Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ಬ್ಯುಸಿನೆಸ್ ಪ್ರಾರಂಭಿಸಿದ ಅಮಿತಾಬ್ ಬಚ್ಚನ್, ನಕ್ಕ ಅಭಿಮಾನಿಗಳು, 100 ಕೋಟಿ ಕೊಡ್ತೀನೆಂದ ಹೂಡಿಕೆದಾರ!
ಬಾಲಿವುಡ್‌ನ ಹಿರಿಯ ಹಾಗೂ ಈಗಲೂ ಅತ್ಯಂತ ಬ್ಯುಸಿ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೊಸ ಉದ್ಯಮವೊಂದನ್ನು ಆರಂಭಿಸಲು ಹೊರಟಿದ್ದಾರೆ!
ಸಿನಿಮಾಗಳ ಜೊತೆಗೆ ರಿಯಲ್ ಎಸ್ಟೇಟ್, ನವ್ಯೋದ್ಯಮಗಳಲ್ಲಿ ಹೂಡಿಕೆ ಮಾಡಿ ನಟನೆ ಜೊತೆಗೆ ಬ್ಯುಸಿನೆಸ್ ಅನ್ನು ಜೊತೆಯಾಗಿ ಮಾಡುತ್ತಿರುವ ಅಮಿತಾಬ್ ಬಚ್ಚನ್ ಹೊಸ ಬ್ಯುಸಿನೆಸ್ ಒಂದಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ಆದರೆ ಅಮಿತಾಬ್ ಬಚ್ಚನ್ ಆರಿಸಿಕೊಂಡಿರುವ ಬ್ಯುಸಿನೆಸ್ ನೋಡಿ ಅವರ ಅಭಿಮಾನಿಗಳೇ ನಕ್ಕಿದ್ದಾರೆ! ಆದರೆ ಜನಪ್ರಿಯ ಹೂಡಿಕೆದಾರರೊಬ್ಬರು ಬಚ್ಚನ್‌ರ ಹೊಸ ಬ್ಯುಸಿನೆಸ್‌ಗೆ 100 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ!
ಆಗಿರುವುದಿಷ್ಟು, ಅಮಿತಾಬ್ ಬಚ್ಚನ್‌ರ ಕೌನ್ ಬನೇಗಾ ಕರೋಡ್‌ಪತಿ ಪ್ರಸಾರವಾಗುವ ಸೋನಿ ವಾಹಿನಿಯಲ್ಲಿಯೇ ಮತ್ತೊಂದು ಜನಪ್ರಿಯ ಶೋ 'ಶಾರ್ಟ್ ಟ್ಯಾಂಕ್ ಇಂಡಿಯಾ' ಪ್ರಸಾರವಾಗುತ್ತದೆ. ಈ ಶೋನ ಎರಡನೇ ಸೀಸನ್ ಇದೀಗ ಆರಂಭವಾಗಿದ್ದು, ಸೀಸನ್ ಆರಂಭಕ್ಕೂ ಮುನ್ನ ಶಾರ್ಟ್ ಟ್ಯಾಂಕ್ ಇಂಡಿಯಾದ ಹೂಡಿಕೆದಾರರು ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗಹಿಸಿದ್ದರು.

ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 2
ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ನವೋದ್ಯಮಿಗಳು ತಮ್ಮ ಬ್ಯುಸಿನೆಸ್ ಐಡಿಯಾವನ್ನು ಶಾರ್ಟ್ ಟ್ಯಾಂಕ್‌ನ ಹೂಡಿಕೆದಾರರ ಮುಂದೆ ಪ್ರೆಸೆಂಟ್ ಮಾಡುತ್ತಾರೆ. ಯಾರಿಗೆ ಅವರ ಬ್ಯುಸಿನೆಸ್ ಹಿಡಿಸುತ್ತದೆಯೋ ಅವರು ಆ ಬ್ಯುಸಿನೆಸ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಇದು 'ಶಾರ್ಕ್ ಟ್ಯಾಂಕ್ ಇಂಡಿಯಾ'ದ ಶೋನ ರೀತಿ. ಈ ಶೋನಲ್ಲಿ ಲೆನ್ಸ್‌ಕಾರ್ಟ್‌ನ ಮಾಲೀಕ ಪಿಯೂಷ್ ಬನ್ಸಾಲ್, ಬೋಟ್ ಸಂಸ್ಥೆಯ ಮಾಲೀಕ ಅಮನ್ ಗುಪ್ತಾ, ಶುಗರ್ ಕಾಸ್ಮೆಟಿಕ್‌ನ ಮಾಲಕಿ ವಿನೀತಾ ಸಿಂಗ್, ಎಮ್‌ಕ್ಯೂರ್ ಫಾರ್ಮಾ ಸಂಸ್ಥೆಯ ಮಾಲಕಿ ನಮಿತಾ ತಾಪರ್, ಕಾರ್‌ದೇಖೊ ಸಂಸ್ಥೆಯ ಅಮಿತ್ ಜೈನ್ ಅವರುಗಳು ಇದ್ದಾರೆ.

