ಅಮಿತಾಬ್ ಬಚ್ಚನ್ ಮನೆಗೆ 'ಪ್ರತೀಕ್ಷಾ' ಎಂದು ಹೆಸರಿಟ್ಟಿದ್ದೇಕೆ?

ನಟ ಅಮಿತಾಬ್ ಅದ್ಭುತ ನಟರಾಗಿರುವ ಜೊತೆಗೆ ಕಾವ್ಯಾಸಕ್ತರೂ ಹೌದು. ಅವರ ತಂದೆ ಹರಿವಂಶರಾಯ್ ಬಚ್ಚನ್ ಸ್ವತಃ ಹಿಂದಿ ಭಾಷೆಯ ಪ್ರಮುಖ ಸಾಹಿತಿಗಳಾಗಿದ್ದವರು.

ಇದೀಗ ಕೌನ್ ಬನೇಗಾ ಕರೋಡ್‌ಪತಿ 14ನೇ ಸೀಸನ್ ನಿರೂಪಣೆ ಮಾಡುತ್ತಿರುವ ಅಮಿತಾಬ್ ಬಚ್ಚನ್, ಸ್ಪರ್ಧಿಗಳೊಟ್ಟಿಗೆ ಲೋಕಾಭಿರಾಮವಾಗಿ ಮಾತನಾಡುವುದುಂಟು. ಈ ಸಂದರ್ಭದಲ್ಲಿ ತಮ್ಮ ಸಿನಿಮಾಗಳು, ಕುಟುಂಬ, ತಮ್ಮ ಜೀವನದ ಕೆಲವು ಆಸಕ್ತಿಕರ ಸಂಗತಿಗಳ ಬಗ್ಗೆ ಬಚ್ಚನ್ ಮಾತನಾಡುತ್ತಾರೆ.

ಇತ್ತೀಚೆಗಿನ ಕೌನ್ ಬನೇಗಾ ಕರೋಡ್‌ಪತಿ ಎಪಿಸೋಡ್ ಒಂದರಲ್ಲಿ ತಮ್ಮ ಮನೆಯ ಹೆಸರಿನ ಹಿಂದಿನ ಕತೆಯ ಬಗ್ಗೆ ಅಮಿತಾಬ್ ಬಚ್ಚನ್ ಮಾತನಾಡಿದ್ದಾರೆ. ಅಮಿತಾಬ್ ಬಚ್ಚನ್ ಮನೆಗೆ 'ಪ್ರತೀಕ್ಷಾ' ಎಂಬ ಸುಂದರ ಹೆಸರಿದೆ. ಆ ಹೆಸರೇಕೆ ಇಡಲಾಗಿದೆ, ಆ ಹೆಸರು ಇಟ್ಟವರು ಯಾರು ಎಂಬಿತ್ಯಾದಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಮನೆಯ ಹೆಸರು ಪ್ರತೀಕ್ಷಾ

ಅಮಿತಾಬ್ ಬಚ್ಚನ್ ಮನೆಯ ಹೆಸರು ಪ್ರತೀಕ್ಷಾ

ಕೌನ್ ಬನೇಗಾ ಕರೋಡ್‌ಪತಿ ಸೀಸನ್ 14 ರಲ್ಲಿ ಭಾಗವಹಿಸಿದ್ದ ಸ್ಪರ್ಧಿಯೊಬ್ಬರ ಸಹೋದರಿಯ ಹೆಸರು ಪ್ರತೀಕ್ಷಾ ಎಂದಿತ್ತು. ಅದನ್ನು ಕೇಳಿದ ಅಮಿತಾಬ್ ಬಚ್ಚನ್, 'ಪ್ರತೀಕ್ಷಾ' ಬಹಳ ಸುಂದರವಾದ ಹೆಸರು. ನಮ್ಮ ಮನೆಯ ಹೆಸರು ಸಹ ಪ್ರತೀಕ್ಷಾ' ಎಂದರು. ''ಜನ ನನ್ನ ಕೇಳುತ್ತಿರುತ್ತಾರೆ. ನಿಮ್ಮ ಮನೆಗೆ ಪ್ರತೀಕ್ಷಾ ಎಂದು ಹೆಸರು ಏಕೆ ಇಟ್ಟಿರಿ ಎಂದು. ಆದರೆ ಅದು ನಾನಿಟ್ಟ ಹೆಸರಲ್ಲ ನನ್ನ ತಂದೆಯವರು ಇಟ್ಟ ಹೆಸರು'' ಎಂದರು ಅಮಿತಾಬ್ ಬಚ್ಚನ್.

