twitter
    For Quick Alerts
    ALLOW NOTIFICATIONS  
    For Daily Alerts

    ಅಮಿತಾಬ್ ಬಚ್ಚನ್ ಈ ಎರಡು 'ಸ್ಟೈಲ್' ಹಿಂದೆ ಇರೋದು ನೋವಿನ ಕಥೆ

    |

    ಸಿನಿಮಾ ತಾರೆಯರು ಚಿತ್ರಕ್ಕಾಗಿ ಮಾಡುವ ಸ್ಟೈಲ್ ಅನ್ನು ಜನರೂ ಅನುಕರಿಸುತ್ತಾರೆ. ಸುದೀಪ್ ಅವರ 'ಹೆಬ್ಬುಲಿ' ಹೇರ್ ಸ್ಟೈಲ್, ಕಲ್ಪನಾ ಅವರ ಸೀರೆಯ ವೈಶಿಷ್ಟ್ಯ, ಮುಂಗಾರು ಮಳೆಯಲ್ಲಿ ಗಣೇಶ್ ಬೆರಳಿಗೆ ಹಾಕಿದ್ದ ಉಂಗುರ ಮತ್ತು ಕತ್ತಿನ ಚೈನ್ ಇವೆಲ್ಲವನ್ನೂ ಅಭಿಮಾನಿಗಳು ಫಾಲೋ ಮಾಡಿದ್ದರು. ಹಾಗೆಯೇ ಹಿಂದಿಯ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪ್ರತಿ ಸಿನಿಮಾದ ಸ್ಟೈಲ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿತ್ತು.

    Recommended Video

    ನಿವಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ..! | Nivedhita Gowda | Chandan Shetty

    ಅಮಿತಾಬ್ ಅವರ ಕೆಲವು ಸ್ಟೈಲ್‌ಗಳು ಸಾಕಷ್ಟು ಜನಪ್ರಿಯವಾಗಿದ್ದವು. 1984ರಲ್ಲಿ ಬಿಡುಗಡೆಯಾದ 'ಶರಾಬಿ' ಚಿತ್ರದ ಹಾಡೊಂದರಲ್ಲಿ ಬಿಳಿ ಸೂಟ್ ಧರಿಸಿ, ಬಲಗೈನಲ್ಲಿ ಗ್ಲಾಸ್ ಹಿಡಿದು ಎಡಗೈಯನ್ನು ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ಸ್ಟೈಲ್ ವಿಶೇಷ ಎನಿಸಿತ್ತು. ಅದೇ ವರ್ಷ 'ಇಂಕ್ವಿಲಾಬ್' ಚಿತ್ರದಲ್ಲಿಯೂ ಅಮಿತಾಬ್ ಕೈಗೆ ಕರ್ಚೀಫ್ ಕಟ್ಟಿಕೊಂಡು ನರ್ತಿಸುವ ದೃಶ್ಯವೂ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಅಮಿತಾಬ್ ರೀತಿಯೇ ಅನೇಕರು ಕೈಗೆ ಕರವಸ್ತ್ರ ಕಟ್ಟಿಕೊಂಡು ಓಡಾಡುವುದು ಫ್ಯಾಷನ್ ಆಗಿತ್ತು. ಆದರೆ ಅದರ ಹಿಂದಿನ ಕಥೆ ಬೇರೆಯೇ ಇದೆ. ಮುಂದೆ ಓದಿ...

    ಆನ್ ಲೈನ್ ನಲ್ಲಿ ನೇರವಾಗಿ ಬಿಡುಗೆಯಾಗುತ್ತಿದೆ ಅಮಿತಾಬ್ ಬಹು ನಿರೀಕ್ಷೆಯ ಸಿನಿಮಾಆನ್ ಲೈನ್ ನಲ್ಲಿ ನೇರವಾಗಿ ಬಿಡುಗೆಯಾಗುತ್ತಿದೆ ಅಮಿತಾಬ್ ಬಹು ನಿರೀಕ್ಷೆಯ ಸಿನಿಮಾ

    ಫ್ಯಾಷನ್ ಆಗಿದ್ದ ಸ್ಟೈಲ್‌ಗಳು

    ಫ್ಯಾಷನ್ ಆಗಿದ್ದ ಸ್ಟೈಲ್‌ಗಳು

    ಈ ಎರಡೂ ಸ್ಟೈಲ್‌ಗಳು ಆಗಿನ ಕಾಲದಲ್ಲಿ ಯುವಜನರ ಪಾಲಿಗೆ ವಿಶಿಷ್ಟ ಫ್ಯಾಷನ್ ರೀತಿ ಕಂಡಿತ್ತು. ಆದರೆ ವಾಸ್ತವವಾಗಿ ಅಮಿತಾಬ್ ಅವುಗಳನ್ನು ಫ್ಯಾಷನ್‌ಗಾಗಿ ಮಾಡಿರಲಿಲ್ಲ. ಅವರಿಗೆ ತಮ್ಮ ಗಾಯವನ್ನು ಮುಚ್ಚಿಕೊಳ್ಳಲು ಅನಿವಾರ್ಯವಾಗಿ ಇದ್ದ ಆಯ್ಕೆಗಳಾಗಿದ್ದವು. ಆದರೆ ಅವು ಫ್ಯಾಷನ್ ಆಗುತ್ತದೆ ಎಂದು ಅವರೂ ಭಾವಿಸಿರಲಿಲ್ಲ.

