For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಗೆ FIAF ಪ್ರಶಸ್ತಿ: 'ಜೀವಂತ ದಂತಕಥೆ' ಎಂದು ಕರೆದ ಕ್ರಿಸ್ಟೋಫರ್ ನೋಲನ್

  |

  ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲ್ಮ್ ಆರ್ಕೈವ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಲಿವುಡ್ ನ ಖ್ಯಾತ ನಿರ್ದೇಶಕರಾದ ಮಾರ್ಟಿನ್ ಸ್ಕಾರ್ಸೆಸೆ ಮತ್ತು ಕ್ರಿಸ್ಟೋಫರ್ ನೋಲನ್ ಅಮಿತಾಬ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

  ಪ್ರಶಸ್ತಿ ಸ್ವೀಕರಿಸಿ ಬಳಿಕ ಫೋಟೋವನ್ನು ಅಮಿತಾಬ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2021ರ FIAF ಪ್ರಶಸ್ತಿಯನ್ನು ನೀಡಿರುವುದಕ್ಕೆ ನನಗೆ ತುಂಬಾ ಗೌರವವಿದೆ. ಇಂದು ಸಮಾರಂಭದಲ್ಲಿ ನನಗೆ ಪ್ರಶಸ್ತಿ ನೀಡಿದ್ದಕ್ಕಾಗಿ FIAF ಮಾರ್ಟಿನ್ ಸ್ಕಾರ್ಸೆಸೆ ಮತ್ತು ಕ್ರಿಸ್ಟೋಫರ್ ನೋಲನ್ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

  ಉತ್ತರಾಖಂಡ್ ಸಿಎಂ ಹೇಳಿಕೆಯನ್ನು ದಿಟ್ಟವಾಗಿ ಖಂಡಿಸಿದ ಅಮಿತಾಬ್ ಬಚ್ಚನ್ ಮೊಮ್ಮಗಳುಉತ್ತರಾಖಂಡ್ ಸಿಎಂ ಹೇಳಿಕೆಯನ್ನು ದಿಟ್ಟವಾಗಿ ಖಂಡಿಸಿದ ಅಮಿತಾಬ್ ಬಚ್ಚನ್ ಮೊಮ್ಮಗಳು

  ಇನ್ನು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿರ್ದೇಶಕ ಮಾರ್ಟಿನ್, ಸಿನಿಮಾ ಒಂದು ಶತಮಾನಕ್ಕಿಂತಲೂ ಹಳೆಯದಾಗಿದೆ ಮತ್ತು ದುಃಖಕರ, ದುರಂತವೆಂದರೆ ಶ್ರೀಮಂತ ಮತ್ತು ವೈವಿಧ್ಯಮಯ ಚಲನಚಿತ್ರ ಪರಂಪರೆಯನ್ನು ಶಾಶ್ವತವಾಗಿ ಕಳೆದುಕೊಂಡಿದೆ. ಭಾರತದ ಚಲನಚಿತ್ರ ಪರಂಪರೆಯನ್ನು ಕಾಪಾಡುವ ಅಮಿತಾಬ್ ಬಚ್ಚನ್ ಅವರ ಕಾಲ ನಿಜವಾಗಿಯೂ ಅಸಾಧಾರಣವಾಗಿದೆ' ಎಂದಿದ್ದಾರೆ.

  ಯುವರತ್ನ ಟ್ರೈಲರ್ ನೋಡಿ ಫಿದಾ ಆದ್ರು ಅಧೀರ ಸಂಜಯ್ ದತ್ | Filmibeat Kannada

  ಇನ್ನು ಇದೇ ಸಮಯದಲ್ಲಿ ಮಾತನಾಡಿದ ಕ್ರಿಸ್ಟೋಫರ್, ಅಮಿತಾಬ್ ಬಚ್ಚನ್ ಅವರ ಭೇಟಿಯನ್ನು ನೆನಪಿಸಿಕೊಂಡರು. ಒಂದೆರಡು ವರ್ಷಗಳ ಹಿಂದೆ ಫಿಲ್ಮ್ ಹೆರಿಟೇಜ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಸಿನಿಮಾರಂಗದ ಜೀವಂತ ದಂತಕಥೆಯನ್ನು ಭೇಟಿಯಾಗುವ ಭಾಗ್ಯ ನನಗೆ ದೊರೆತಿತ್ತು' ಎಂದು ಹೇಳಿದ್ದಾರೆ.

  English summary
  Bollywood Actor Amitabh Bachchan receives FIAF Award for Contribution to Cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X