'ಕೊರೊನಾದಿಂದ ಸತ್ತು ಹೋಗಿ' ಎಂದು ಟ್ರೋಲ್ ಮಾಡಿದವರಿಗೆ ಅಮಿತಾಬ್ ಬಚ್ಚನ್ ಕ್ಲಾಸ್
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗೆ ಸೊಸೆ ಐಶ್ವರ್ಯ ರೈ ಮತ್ತು ಮೊಮ್ಮಗಳು ಆರಾದ್ಯ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಡಿಸ್ಚಾರ್ಜ್ ಆಗಿರುವ ಸುದ್ದಿ ಕೇಳಿ ಭಾವುಕರಾಗಿದ್ದ ಬಿಗ್ ಬಿ ಸಂತೋಷದ ವಿಷಯ ಕೇಳಿ ಕಣ್ಣಲ್ಲಿ ನೀರು ಬಂತು ಎಂದು ಹೇಳಿದ್ದಾರೆ.
Recommended Video
ಈ ನಡುವೆ ಬಿಗ್ ಬಿ ಟ್ರೋಲಿಗರು ವಿರುದ್ಧ ಗರಂ ಆಗಿದ್ದಾರೆ. 'ನೀವು ಕೊರೊನಾ ಬಂದು ಸಾಯಿರಿ' ಎಂದು ಅನಾಮಧೇಯ ಟ್ರೋಲ್ ನಿಂದ ತಾಳ್ಮೆ ಕಳೆದುಕೊಂಡ ಅಮಿತಾಬ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. "ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮಿತಾಬ್ "ಅವರು ಕೋವಿಡ್ ನಿಂದ ಸಾಯುತ್ತೀರಿ ಎಂದು ಹೇಳಿದ್ದಾರೆ. ಒಂದೋ ನಾನು ಸಾಯುತ್ತೇನೆ ಅಥವಾ ನಾನು ಬದುಕುತ್ತೇನೆ. ನಾನು ಸತ್ತರೆ ನನ್ನ ಮೇಲೆ ವಾಗ್ದಾಳಿ ಮಾಡುವುದಕ್ಕೆ ಸಾಧ್ಯವಿಲ್ಲ.
"ನೀವು ತಂದೆ ಯಾರು ಎಂದು ಹೇಳಿಲ್ಲ. ನಿಮಗೆ ತಂದೆ ಯಾರು ಅಂತ ಗೊತ್ತೊ ಇಲ್ಲವೋ. ಒಬ್ಬ ಸೆಲೆಬ್ರಿಟಿ ಹೆಸರು ಹೇಳಿಕೊಂಡು ಜನಪ್ರಿಯತೆ ಪಡೆಯುವುದಕ್ಕೆ ನಿನಗೆ ಸಾಧ್ಯವಿಲ್ಲ. ನಾನು ಬದುಕಿದರೆ ಸುಮ್ಮನಿರಲ್ಲ. ನನ್ನ 90 ಪ್ಲಸ್ ಮಿಲಿಯನ್ ಹಿಂಬಾಲಕರು ಸುಮ್ಮನೆ ಬಿಡುವುದಿಲ್ಲ" ಎಂದಿದ್ದಾರೆ.

77 ವರ್ಷದ ಅಮಿತಾಬ್ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಜುಲೈ 11ರಂದು ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಿ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಪ್ರಾರ್ಥನೆ ಮಾಡುತ್ತಿದ್ದಾರೆ.


Click it and Unblock the Notifications











