ಎರಡನೇ ಬಾರಿಯೂ ಕೋವಿಡ್ ವಿರುದ್ಧ ಅಮಿತಾಬ್ ಬಚ್ಚನ್‌ಗೆ ಗೆಲುವು

ಎರಡನೇ ಬಾರಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಹಿರಿಯ ನಟ ಅಮಿತಾಬ್ ಬಚ್ಚನ್ ಇದೀಗ ಗುಣಮುಖರಾಗಿದ್ದು, ಶೂಟಿಂಗ್‌ಗೆ ಮರಳಿದ್ದಾರೆ.

ಆಗಸ್ಟ್ 23 ರಂದು ಟ್ವೀಟ್ ಮಾಡಿದ್ದ ನಟ ಅಮಿತಾಬ್ ಬಚ್ಚನ್ ತಮಗೆ ಕೋವಿಡ್ ಆಗಿರುವುದಾಗಿಯೂ ತಮ್ಮ ಸಂಪರ್ಕದಲ್ಲಿರುವವರೆಲ್ಲರೂ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದ್ದರು.

ಎರಡನೇ ಬಾರಿ ಕೋವಿಡ್ ಬಂದ ಎಂಟು ದಿನದಲ್ಲಿ ಪೂರ್ಣ ಗುಣಮುಖರಾಗಿರುವ ನಟ ಅಮಿತಾಬ್ ಬಚ್ಚನ್ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಮೊದಲ ಬಾರಿಗೆ ಬಚ್ಚನ್ ಅವರಿಗೆ ಕೋವಿಡ್ ಬಂದಾಗ ಅಭಿಮಾನಿಗಳು ಆತಂಕಿತರಾಗಿದ್ದರು. ಆಗ ಅವರಿಗೆ ಸಾಕಷ್ಟು ಆರೋಗ್ಯ ವ್ಯತ್ಯಯ ಆಗಿತ್ತು. ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಿ ಸತತ 28 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆದರೆ ಈ ಬಾರಿ ಕೋವಿಡ್, ಅಮಿತಾಬ್‌ ಬಚ್ಚನ್‌ಗೆ ಹೆಚ್ಚಿನ ಸಮಸ್ಯೆ ಮಾಡಿಲ್ಲ.

Amitabh Bachchan Recovered From COVID 19

ಅಮಿತಾಬ್ ಬಚ್ಚನ್, ಈಗಲೂ ಪ್ರತಿದಿನ ವ್ಯಾಯಾಮ ಮಾಡುತ್ತಾ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯತ್ನಿಸುತ್ತಾರೆ. ಜೊತೆಗೆ ಕೋವಿಡ್ ಲಸಿಕೆಯನ್ನೂ ಸಹ ಸಮಯಕ್ಕೆ ಸರಿಯಾಗಿ ಹಾಕಿಸಿಕೊಂಡಿದ್ದಾರೆ ಹಾಗಾಗಿ ಈ ಬಾರಿ ಅಮಿತಾಬ್ ಬಚ್ಚನ್ ಅವರಿಗೆ ಕೊವಿಡ್, ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡಲಿಲ್ಲ.

ಅಮಿತಾಬ್ ಬಚ್ಚನ್ ಅವರಿಗೆ ಈಗ 79 ವರ್ಷ ವಯಸ್ಸು. ಅವರು ಯಕೃತ್ತಿನ ಸಮಸ್ಯೆಯಿಂದ ಬಹುವರ್ಷಗಳಿಂದ ಬಳಲುತ್ತಿದ್ದಾರೆ. ಅವರಿಗೆ ಅಪಘಾತವಾಗಿದ್ದಾಗ ರಕ್ತದಾನ ಮಾಡಿದ ಒಬ್ಬ ವ್ಯಕ್ತಿಗೆ ಹೆಪಟೈಟಿಸ್ ಬಿ ಇತ್ತು ಅದು ಬಚ್ಚನ್ ಅವರಿಗೂ ತಗುಲಿಬಿಟ್ಟಿದೆ. ಜೊತೆಗೆ ಬೆನ್ನಿನ ಸಮಸ್ಯೆಯಿಂದಲೂ ಬಚ್ಚನ್ ಬಳಲುತ್ತಿದ್ದಾರೆ. ಅವರಿಗೆ ಟ್ಯುಬರ್‌ಕ್ಯುಲೋಸಿಸ್ ಆಫ್ ಸ್ಪೈನ್ ಕಾಡುತ್ತಿದೆ. ಇದೆಲ್ಲ ಕಾರಣಗಳಿಂದ ಅಮಿತಾಬ್ ಅವರಿಗೆ ಕೋವಿಡ್ ಆದಾಗ ಅಭಿಮಾನಿಗಳು ಆತಂಕಿತರಾಗಿದ್ದರು. ಆದರೆ ಈಗ ಎಲ್ಲವೂ ನಿರಾಳ, ಎರಡನೇ ಬಾರಿ ಕೋವಿಡ್ ವಿರುದ್ಧ ಗೆದ್ದು ಮತ್ತೆ ಚಿತ್ರೀಕರಣಕ್ಕೆ ಅಮಿತಾಬ್ ಬಚ್ಚನ್ ಮರಳಿದ್ದಾರೆ.

More from Filmibeat

English summary
Actor Amitabh Bachchan recovered from COVID 19 and back to movie shooting. He tested positive for COVID 19 second time on August 23.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X