»   » ಐ.ಎಫ್.ಎಫ್.ಐ 2017: ಅಮಿತಾಬ್ ಗೆ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ನೀಡಿ ಗೌರವ

ಐ.ಎಫ್.ಎಫ್.ಐ 2017: ಅಮಿತಾಬ್ ಗೆ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ನೀಡಿ ಗೌರವ

Posted By:
Subscribe to Filmibeat Kannada

ಗೋವಾದಲ್ಲಿ ನಡೆಯುತ್ತಿರುವ ಈ ಬಾರಿಯ 48ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನವೆಂಬರ್ 20ರಂದು ಚಾಲನೆ ಸಿಗಲಿದೆ. ಬಾಲಿವುಡ್ ನ ಕಿಂಗ್ ಖಾನ್ ಶಾರುಖ್, ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಎಂಟು ದಿನಗಳು ನಡೆಯಲಿರುವ ಈ ಸಿನಿಮೋತ್ಸವದಲ್ಲಿ ಸಾಕಷ್ಟು ಸಿನಿಮಾಗಳು ಪ್ರದರ್ಶನವಾಗಲಿದೆ.

ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ರಿಗೆ ಚಿತ್ರೋತ್ಸವದ ಮುಕ್ತಾಯದ ಸಮಾರಂಭದ ದಿನ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ನೀಡಿ ಸನ್ಮಾನಿಸಲಿದ್ದಾರೆ. ಭಾರತೀಯ ಸಿನಿಮಾರಂಗಕ್ಕೆ ಅಮಿತಾಬ್ ಬಚ್ಚನ್ ನೀಡಿರುವ ಕೊಡುಗೆಯನ್ನ ಪರಿಗಣಿಸಿ ಈ ಪ್ರಶಸ್ತಿಯನ್ನ ನೀಡಿಲಾಗುತ್ತಿದ್ದು, ಇದೇ ಪ್ರಶಸ್ತಿಯನ್ನ ಅಮಿತಾಬ್ ಬಚ್ಚನ್ 2014ರಲ್ಲಿ ರಜನಿಕಾಂತ್ ರಿಗೆ ನೀಡಿದ್ದರು.

 Amitabh Bachchan to receive Indian Film Personality of the Year Award at IFFI 2017

ಬಿಟೌನ್ ನಲ್ಲಿ ಅಮಿತಾಬ್ ಕೋಟ್ಯಾಂತರ ಅಭಿಮಾನಿಗಳ ಮನಸ್ಸನ್ನ ತಮ್ಮ ಅಭಿನಯದ ಮೂಲಕವೇ ಗೆದ್ದಿದ್ದಾರೆ. 190ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಬಿಗ್ ಬಿ, ನಾಲ್ಕು ದಶಕಗಳಿಂದ ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ. ಕೇವಲ ಅಭಿನಯದಲ್ಲಿ ಮಾತ್ರವಲ್ಲದೇ ತಮ್ಮ ಧ್ವನಿಯಿಂದಲೂ ಮತ್ತಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ ಅಮಿತಾಬ್ ಬಚ್ಚನ್

ಅಮಿತಾಬ್ ಭಾರತದಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ವಿಭೂಷಣ ಒಳಗೊಂಡಂತೆ ಇನ್ನೂ ಅನೇಕ ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ಪ್ರಭಾವಿ ಕಲಾವಿದರನ್ನಾಗಿ ಪರಿಗಣಿಸಿ ಈ ಪ್ರಶಸ್ತಿಯನ್ನ ನೀಡಲಾಗ್ತಿದೆ. ಇನ್ನೂ ಇದೇ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಪನೋರಮಾ ವಿಭಾಗದಲ್ಲಿ ಕನ್ನಡದ ಸಿನಿಮಾ 'ರೈಲ್ವೇ ಚಿಲ್ಡ್ರನ್‌' ಪ್ರದರ್ಶನವಾಗ್ತಿದೆ.

English summary
Amitabh Bachchan to receive Indian Film Personality of the Year Award at IFFI 2017. ಐ.ಎಫ್.ಎಫ್.ಐ 2017: ಅಮಿತಾಬ್ ಗೆ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ನೀಡಿ ಗೌರವ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada