twitter
    For Quick Alerts
    ALLOW NOTIFICATIONS  
    For Daily Alerts

    ಅದ್ಭುತ ಕಲಾವಿದ ಬಚ್ಚನ್ ಅವರ ಅದ್ಭುತ ಸಿನಿಮಾಗಳ ಜೊತೆ ಒಂದು ಸುತ್ತು

    By Naveen
    |

    ಅಮಿತಾಬ್ ಬಚ್ಚನ್... ಭಾರತ ಸಿನಿಮಾ ಜಗತ್ತಿನ ದೈತ್ಯ ಪ್ರತಿಭೆ. ಅವರನ್ನು ತೆರೆ ಮೇಲೆ ನೋಡುವುದೇ ಒಂದು ಚೆಂದ. ಸಿನಿಮಾದಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲ ಇರುವವರಿಗೆ ಅವರು ರೋಲ್ ಮಾಡೆಲ್. ಸಿನಿಮಾದ ಮೇಲೆ ಭಕ್ತಿ ಇರುವವರಿಗೆ ಅವರು ಗಾಡ್ ಫಾದರ್. ಒಂದೇ ಮಾತಿನಲ್ಲಿ ಹೇಳುವುದಾದರೆ ಇಂಡಿಯನ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಹೆಸರು ಎಂದೆಂದೂ ಅಜರಾಮರ.

    ಸದ್ಯ ನಟ ಅಮಿತಾಬ್ ಬಚ್ಚನ್ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ಪಡೆದಿದ್ದಾರೆ. 48ನೇ ಸಾಲಿನ 'IFFI 2017' (International Film Festival of India) ಪ್ರಕಟವಾಗಿದ್ದು, ಬಚ್ಚನ್ ಅವರಿಗೆ 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ಲಭಿಸಿದೆ. ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿದ್ದು 190ಕ್ಕೂ ಅಧಿಕ ಸಿನಿಮಾ ಮಾಡಿರುವ ಅಮಿತಾಬ್ ಸಾಧನೆ ಅಪಾರ. ಅವರ ಈ ಕೊಡುಗೆಯನ್ನು ಪರಿಗಣಿಸಿ ಇದೀಗ ಈ ಪ್ರಶಸ್ತಿಯನ್ನು ಅಮಿತಾಬ್ ಅವರಿಗೆ ನೀಡಲಾಗಿದೆ.

    ಅಂದಹಾಗೆ, 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ಪಡೆದ ಹಿನ್ನಲೆಯಲ್ಲಿ ನಟ ಅಮಿತಾಬ್ ಬಚ್ಚನ್ ಅವರ ಕೆಲವು ಮರೆಯಲಾಗದ ಸಿನಿಮಾಗಳ ಪಟ್ಟಿ ಇಲ್ಲಿದೆ ಓದಿ...

    ಸಾಥ್ ಹಿಂದುಸ್ತಾನಿ (1969)

    ಸಾಥ್ ಹಿಂದುಸ್ತಾನಿ (1969)

    'ಸಾಥ್ ಹಿಂದುಸ್ತಾನಿ' ಅಮಿತಾಬ್ ಅವರ ಮೊದಲ ಸಿನಿಮಾ. 1969 ರಲ್ಲಿ ರಿಲೀಸ್ ಆದ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಚ್ಚನ್ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದರು. ಈ ಚಿತ್ರವನ್ನು ಖ್ವಾಜಾ ಅಹ್ಮದ್ ಅಬ್ಬಾಸ್ ನಿರ್ದೇಶನ ಮಾಡಿದ್ದರು. ಚಿತ್ರದ ಏಳು ಮಂದಿ ನಾಯಕರ ಪೈಕಿ ಬಚ್ಚನ್ ಒಬ್ಬರಾಗಿದ್ದರು. ಮೊದಲ ಚಿತ್ರದಲ್ಲಿಯೇ 'ಅತ್ಯುತ್ತಮ ಹೊಸ ನಟ ರಾಷ್ಟ್ರೀಯ ಪ್ರಶಸ್ತಿ'ಯನ್ನು ಬಚ್ಚನ್ ಪಡೆದರು

    ಆನಂದ್ (1971)

    ಆನಂದ್ (1971)

    ಮೊದಲ ಬಾರಿಗೆ ಬಿಗ್ ಬಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದು ತಮ್ಮ 5ನೇ ಸಿನಿಮಾವಾದ 'ಆನಂದ್' ಚಿತ್ರದ ಮೂಲಕ. ಈ ಚಿತ್ರದಲ್ಲಿ ರಾಜೇಶ್ ಖನ್ನಾ ಜೊತೆ ಬಚ್ಚನ್ ನಟಿಸಿದ್ದರು. ಈ ಚಿತ್ರ 1971ರಲ್ಲಿ ತೆರೆ ಕಂಡಿದ್ದು, ವೈದ್ಯನ ಪಾತ್ರವನ್ನು ಇಲ್ಲಿ ಬಚ್ಚನ್ ನಿರ್ವಹಿಸಿದ್ದರು.

