For Quick Alerts
  ALLOW NOTIFICATIONS  
  For Daily Alerts

  ಬಾಕ್ಸಿಂಗ್ ಲಿಜೆಂಡ್ ಮೊಹಮ್ಮದ್ ಅಲಿ ಕೈಲಿ ಹೊಡೆತ ತಿಂದಿದ್ದ ನೆನಪು ಮಾಡಿಕೊಂಡ ಬಚ್ಚನ್

  |

  ಇತ್ತೀಚೆಗೆ 'ಲೈಗರ್' ಸಿನಿಮಾದಲ್ಲಿ ಬಾಕ್ಸಿಂಗ್ ಲಿಜೆಂಡ್ ಮೈಕ್ ಟೈಸನ್ ನಟಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಮೈಕ್ ಟೈಸನ್ ಗುರುವೆಂದು ಭಾವಿಸುವ ಬಾಕ್ಸಿಂಗ್ ರಿಂಗ್‌ನ ಲಿಜೆಂಡ್ ಮೊಹಮ್ಮದ್ ಅಲಿ ದಶಕಗಳ ಹಿಂದೆಯೇ ಹಿಂದಿ ಸಿನಿಮಾದಲ್ಲಿ ನಟಿಸಬೇಕಿತ್ತು. ಅದೂ ಅಮಿತಾಬ್ ಬಚ್ಚನ್ ಜೊತೆ.

  ಬಾಕ್ಸಿಂಗ್ ರಿಂಗ್‌ನ ದೇವರೆಂದು ಕರೆಸಿಕೊಳ್ಳುವ, ಮೊಹಮ್ಮದ್ ಅಲಿ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ಸಿನಿಮಾದಲ್ಲಿ ನಟಿಸಬೇಕಿತ್ತು, ಈ ಬಗ್ಗೆ ಮಾತುಕತೆಯೂ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಇದೀಗ ನೆನಪು ಮಾಡಿಕೊಂಡಿದ್ದಾರೆ.

  ಅಮಿತಾಬ್ ಬಚ್ಚನ್ ನಿರೂಪಣೆ ಮಾಡುವ ಕೌನ್ ಬನೇಗಾ ಕರೋಡ್‌ಪತಿ ಕ್ವಿಜ್ ಶೋನಲ್ಲಿ ಇತ್ತೀಚೆಗೆ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್ ಹಾಗೂ ವೇಟ್‌ಲಿಫ್ಟಿಂಗ್ ಚಾಂಪಿಯನ್ ಸೈಕೋಮ್ ಮಿರಾಭಾಯಿ ಭಾಗವಹಿಸಿದ್ದರು. ಕಾರ್ಯಕ್ರಮದ ನಡುವಲ್ಲಿ ನಿಖತ್, ತನಗೆ ಮೊಹಮ್ಮದ್ ಅಲಿ ಎಂದರೆ ಬಹಳ ಇಷ್ಟವೆಂದು ಅವರು ತಮ್ಮ ಮಾನಸ ಗುರುವೆಂದು ಅವರ ಬಾಕ್ಸಿಂಗ್ ವಿಡಿಯೋಗಳನ್ನು ನೋಡಿ ತಾನು ಹಲವು ಅದ್ಭುತ ಬಾಕ್ಸಿಂಗ್ ಪಾಠಗಳನ್ನು ಕಲಿತಿರುವುದಾಗಿ ಹೇಳಿದರು.

  ಈ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್, ತಾವು ಮೊಹಮ್ಮದ್ ಅಲಿ ಅವರನ್ನೊಮ್ಮೆ ಭೇಟಿಯಾದ ಸಂದರ್ಭವನ್ನು ನೆನಪು ಮಾಡಿಕೊಂಡರು. ''ಮೊಹಮ್ಮದ್ ಅಲಿ ಅವರನ್ನು ಭೇಟಿ ಆಗುವ ಅವಕಾಶ ನನಗೊಮ್ಮೆ ದೊರಕಿತ್ತು. ಲಾಸ್ ಏಂಜಲ್ಸ್‌ನ ಬೆವರ್ಲಿ ಹಿಲ್ಸ್‌ನ ಅವರ ನಿವಾಸದಲ್ಲಿಯೇ ಅವರನ್ನು ನಾನು ಭೇಟಿಯಾಗಿದ್ದೆ'' ಎಂದು ನೆನಪು ಮಾಡಿಕೊಂಡರು.