    ದೀಪಾವಳಿ ಪಟಾಕಿ

    ದೀಪಾವಳಿ ಪಟಾಕಿ

    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆಯುವಾಗ ಅಮಿತಾಬ್ ಅವರ ಕೈ ಬೆರಳುಗಳಿಗೆ ಗಾಯವಾಗಿತ್ತು. ಅವು ವಾಸಿಯಾಗಲು ಹಲವು ದಿನಗಳು ಬೇಕಾಗಿತ್ತು. ಆದರೆ ಅದರ ನಡುವೆಯೇ ಚಿತ್ರೀಕರಣ ಮಾಡಬೇಕಿದ್ದರಿಂದ ಅಮಿತಾಬ್ ಕೈಗೆ ಆಗಿದ್ದ ಗಾಯವನ್ನು ತೋರಿಸದಂತೆ ಈ ಸ್ಟೈಲ್ ಮಾಡಿದ್ದರು ಎಂಬುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

    ರಿಷಿ ಕಪೂರ್‌ರನ್ನು ನೋಡಲು ಅಮಿತಾಬ್ ಒಮ್ಮೆಯೂ ಆಸ್ಪತ್ರೆಗೆ ಹೋಗಲಿಲ್ಲ: ಕಾರಣ ಇದುರಿಷಿ ಕಪೂರ್‌ರನ್ನು ನೋಡಲು ಅಮಿತಾಬ್ ಒಮ್ಮೆಯೂ ಆಸ್ಪತ್ರೆಗೆ ಹೋಗಲಿಲ್ಲ: ಕಾರಣ ಇದು

    ಎರಡು ತಿಂಗಳು ಬೇಕಾಯಿತು

    ಎರಡು ತಿಂಗಳು ಬೇಕಾಯಿತು

    'ಮಾನವ ದೇಹದಲ್ಲಿ ಮರು ಸಂರಚನೆ ಮಾಡಲು ಅತ್ಯಂತ ಕಷ್ಟಕರವಾದ ಅಂಗಗಳೆಂದರೆ ಬೆರಳುಗಳು. ಏಕೆಂದರೆ ಅವುಗಳಿಗೆ ನಿರಂತರ ಚಲನೆ ಅಗತ್ಯ. ಚಲನೆ ನಿಂತರೆ ಅವು ಸೆಟೆದುಕೊಂಡು ಬಿಡುತ್ತವೆ. ದೀಪಾವಳಿ ಬಾಂಬ್‌ನಿಂದ ನನ್ನ ಕೈಯನ್ನು ಸುಟ್ಟುಕೊಂಡಿದ್ದೆ. ಹೆಬ್ಬೆರಳಿನಿಂದ ತೋರುಬೆರಳಿನವರೆಗಿನ ಬೆರಳುಗಳನ್ನು ಚಲಿಸುವಂತೆ ಮಾಡಲು ಎರಡು ತಿಂಗಳು ಬೇಕಾಯಿತು. ನೋಡಿ ಎಷ್ಟು ಸೃಜನಶೀಲವಾಗಿತ್ತು' ಎಂದು ಫೋಟೊ ಹಂಚಿಕೊಂಡಿದ್ದಾರೆ.

    ಗಾಯವಾದರೂ ಶೂಟಿಂಗ್ ಮಾಡಬೇಕಿತ್ತು

    ಗಾಯವಾದರೂ ಶೂಟಿಂಗ್ ಮಾಡಬೇಕಿತ್ತು

    ಬಳಿಕ ತಮ್ಮ ಬ್ಲಾಗ್‌ನಲ್ಲಿ ಅದರ ಕುರಿತು ವಿವರವಾಗಿ ಬರೆದಿದ್ದಾರೆ. ಕೈಗೆ ಗಾಯವಾದರೂ ಕೆಲಸ ಮುಂದುವರಿಸಬೇಕಿತ್ತು. ಕೈಗೆ ಕರ್ಚೀಫ್ ಕಟ್ಟುವುದೋ ಅಥವಾ ಜೇಬಿನೊಳಗೆ ಕೈ ಇರಿಸಿಕೊಳ್ಳುವ ಆಟಿಟ್ಯೂಡ್‌ನೊಂದಿಗೋ ಕೆಲಸ ನಡೆಯಿತು. ಅದು ಮುಂದುವರೆಯಲೇ ಬೇಕಿತ್ತು ಎಂದು ಹೇಳಿದ್ದಾರೆ. ಆದರೆ ಅವುಗಳ ಹಿಂದಿನ ಪೂರ್ಣ ಕಥೆಯನ್ನು ಹೇಳಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದಾರೆ.

    English summary
    Bollywood super star Amitabh Bachchan has revealed the real story behind his Sharaabi song and Inquilaab song style.
    Friday, May 15, 2020, 10:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X