    ಜಂಜೀರ್ (1973)

    ಜಂಜೀರ್ (1973)

    ರೊಮ್ಯಾಂಟಿಕ್ ಹೀರೋ ಆಗಿದ್ದ ಬಚ್ಚನ್ 'ಆಂಗ್ರಿ ಯಂಗ್ ಮ್ಯಾನ್' ಬಿರುದು ಪಡೆಯುವುದಕ್ಕೆ ಬಹುಮುಖ್ಯ ಕಾರಣ 1973 ಬಂದ 'ಜಂಜೀರ್' ಚಿತ್ರ. ಇಲ್ಲಿ ಇನ್ಸ್ ಪೆಕ್ಟರ್ ವಿಜಯ್ ಖನ್ನಾ ಪಾತ್ರದಲ್ಲಿ ಬಿಗ್ ಬಿ ನಟಿಸಿದ್ದರು. ಈ ಪಾತ್ರ ಅವರ ಸಿನಿ ಪಯಣಕ್ಕೆ ಮಹತ್ವದ ತಿರುವು ನೀಡಿತು.

    ಶೋಲೆ (1975)

    ಶೋಲೆ (1975)

    ಇಂದಿಗೂ ಜನ ಮತ್ತೆ ಮತ್ತೆ ನೋಡುವ ಅಮಿತಾಬ್ ಸಿನಿಮಾಗಳಲ್ಲಿ 'ಶೋಲೆ' ಪ್ರಮುಖವಾದುದ್ದು. 1975 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದ ಜೈದೇವ್ ಪಾತ್ರದಲ್ಲಿ ಬಚ್ಚನ್ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ಹಿಂದಿಯ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ 'ಶೋಲೆ' ಕೂಡ ಒಂದಾಗಿದೆ. ಇನ್ನು ಈ ಚಿತ್ರದಲ್ಲಿ ಬಚ್ಚನ್ ರೊಂದಿಗೆ ನಟ ಧರ್ಮೇಂದ್ರ, ಹೇಮಾ ಮಾಲಿನಿ, ಸಂಜೀವ್ ಕುಮಾರ್, ಜಯಾ ಮತ್ತು ಅಮ್ಜದ್ ಖಾನ್ ಮುಂತಾದವರು ಇದ್ದರು.

    ದೀವಾರ್ (1975)

    ದೀವಾರ್ (1975)

    'ದೀವಾರ್' ಯಶ್ ಚೋಪ್ರಾ ನಿರ್ದೇಶನ ಮಾಡಿದ ಸಿನಿಮಾ. ಇಲ್ಲಿ ಶಶಿ ಕಪೂರ್, ನಿರೂಪ ರಾಯ್, ಮತ್ತು ನೀತು ಸಿಂಗ್ ಜೊತೆ ಬಚ್ಚನ್ ನಟಿಸಿದರು. ಅಂದಹಾಗೆ, 'ಬಾಲಿವುಡ್‌ನ ನೋಡಲೇಬೇಕಾದ ಉನ್ನತ 25 ಚಿತ್ರಗಳ ಪೈಕಿ 'ದೀವಾರ್' ಕೂಡ ಒಂದು' ಎಂದು ಇಂಡಿಯಾ ಟೈಮ್ಸ್ ಮೂವೀಸ್ ಹೇಳಿದೆ.

