For Quick Alerts
  ALLOW NOTIFICATIONS  
  For Daily Alerts

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಬಿಗ್ ಬಿ

  By ಜೇಮ್ಸ್ ಮಾರ್ಟಿನ್
  |

  ಸಾಮಾಜಿಕ ಜಾಲ ತಾಣದಲ್ಲಿ ಸಕತ್ ಸಕ್ರಿಯರಾಗಿರುವ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಈಗ ಹೊಸ ದಾಖಲೆ ಬರೆದಿದ್ದಾರೆ.ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬಾಲಿವುಡ್ ನ ಸೆಲೆಬ್ರಿಟಿಗಳ ಪೈಕಿ ಮೊಟ್ಟ ಮೊದಲ ಬಾರಿಗೆ 20 ಮಿಲಿಯನ್ ಹಿಂಬಾಲಕರನ್ನು ಪಡೆದ ಮೊದಲ ನಟ ಎನಿಸಿಕೊಂಡಿದ್ದಾರೆ.

  ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮೆಗಾ ಸ್ಟಾರ್ ಅಮಿತಾಬ್ ಅವರು ಅತಿ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಹೊಸ ದಾಖಲೆ ಬರೆದಿದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ್ದಾರೆ.[ಅಮಿತಾಬ್ ಬಚ್ಚನ್ ಬೆನ್ನಟ್ಟಿದ ಹುಲಿ.!]

  ಮೇ 2010ರಲ್ಲಿ ಮೊದಲಿಗೆ ಟ್ವೀಟ್ ಮಾಡಲು ಕಲಿತ ಬಿಗ್ ಬಿಗೆ ಈಗ 20 ಮಿಲಿಯನ್ ಫಾಲೋವರ್ಸ್ ಇದ್ದರೆ, ಮೋದಿ ಅವರಿಗೆ 18.8 ಮಿಲಿಯನ್ ಫಾಲೋವರ್ಸ್ ಇದ್ದಾರೆ.

  ಇವರಿಬ್ಬರ ಹಿಂದೆ ಕಿಂಗ್ ಖಾನ್ ಶಾರುಖ್ 18.6 ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. ಅಮೀರ್ ಖಾನ್ 16.9 ಮಿಲಿಯನ್ ಹಾಗೂ ಸಲ್ಮಾನ್ ಖಾನ್ ಅವರು 16.8 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ನಟಿಯರ ಪೈಕಿ ಪ್ರಿಯಾಂಕಾ ಛೋಪ್ರಾ 13.2 ಮಿಲಿಯನ್ ಫ್ಯಾನ್ಸ್ ಹೊಂದಿದ್ದಾರೆ.

  73ವರ್ಷದ ಮೇರು ನಟ ಅಮಿತಾಬ್ ಅವರು ಈಗ ಶೂಜಿತ್ ಸಿರ್ಕಾರ್ ನಿರ್ದೇಶನದ ಪಿಂಕ್ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ತನ್ನ ಟ್ವಿಟ್ಟರ್ ಹಿಂಬಾಲಕರನ್ನು ef -extended family ಎಂದೇ ಕರೆಯುವ ಅಮಿತಾಬ್ ಅವರು ಬರೀ ಸಿನಿಮಾ ಬಗ್ಗೆ ಮಾತ್ರ ಟ್ವೀಟ್ ಮಾಡುವುದಿಲ್ಲ. ಸುದ್ದಿ, ಸಾಮಾಜಿಕ ಕಳಕಳಿ ಟ್ವೀಟ್ಸ್ ಕೂಡಾ ಇರುತ್ತದೆ.[ರಜಿನಿ ಕೈ ಹಿಡಿದ ಬಿಗ್ ಬಿ ಅಮಿತಾಭ್ ಬಚ್ಚನ್]

  ಈ ಸುದ್ದಿಯ ಬಗ್ಗೆ ವಿಡಿಯೋ ನೋಡಿ.. ಲಿಂಕ್ ಕ್ಲಿಕ್ ಮಾಡಿ

  ಅಮಿತಾಬ್ ಅವರ ಜೊತೆಗೆ ಟ್ವಿಟ್ಟರ್ ಮೂಲಕ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ನಡೆಸಿದ ಸಂಭಾಷಣೆ, ಬಿಗ್ ಬಿಗೆ ಚಿನ್ನದ ಬ್ಯಾಟ್ ಕೊಟ್ಟಿದ್ದು, ಮುಂಬೈಗೆ ಬಂದಾಗ ಭೇಟಿ ಮಾಡುತ್ತೇನೆ ಎಂದು ಬಿಗ್ ಬಿ ಭಾಷೆ ನೀಡಿದ್ದು, ನಂತರ ಕ್ಷಮೆಯಾಚಿಸಿದ್ದು ಎಲ್ಲವೂ ಟ್ವಿಟ್ಟರ್ ನಲ್ಲಿ ದಾಖಲಾಗಿದೆ.

  ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಬಿಗ್ ಬಿ

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಬಿಗ್ ಬಿ

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಬಿಗ್ ಬಿ

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಬಿಗ್ ಬಿ

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಬಿಗ್ ಬಿ


  (ಐಎಎನ್ಎಸ್)
  English summary
  Megastar Amitabh Bachchan has become the first Bollywood personality to score 20 million followers on Twitter and has thanked his fans and well-wishers on reaching the milestone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X