ಚಂಡಮಾರುತದ ಹೊಡೆತಕ್ಕೆ ಮುಳುಗಿದ ಅಮಿತಾಬ್ ಬಚ್ಚನ್ ಕಚೇರಿ

ಕೊರೊನಾ ವೈರಸ್ ಎರಡನೇ ಅಲೆ ಭೀಕರತೆ ನಡುವೆ ತೌಕ್ತೆ ಚಂಡಮಾರುತ ಮತ್ತಷ್ಟು ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ರಾತ್ರಿ ಇಡಿ ಸುರಿದ ಮಳೆಯಿಂದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜನಕ್ ಕಚೇರಿ ಪ್ರವಾಹಕ್ಕೆ ಸಿಲುಕಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಸಿಬ್ಬಂದಿಯ ಶೆಡ್ ಗಳು ಹಾರಿಹೋಗಿದ್ದು, ಸಿಬ್ಬಂದಿ ನೀರಿನಲ್ಲಿ ಒದ್ದೆಯಾಗಿದ್ದಾರೆ ಎಂದು ಅಮಿತಾಬ್ ಹೇಳಿದ್ದಾರೆ.

ಈ ಬಗ್ಗೆ ನಟ ಅಮಿತಾಬ್ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. 'ಚಂಡಮಾರುತದ ನಡುವೆ ವಿಪರೀತ ಮೌನವಿದೆ. ದಿನವಿಡಿ ಮಳೆಯಾಗಿದೆ. ಮರಗಳು ಧರೆಗೆ ಉರುಳಿವೆ. ಎಲ್ಲಾ ಕಡೆ ಮಳೆ ಬೀಳುತ್ತಿದೆ. ಜನಕ್ ಕಚೇರಿ ಪ್ರವಾಹಕ್ಕೆ ಸಿಲುಕಿದೆ. ಮನ್ಸೂನ್ ಮಳೆಗೆ ಇನ್ನು ಸಿದ್ಧವಾಗಿಲ್ಲ. ಪ್ಲಾಸ್ಟಿಕ್ ಕವರ್‌ಗಳು ಹಾರೆಹೋಗಿವೆ. ಕೆಲವು ಸಿಬ್ಬಂದಿಗಳ ಶೆಡ್ ಕೂಡ ಹಾರಿಹೋಗಿದೆ' ಎಂದು ಬರೆದುಕೊಂಡಿದ್ದಾರೆ.

ನೀರಿನಲ್ಲಿ ಒದ್ದೆಯಾಗಿದ್ದರು ಸಿಬ್ಬಂದಿ ಇನ್ನು ಕೆಲಸ ಮಾಡುತ್ತಿದ್ದಾರೆ ಎಂದು ತನ್ನ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. 'ನಾನು ತಕ್ಷಣ ಅವರಿಗೆ ಬಟ್ಟೆಗಳನ್ನು ಬದಲಾಯಿಸಲು ಹೇಳಿದೆ. ನನ್ನ ವಾಡ್ ರೂಮ್‌ನಿಂದ ಬಟ್ಟೆಗಳನ್ನು ಕೊಟ್ಟಿದ್ದೇನೆ' ಎಂದು ಹೇಳಿದ್ದಾರೆ. ತೌಕ್ತೆ ಚಂಡಮಾರುತವನ್ನು 'ಅಹ್ವಾನಿಸದ ಅತಿಥಿ' ಎಂದು ಕರೆದಿದ್ದಾರೆ.

 Amitabh Bachchan office in Janak flooded after Tauktae Cyclone hits Mumbai

ಕೊರೊನಾ ವಿರುದ್ಧ ಹೋರಾಟಕ್ಕೆ ನೆರವಾಗಿದ್ದ ಅಮಿತಾಬ್ 2 ಕೋಟಿ ರೂ. ಪರಿಹಾರ ನೀಡದ್ದಲ್ಲದೆ, ವಿದೇಶದಿಂದ ಆಕ್ಸಿಜನ್ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಿಗೆ ವೆಂಟಿಲೇಟರ್ ವ್ಯವಸ್ಥೆಗಳನ್ನು ಮಾಡಿದ್ದಾರೆ. ಇತ್ತೀಚಿಗಷ್ಟೆ ಅಮಿತಾಬ್ ಎರಡನೇ ಡೋಸ್ ಕೊರೊನಾ ಲಸಿಕೆಯನ್ನು ಪಡೆದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಚೆಹ್ರೆ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಅಂದಕೊಂಡಂತೆ ಆಗಿದ್ದರೆ ಸಿನಿಮಾ ಕಳೆದ ತಿಂಗಳು ರಿಲೀಸ್ ಆಗಬೇಕಿತ್ತು ಆದರೆ ಕೊರೊನಾ ವೈರಸ್ ನಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಸದ್ಯ ಗುಡ್ ಬೈ ಸಿನಿಮಾ ಅಮಿತಾಬ್ ಬಳಿ ಇದೆ. ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ.

Recommended Video

ನ್ಯೂಸ್ ಚಾನೆಲ್ ಗಳು ಈ ರೀತಿ ಮಾಡುವುದನ್ನು ಮೊದಲು ನಿಲ್ಲಿಸಬೇಕು | Filmibeat Kannada

More from Filmibeat

English summary
Bollywood Actor Amitabh Bachchan office in Janak flooded after Tauktae Cyclone hits Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X