    ಅಮರ್ ಅಕ್ಬರ್ ಅಂಥೋಣಿ (1977)

    ಅಮರ್ ಅಕ್ಬರ್ ಅಂಥೋಣಿ (1977)

    'ಅಮರ್ ಅಕ್ಬರ್ ಅಂಥೋಣಿ' ಚಿತ್ರದಲ್ಲಿ ವಿನೋದ್ ಖನ್ನಾ ಮತ್ತು ರಿಷಿ ಕಪೂರ್ ಜೊತೆಗೆ ಮೂರನೇ ನಾಯಕ ಅಂಥೋನಿ ಗೊನ್ಸಾಲ್ವಿಸ್ ಪಾತ್ರದಲ್ಲಿ ಅಮಿತಾಭ್ ನಟಿಸಿದ್ದಾರೆ. 1977ರಲ್ಲಿ ಬಂದ ಈ ಸಿನಿಮಾಗೆ ಸಹ ಬಚ್ಚನ್ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

    ಸಿಲ್ಸಿಲಾ (1981)

    ಸಿಲ್ಸಿಲಾ (1981)

    'ಸಿಲ್ಸಿಲಾ' ಸಿನಿಮಾದಲ್ಲಿ ಪತ್ನಿ ಜಯಾ ಬಚ್ಚನ್ ಜೊತೆ ರೀಲ್ ನಲ್ಲಿಯೂ ಬಚ್ಚನ್ ಡ್ಯುಯೆಟ್ ಹಾಡಿದ್ದರು. ಈ ವೇಳೆ ಚಿತ್ರದ ಮತ್ತೊಬ್ಬ ನಾಯಕಿಯಾದ ನಟಿ ರೇಖಾ ಮತ್ತು ಅಮಿತಾಬ್ ನಡುವೆ ಪ್ರೀತಿ ಇದೆ ಎನ್ನುವ ಗಾಸಿಪ್ ಗಳು ಹಬ್ಬಿದವು.

    ಅಗ್ನಿಪಥ್ (1990)

    ಅಗ್ನಿಪಥ್ (1990)

    'ಅಗ್ನಿಪಥ್' ಚಿತ್ರದ ನಟನೆಗೆ ಎರಡನೇ ಬಾರಿ ಬಚ್ಚನ್ ರಾಷ್ಟ್ರ ಪ್ರಶಸ್ತಿ ಪಡೆದರು. ಮಾಡಿದ ಸಿನಿಮಾಗಳೆಲ್ಲ ಸೋಲುತ್ತಿದ್ದ ಸಮಯಕ್ಕೆ ಸರಿಯಾಗಿ ಚಿತ್ರದಲ್ಲಿ ಮಾಫಿಯಾ ದೊರೆ ಆಗಿ ಅಮಿತಾಬ್ ಖದರ್ ತೋರಿಸಿದರು.

    ಕೂಲಿ (1982)

    ಕೂಲಿ (1982)

    'ಕೂಲಿ' ಚಿತ್ರೀಕರಣದ ವೇಳೆ ಅಮಿತಾಬ್ ಸಾಹಸ ದೃಶ್ಯವೊಂದರಲ್ಲಿ ಅವರ ಕರುಳಿಗೆ ಮಾರಣಾಂತಿಕ ಗಾಯವಾಯಿತು. ಆಸ್ಪತ್ರೆಯಲ್ಲಿ ಹಲವು ತಿಂಗಳುಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದರು. ಈ ಸಂದರ್ಭದಲ್ಲಿ ಅಮಿತಾಬ್ ರನ್ನು ಉಳಿಸಿಕೊಳ್ಳಲು ಅಭಿಮಾನಿಗಳು ದೇವಾಲಯಗಳಲ್ಲಿ ಪ್ರಾರ್ಥಿಸಿದರು.

    ಐಶ್ವರ್ಯ ನೇರಳೆ ಬಣ್ಣದ ಲಿಪ್ ಸ್ಟಿಕ್ ಬಗ್ಗೆ ಬಿಗ್ ಬಿ ಏನಂದ್ರು?ಐಶ್ವರ್ಯ ನೇರಳೆ ಬಣ್ಣದ ಲಿಪ್ ಸ್ಟಿಕ್ ಬಗ್ಗೆ ಬಿಗ್ ಬಿ ಏನಂದ್ರು?

