Amitabh Bachchan made his kollywood debut

ಈಗಾಗಲೇ ಅಮಿತಾಭ್ ಬಚ್ಚನ್ ಮೊದಲ ತಮಿಳು ಸಿನಿಮಾದ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಬಿಗ್ ಬಿ ಪಂಚೆ ತೊಟ್ಟು, ಹೆಗಲ ಮೇಲೆ ಕೆಂಪು ವಸ್ತ್ರ ಹಾಕಿ, ಹಣೆಗೆ ವಿಭೂತಿ ಧರಿಸಿ ಹಳೆಯ ಮಣ್ಣಿನ ಮನೆಯಲ್ಲಿ ನಿಂತಿರುವ ಅಮಿತಾಭ್ ಲುಕ್ ಅಭಿಮಾನಿಗಳ ಕಣ್ಣುಕುಕ್ಕುತ್ತಿದೆ.

ಅಂದ್ಹಾಗೆ ಅಮಿತಾಭ್ ಮೊದಲ ತಮಿಳು ಚಿತ್ರ 'ಊರ್ಯಂಧ ಮನಿಧನ್' ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಯುವ ನಿರ್ದೇಶಕ ತಮಿಳ್ವಾನನ್. ವಿಶೇಷ ಅಂದ್ರೆ ಚಿತ್ರದಲ್ಲಿ ಅಮಿತಾಭ್ ಜೊತೆ ನಿರ್ದೇಶಕ ಎಸ್ ಜೆ ಸೂರ್ಯ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಊರ್ಯಂಧ ಮನಿಧನ್' ತಮಿಳು ಮತ್ತು ಹಿಂದಿ ಎರಡೂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.

More from Filmibeat

English summary
Big B Amitabh Bachchan made his kollywood debut from Uyarntha Manithan movie. Ramya Krishnan to star opposite Amitabh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X