  ''ಜನಪ್ರಿಯ ನಿರ್ಮಾಪಕ ಹಾಗೂ ನಿರ್ದೇಶಕ ಪ್ರಕಾಶ್ ಮೆಹ್ರಾ ಅವರು ಮೊಹಮ್ಮದ್ ಅಲಿ ಹಾಗೂ ನನನ್ನು ಒಟ್ಟಾಗಿರಿಸಿಕೊಂಡು ಸಿನಿಮಾ ಮಾಡಲು ಮುಂದಾಗಿದ್ದರು. ಹಾಗಾಗಿ ಸಿನಿಮಾ ಬಗ್ಗೆ ಮಾತನಾಡಲು ಅವರ ಮನೆಗೆ ನಾವು ಭೇಟಿ ನೀಡಿದ್ದೆವು. ಸಿನಿಮಾ ಮಾತುಕತೆ ಆಯಿತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಆ ಸಿನಿಮಾ ಸೆಟ್ಟೇರಲಿಲ್ಲ'' ಎಂದಿದ್ದಾರೆ ಬಚ್ಚನ್.

  ''ಆದರೆ ಅವರೊಟ್ಟಿಗಿನ ನೆನಪು ತಾಜಾ ಆಗಿದೆ. ಅವರೊಬ್ಬ ಅದ್ಭುತವಾದ ವ್ಯಕ್ತಿ. ಮೊಹಮ್ಮದ್ ಅಲಿ ನನ್ನ ಗಲ್ಲಕ್ಕೆ ಗುದ್ದಿರುವ ಫೋಟೊ ಒಂದು ನನ್ನ ಬಳಿ ಈಗಲೂ ಇದೆ'' ಎಂದು ಬಚ್ಚನ್ ನೆನಪು ಮಾಡಿಕೊಂಡಿದ್ದಾರೆ. ಮೊಹಮ್ಮದ್ ಅಲಿ ಫೊಟೊಗಾಗಿ ಬಚ್ಚನ್ ಗಲ್ಲಕ್ಕೆ ಗುದ್ದಿದ್ದರೆ ಹೊರತು ನಿಜವಾಗಿ ಅಲ್ಲ.

  ಮೊಹಮ್ಮದ್ ಅಲಿ ಬಾಕ್ಸಿಂಗ್ ಜಗತ್ತಿನ ಅದ್ಭುತ ಬಾಕ್ಸರ್. ಮೈಕ್ ಟೈಸನ್ ಸೇರಿದಂತೆ ಹಲವು ಬಾಕ್ಸರ್‌ಗಳಿಗೆ ಮೊಹಮ್ಮದ್ ಅಲಿ ಸ್ಪೂರ್ತಿ. ಅದ್ಭುತ ಬಾಕ್ಸರ್ ಆಗಿರುವ ಜೊತೆಗೆ ವರ್ಣಬೇಧ ನೀತಿ ವಿರುದ್ಧ, ಅಸಮಾನತೆ ವಿರುದ್ಧ ತೀವ್ರ ಆಕ್ರೋಶ ಹೊಂದಿದ ವ್ಯಕ್ತಿಯಾಗಿದ್ದರು ಮೊಹಮ್ಮದ್ ಅಲಿ. ಜೂನ್ 03, 2016 ರಂದು ಮೊಹಮ್ಮದ್ ಅಲಿ ನಿಧನ ಹೊಂದಿದರು.

  English summary
  Actor Amitabh Bachchan recall his meeting with great boxer of all time Muhammad Ali. He said Muhammad Ali likely to act in a Hindi movie but that movie could not take up.
  Tuesday, September 6, 2022, 13:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X