ಹೊಸ ಉದ್ಯಮ ಆರಂಭಿಸಿರುವ ಅಮಿತಾಬ್ ಬಚ್ಚನ್!
ಹಾಗಾಗಿ, ಶಾರ್ಕ್ ಟ್ಯಾಂಕ್ ಇಂಡಿಯಾದವರು ಬಚ್ಚನ್‌ರ ಕೌನ್ ಬನೇಗಾ ಕರೋಡ್‌ಪತಿ ಶೋಗೆ ಬಂದಾಗ, ಅಮಿತಾಬ್ ಬಚ್ಚನ್ ಸಹ ತಮ್ಮ ಬ್ಯುಸಿನೆಸ್ ಐಡಿಯಾ ಒಂದನ್ನು ಹೂಡಿಕೆದಾರರ ಮುಂದೆ ಪ್ರೆಸೆಂಟ್ ಮಾಡಿದರು. ಬಚ್ಚನ್ ಅವರು ಟಿಶ್ಯೂ ಪೇಪರ್ ಅನ್ನು ತೋರಿಸಿ, ನಾನು ಹೊಸದಾಗಿ ಟಿಶ್ಯೂ ಪೇಪರ್ ಉದ್ಯಮ ಪ್ರಾರಂಭಿಸುತ್ತಿದ್ದೇನೆ. ಇದಕ್ಕೆ 'ಎಬಿ' ಟಿಶ್ಯೂ ಪೇಪರ್ ಎಂದು ಹೆಸರಿಟ್ಟಿದ್ದೇನೆ. ಇದರ ಬಳಕೆ ಸಹ ನಮ್ಮಲ್ಲಿ ಬಹಳ ಆಗುತ್ತದೆ'' ಎಂದಿದ್ದಾರೆ.

ನೂರು ಕೋಟಿ ಕೊಡ್ತೀನೆಂದ ಹೂಡಿಕೆದಾರ
ಅಮಿತಾಬ್‌ರ ಬ್ಯುಸಿನೆಸ್ ಐಡಿಯಾ ಕೇಳಿ ಎಲ್ಲರೂ ನಕ್ಕಿದ್ದಾರೆ. ಆದರೆ 'ಶಾದಿ.ಕಾಮ್' ಮಾಲೀಕ, 'ಓಲಾ' ಸೇರಿದಂತೆ ಹಲವಾರು ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ಅನುಪಮ್ ಮಿತ್ತಲ್, ನಿಮ್ಮ ಬ್ಯುಸಿನೆಸ್ ಅಲ್ಲಿ ನಾನು ನೂರು ಕೋಟಿ ಹೂಡಲು ತಯಾರಿದ್ದೇನೆ. ನಿಮ್ಮ ಹೆಸರಿನ ಬ್ರ್ಯಾಂಡ್ ಸಾಕು ಟಿಶ್ಯೂ ಪೇಪರ್‌ಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ ಎಂದಿದ್ದಾರೆ. ಆದರೆ ಅಮಿತಾಬ್ ಬಚ್ಚನ್ ಇದನ್ನು ತಮಾಷೆಗಾಗಿ ಅಷ್ಟೆ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ ಹೂಡಿಕೆಗಳು
ಅಮಿತಾಬ್ ಬಚ್ಚನ್ ನಟರಾಗಿರುವ ಜೊತೆಗೆ ಅವರೊಬ್ಬ ಉದ್ಯಮಿಯೂ ಹೌದು. ಅವರದ್ದೇ ಆದ ಪ್ರೊಡಕ್ಷನ್ ಸಂಸ್ಥೆ ಅಮಿತಾಬ್ ಬಚ್ಚನ್ ಕಾರ್ಪೊರೇಟ್ ಲಿಮಿಟೆಡ್ ಅನ್ನು ಹೊಂದಿದ್ದಾರೆ. ಈ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣ ಹಾಗೂ ವಿತರಣೆ ಮಾಡುತ್ತಾರೆ. ಇದರ ಜೊತೆಗೆ ವಿಜ್‌ಕ್ರಾಫ್ಟ್ ಇಂಟರ್ನ್ಯಾಷನಲ್ ಎಂಟರ್ಟೇನ್ಡ್ ಲಿಮಿಟೆಡ್ ಸಂಸ್ಥೆಯ ಪಾಲುದಾರಿಕೆ ಹೊಂದಿದ್ದಾರೆ. ಇವುಗಳೊಟ್ಟಿಗೆ ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡಿದ್ದಾರೆ. ಡಿಪಿ ವೈರ್ಸ್, ಫಿನೊಟೆಕ್ಸ್, ಬಿರ್ಲಾ ಸಂಸ್ಥೆಗಳ ದೊಡ್ಡ ಸಂಖ್ಯೆಯ ಷೇರು ಖರೀದಿ ಸಹ ಮಾಡಿದ್ದಾರೆ.