For Quick Alerts
  ALLOW NOTIFICATIONS  
  For Daily Alerts

  'ಗುಡ್ ಬೈ' ಸಿನಿಮಾದಲ್ಲಿ ಈ ನಟಿಯೇ ಇರಲಿ ಎಂದು ಅಮಿತಾಬ್ ಹೇಳಿದ್ದು ಯಾರಿಗೆ ಮತ್ತೆ ಯಾಕೆ?

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಸಿನಿಮಾರಂಗದಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಎರಡನೇ ಸಿನಿಮಾಗೆ ಸಹಿ ಮಾಡಿದ್ದು, ಆಗಲೇ ಮುಹೂರ್ತ ಕೂಡ ನೆರವೇರಿದೆ.

  ಚಿತ್ರಕ್ಕೆ ಗುಡ್ ಬೈ ಎಂದು ಶೀರ್ಷಿಕೆ ಇಡಲಾಗಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಅನೇಕ ವಿಚಾರಗಳಿಂದ ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿ ರಶ್ಮಿಕಾ ಅಮಿತಾಬ್ ಮಗಳಾಗಿ ನಟಿಸುತ್ತಿದ್ದಾರೆ ಎನ್ನುವ ಮಾತುಕೇಳಿ ಬರುತ್ತಿದೆ.

  ನಾನು ಆ ಸ್ಟಾರ್ ನಟನ ಹುಚ್ಚು ಅಭಿಮಾನಿ, ಅವರಿಗಾಗಿ ಸಹೋದರರ ಜೊತೆ ಕಿತ್ತಾಡುತ್ತಿದ್ದೆ; ನಟ ಪವನ್ ಕಲ್ಯಾಣ್ನಾನು ಆ ಸ್ಟಾರ್ ನಟನ ಹುಚ್ಚು ಅಭಿಮಾನಿ, ಅವರಿಗಾಗಿ ಸಹೋದರರ ಜೊತೆ ಕಿತ್ತಾಡುತ್ತಿದ್ದೆ; ನಟ ಪವನ್ ಕಲ್ಯಾಣ್

  ಚಿತ್ರದಲ್ಲಿ ಮತ್ತೋರ್ವ ಸ್ಟಾರ್ ಹಿರಿಯ ಕಲಾವಿದೆ ಬಣ್ಣ ಹಚ್ಚುತ್ತಿದ್ದಾರೆ. ಅಂದಹಾಗೆ ಈ ನಟಿಯೇ ಇರಲಿ ಅಂತ ಸ್ವತಃ ಅಮಿತಾಬ್ ಅವರೇ ಸೂಚಿಸಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಗುಲ್ಲಾಗಿದೆ. ಅಷ್ಟಕ್ಕೂ ಆ ನಟಿ ಮತ್ಯಾರು ಅಲ್ಲ ನೀನಾ ಗುಪ್ತಾ. ಚಿತ್ರದಲ್ಲಿ ನೀನಾ ಗುಪ್ತಾ ಅಮಿತಾಬ್ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಬಾಲಿವುಡ್ ಲೆಜೆಂಡ್ ಅಮಿತಾಬ್ ಜೊತೆ ನಟಿಸಲು ಅನೇಕ ನಟಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹಾಗಿರುವಾಗ ಅಮಿತಾಬ್ ಅವರೇ ನೀನಾ ಗುಪ್ತಾ ಹೆಸರು ಸೂಚಿಸಿರುವುದು ಅಚ್ಚರಿ ಮೂಡಿಸಿದೆ. ಅಮಿತಾಬ್ ಜೊತೆ ಸಾಕಷ್ಟು ನಟಿಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಗುಡ್ ಬೈ ನಲ್ಲಿ ಫ್ರೆಶ್ ಪೇರ್ ಇರಲಿ ಎನ್ನುವ ಕಾರಣಕ್ಕೆ ನೀನಾ ಗುಪ್ತಾ ಹೆಸರು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  ನೀನಾ ಗುಪ್ತಾ ಸದ್ಯ ಅದ್ಭುತ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅನೇಕ ವರ್ಷಗಳು ಚಿತ್ರರಂಗದಿಂದ ಮರೆಯಾಗಿದ್ದ ನೀನಾ ಗುಪ್ತಾ 2018ರಲ್ಲಿ ಬಿಡುಗಡೆಯಾದ ಬದೈ ಹೋ ಸಿನಿಮಾ ಮತ್ತೆ ಚಿತ್ರಪ್ರಿಯರ ಮನಗೆದ್ದಿದ್ದರು. ಬಳಿಕ ಮತ್ತೆ ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ನೀನಾ ಗುಪ್ತಾ ಇದೀಗ ಅಮಿತಾಬ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

  ಈ ಬಗ್ಗೆ ಮಾತನಾಡಿದ್ದ ನೀನಾ ಗುಪ್ತ, 'ಕಥೆ ಕೇಳಿ ತುಂಬಾ ಇಷ್ಟವಾಗಿದೆ. ಅಮಿತಾಬ್ ಜೊತೆ ತೆರೆಹಂಚಿಕೊಳ್ಳುವ ಕನಸು ಈ ಸಿನಿಮಾ ಮೂಲಕ ನನಸಾಗಿದೆ. ಅವರ ಜೊತೆ ನಟಿಸಲು ಉತ್ಸುಕನಾಗಿದ್ದೀನಿ' ಎಂದು ಹೇಳಿದ್ದಾರೆ.

  ಪತ್ನಿಯ ಶಕ್ತಿ ನೋಡಿ ಕೊಹ್ಲಿ ಶಾಕ್:ಬಾಹುಬಲಿಯಾದ ಅನುಷ್ಕಾ | Filmibeat Kannada

  ಗುಡ್ ಬೈ ಚಿತ್ರಕ್ಕೆ ವಿಕಾಸ್ ಬಾಹ್ಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕ್ವೀನ್, ಸೂಪರ್ 30 ಅಂತ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ವಿಕಾಸ್ ಇದೀಗ ಗುಡ್ ಬೈ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Actor Amitabh Bachchan recommended Neena Gupta name for good boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X