ಕವನವೊಂದರಲ್ಲಿ ಪ್ರತೀಕ್ಷಾ ಎಂಬ ಪದವಿದೆ: ಬಚ್ಚನ್

ಕವನವೊಂದರಲ್ಲಿ ಪ್ರತೀಕ್ಷಾ ಎಂಬ ಪದವಿದೆ: ಬಚ್ಚನ್

''ನಮ್ಮ ತಂದೆಯವರ ಕವನವೊಂದರಲ್ಲಿ ಪ್ರತೀಕ್ಷಾ ಎಂಬ ಪದ ಬರುತ್ತದೆ. ಕವಿತೆಯ ಸಾಲು ಹೀಗಿದೆ. 'ಸ್ವಾಗತ್ ಸಬ್ ಕೇಲಿಯೇ ಹೇ ಪರ್ ನಹೀ ಹೇ ಕಿಸೀ ಕೇ ಲಿಯೆ ಪ್ರತೀಕ್ಷಾ' (ಸ್ವಾಗತ ಎಲ್ಲರಿಗೂ ಇದೆ ಆದರೆ ಯಾರ ನಿರೀಕ್ಷೆಯೂ ಇಲ್ಲ) ಅದೇ ಪದವನ್ನು ಮನೆಯ ಹೆಸರಾಗಿ ಇಡಲಾಗಿದೆ'' ಎಂದರು ಅಮಿತಾಬ್ ಬಚ್ಚನ್. 'ಪ್ರತೀಕ್ಷಾ' ಮನೆಯು ಮುಂಬೈನ ಜುಹು ಪ್ರದೇಶದಲ್ಲಿದೆ. ಈ ಮನೆಯ ಬಗ್ಗೆ ಅಮಿತಾಬ್ ಬಚ್ಚನ್‌ಗೆ ವಿಶೇಷ ಪ್ರೀತಿ. ಈ ಮನೆಯಲ್ಲಿ ಹರಿವಂಶರಾಯ್ ಬಚ್ಚನ್ ತಮ್ಮ ಹೆಚ್ಚಿನ ಸಮಯ ಕಳೆದಿದ್ದಾರೆ.

ರಮೇಶ್ ಸಿಪ್ಪಿಯಿಂದ ದೊರೆತ ಉಡುಗೊರೆ

ರಮೇಶ್ ಸಿಪ್ಪಿಯಿಂದ ದೊರೆತ ಉಡುಗೊರೆ

ಅಮಿತಾಬ್ ಬಚ್ಚನ್ ಕುಟುಂಬ ಹೆಚ್ಚು ವಾಸವಿರುವುದು ಜಲ್ಸಾ ಹೆಸರಿನ ಮನೆಯಲ್ಲಿ. ಬಚ್ಚನ್‌ರ ಇಡೀ ಕುಟುಂಬ ಇರುವುದು ಇಲ್ಲಿಯೇ. ಜುಹು ಏರಿಯಾದಲ್ಲಿರುವ ಐಶಾರಾಮಿ ಮನೆ ಜಲ್ಸಾ. ಈ ಮನೆಯಿಂದ ಬಚ್ಚನ್‌ರ 'ಪ್ರತೀಕ್ಷಾ' ಮನೆಗೆ ಹೆಚ್ಚು ದೂರವೇನೂ ಇಲ್ಲ. ಅಮಿತಾಬ್ ಬಚ್ಚನ್‌ರಿಗೆ ಪ್ರತೀಕ್ಷಾ ಮನೆಯ ಮೇಲೆ ಹೆಚ್ಚು ಪ್ರೀತಿ. ಅಂದಹಾಗೆ ಜಲ್ಸಾ ಮನೆ ನಿರ್ಮಾಣವಾದ ಜಾಗವನ್ನು ಶೋಲೆ ಸಿನಿಮಾದ ನಿರ್ದೇಶಕ ರಮೇಶ್ ಸಿಪ್ಪಿ ಬಚ್ಚನ್‌ಗೆ ಉಡುಗೊರೆಯಾಗಿ ನೀಡಿದ್ದರು. ಆ ನಂತರ ಬಚ್ಚನ್ ಅದರಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆ ನಿರ್ಮಾಣ ಮಾಡಿಕೊಂಡರು.

ಹಲವು ಸಿನಿಮಾಗಳಲ್ಲಿ ಬಚ್ಚನ್ ಬ್ಯುಸಿ

ಹಲವು ಸಿನಿಮಾಗಳಲ್ಲಿ ಬಚ್ಚನ್ ಬ್ಯುಸಿ

ಅಮಿತಾಬ್ ಬಚ್ಚನ್ ಗೆ ಈಗ 79 ವರ್ಷ ವಯಸ್ಸು. ಈಗಲೂ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಚ್ಚನ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಅವರ ನಟನೆಯ 'ಗುಡ್ ಬೈ' ಸಿನಿಮಾ ಮುಂದಿನ ತಿಂಗಳು ಏಳಕ್ಕೆ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸಿದ್ದಾರೆ. 'ಊಂಚಾಯಿ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್-ದೀಪಿಕಾ ಪಡುಕೋಣೆ ಜೊತೆಗೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಗಣ್‌ಪತ್' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Amitabh Bachchan reveled why his house named as Prateeksha. He said his father named the house as Prateeksha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X