For Quick Alerts
  ALLOW NOTIFICATIONS  
  For Daily Alerts

  'ಅಮಿತಾಭ್ ಬಚ್ಚನ್' ಅಂತ ಹೆಸರಿಟ್ಟಿದ್ದು ಯಾರೆಂದು ಹೇಳಿದ ಬಿಗ್-ಬಿ

  |

  ಬಾಲಿವುಡ್ ನಟ ಅಮಿತಾಭ್ ಬಚ್ಚನ್ 1942ರಲ್ಲಿ ಅಲಹಬಾದ್‌ನಲ್ಲಿ ಜನಿಸಿದರು. ಹಿಂದಿ ಕವಿ ಹರಿವಂಶ್ ರೈ ಬಚ್ಚನ್ ಮತ್ತು ಸಾಮಾಜಿಕ ಹೋರಾಟಗಾರ್ತಿ ತೇಜ ಬಚ್ಚನ್ ದಂಪತಿಯ ಮಗನಾಗಿ ಹುಟ್ಟಿದರು.

  ಬಚ್ಚನ್‌ಗೆ ಮೊದಲು ಇಂಕ್ವಿಲಾಬ್ ಎಂದು ಹೆಸರಡಲು ತಂದೆ-ತಾಯಿ ತೀರ್ಮಾನಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ಭಾರತೀಯರ ಪ್ರಮುಖ ಘೋಷಣೆಯಾಗಿದ್ದ ಇಂಕ್ವಿಲಾಬ್ ಜಿಂದಾಬಾದ್ ಪದದಿಂದ ಸ್ಫೂರ್ತಿಯಾಗಿ ತನ್ನ ಮಗನಿಗೆ 'ಇಂಕ್ವಿಲಾಬ್' ಎಂದು ಹೆಸರಿಡಲು ಮುಂದಾಗಿದ್ದರು. ಆದರೆ ಆ ಹೆಸರು ಇಡಲಾಗಿಲ್ಲ.

  ಕರೋಡ್ ಪತಿ ಶೋನಲ್ಲಿ ಭಾಗಿಯಾಗಿದ್ದ ಫರ್ಹಾ ಖಾನ್‌ಗೆ ಕೊರೊನಾ ಪಾಸಿಟಿವ್; ದೀಪಿಕಾ, ಅಮಿತಾಬ್ ವರದಿ ಏನು?ಕರೋಡ್ ಪತಿ ಶೋನಲ್ಲಿ ಭಾಗಿಯಾಗಿದ್ದ ಫರ್ಹಾ ಖಾನ್‌ಗೆ ಕೊರೊನಾ ಪಾಸಿಟಿವ್; ದೀಪಿಕಾ, ಅಮಿತಾಬ್ ವರದಿ ಏನು?

  ಇಂಕ್ವಿಲಾಬ್ ಬದಲು ಅಮಿತಾಭ್ ಎಂದು ನಾಮಕರಣ ಮಾಡಲಾಯಿತು. ಅಷ್ಟಕ್ಕೂ, ಈ ಹೆಸರಿಡಲು ಸಲಹೆ ಕೊಟ್ಟಿದ್ದು ಯಾರು ಎಂದು ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 13ರ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.

  ಬಚ್ಚನ್‌ಗೆ ಅಮಿತಾಭ್ ಎಂದು ಹೆಸರಿಡಲು ಸಲಹೆ ಕೊಟ್ಟಿದ್ದು ತಮ್ಮ ತಂದೆಯ ಸ್ನೇಹಿತ, ಕವಿ ಸುಮಿತ್ರಾನಂದ ಪಂತ್ ಎಂದು ತಿಳಿಸಿದ್ದಾರೆ.

  ಸುಮಿತ್ರಾನಂದನ್ ಪಂತ್ 20ನೇ ಶತಮಾನದ ಅತ್ಯಂತ ಪ್ರಸಿದ್ಧ ಕವಿಗಳಲ್ಲಿ ಒಬ್ಬರು. ಪ್ರಕೃತಿ, ಜನರು ಮತ್ತು ಸೌಂದರ್ಯದಿಂದ ಪ್ರೇರಿತವಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಬರವಣಿಗೆಗೆ ಹಲವಾರು ಪ್ರಶಸ್ತಿಗಳು ಕೂಡ ಸಿಕ್ಕಿದೆ. ಸುಮಿತ್ರಾನಂದನ್ ಡಿಸೆಂಬರ್ 28, 1977 ರಂದು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಿಧನರಾದರು.

  ಅಮಿತಾಭ್ ಅಭಿನಯದ 'ಚೆಹ್ರೆ' ಸಿನಿಮಾ ಕೊನೆಯದಾಗಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ, ರಿಯಾ ಚಕ್ರವರ್ತಿ ನಟಿಸಿದ್ದರು. ಜುಂಡ್, ಬ್ರಹ್ಮಾಸ್ತ್ರ, ಬಟರ್‌ಫ್ಲೈ, ಮೇಡೇ, ಗುಡ್ ಬೈ ಹಾಗೂ ಪ್ರಭಾಸ್-ನಾಗ್ ಅಶ್ವಿನ್ ಪ್ರಾಜೆಕ್ಟ್‌ನಲ್ಲಿ ಅಮಿತಾಭ್ ನಟಿಸುತ್ತಿದ್ದಾರೆ.

  English summary
  Bollywood Actor Amitabh Bachchan reveals how he got this name?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X