    ಡಾನ್ (1978)

    ಡಾನ್ (1978)

    ಭೂಗತ ದೊರೆಯಾಗಿ 'ಡಾನ್' ಚಿತ್ರದಲ್ಲಿ ಬಚ್ಚನ್ ದ್ವಿಪಾತ್ರದಲ್ಲಿ ನಟಿಸಿದ್ದರು. ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾ ಮತ್ತೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಅಮಿತಾಬ್ ರಿಗೆ ತಂದು ಕೊಟ್ಟಿತ್ತು.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಬಿಗ್ ಬಿಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ ಬಿಗ್ ಬಿ

    ಬ್ಲಾಕ್ (2005)

    ಬ್ಲಾಕ್ (2005)

    ಬಾಲಿವುಡ್ ನಲ್ಲಿ ಬಂದ ವಿಭಿನ್ನ ಸಿನಿಮಾವಾದ 'ಬ್ಲಾಕ್' ಚಿತ್ರದಲ್ಲಿ ಬಚ್ಚನ್ ಶಿಕ್ಷಕನ ಪಾತ್ರ ಮಾಡಿದ್ದರು. ಮಾನಸಿಕ ಅಸ್ವಸ್ಥೆಯಾದ ಚಿತ್ರದ ಕಥಾನಾಯಕಿಯನ್ನು ಸರಿ ಮಾಡುವ ಪಾತ್ರ ಇದಾಗಿತ್ತು. ಒಬ್ಬ ಗುರು - ಶಿಷ್ಯ ಇಬ್ಬರ ಸಂಬಂಧವನ್ನು ಅದ್ಭುತವಾಗಿ ಇಲ್ಲಿ ತೋರಿಸಿದ್ದರು.

    ರಸ್ತೆ ಸುರಕ್ಷತೆ ಜಾಗೃತಿಗಾಗಿ ಯಾವಾಗಲು ರೆಡಿ: ಬಿಗ್‌ ಬಿರಸ್ತೆ ಸುರಕ್ಷತೆ ಜಾಗೃತಿಗಾಗಿ ಯಾವಾಗಲು ರೆಡಿ: ಬಿಗ್‌ ಬಿ

    ಅಮೃತ ಧಾರೆ (2005)

    ಅಮೃತ ಧಾರೆ (2005)

    ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತ ಧಾರೆ' ಚಿತ್ರದ ಮೂಲಕ ಬಚ್ಚನ್ ಕನ್ನಡಕ್ಕೆ ಕಾಲಿಟ್ಟರು. ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದ ಬಚ್ಚನ್ ಜೊತೆ ರಮ್ಯಾ ಮತ್ತು ಧ್ಯಾನ್ ತೆರೆ ಹಂಚಿಕೊಂಡಿದ್ದರು.

    'IIFI 2017' ಪ್ರಶಸ್ತಿ ಪ್ರಕಟ : 'ವರ್ಷದ ವ್ಯಕ್ತಿತ್ವ ಪ್ರಶಸ್ತಿ'ಗೆ ಭಾಜನರಾದ ಬಚ್ಚನ್'IIFI 2017' ಪ್ರಶಸ್ತಿ ಪ್ರಕಟ : 'ವರ್ಷದ ವ್ಯಕ್ತಿತ್ವ ಪ್ರಶಸ್ತಿ'ಗೆ ಭಾಜನರಾದ ಬಚ್ಚನ್

    ಇತ್ತೀಚಿನ ವಿಶೇಷ ಪಾತ್ರಗಳು

    ಇತ್ತೀಚಿನ ವಿಶೇಷ ಪಾತ್ರಗಳು

    ಬಚ್ಚನ್ ಇತ್ತೀಚಿಗೆ ಮಾಡುತ್ತಿರುವ ಪಾತ್ರಗಳು ಅವರ ನಟನ ಸಾಮರ್ಥ್ಯವನ್ನು ಸಾಬೀತು ಮಾಡುತ್ತಿದೆ. 'ಚೀನಿ ಕಮ್', 'ಪಾ', 'ಪಿಕು', 'ಶಮಿತಾಬ್', 'ಪಿಂಕ್' ವಾವ್... ಒಂದಕ್ಕಿಂತ ಒಂದು ವಿಭಿನ್ನ.. ವಿಶೇಷ ಪಾತ್ರಗಳನ್ನು ನಿಭಾಸುತ್ತಿದ್ದಾರೆ ಅಮಿತಾಬ್.

    English summary
    Bollywood Actor Amitabh Bachchan got 'Indian Film Personality of the Year Award' at 48th IFFI, here is the list of his best movies. 'ವರ್ಷದ ವ್ಯಕ್ತಿತ್ವ ಪ್ರಶಸ್ತಿ' ಪಡೆದ ನಟ ಅಮಿತಾಬ್ ಬಚ್ಚನ್ ಅವರ ಕೆಲವು ಮರೆಯಲಾಗದ ಸಿನಿಮಾಗಳ ಪಟ್ಟಿ.
    Wednesday, November 29, 2017, 14:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X