»   » ಮತ್ತೆ ಸುದ್ದಿಯಾದ ಅಮಿತಾಬ್ ಬಚ್ಚನ್ ಮೊಮ್ಮಗಳು, ಯಾಕೆ?

ಮತ್ತೆ ಸುದ್ದಿಯಾದ ಅಮಿತಾಬ್ ಬಚ್ಚನ್ ಮೊಮ್ಮಗಳು, ಯಾಕೆ?

Posted By:
Subscribe to Filmibeat Kannada

ಅದ್ಯಾಕೋ ಗೊತ್ತಿಲ್ಲ ಬಾಲಿವುಡ್ ನಟ-ನಟಿಯರಿಗಿಂತ ಅವರ ಮಕ್ಕಳು, ಮೊಮ್ಮಳು ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಕಿಂಗ್ ಖಾನ್ ಶಾರೂಖ್ ಅವರ ಪುತ್ರಿ ಕಾಸ್ಟ್ಯೂಮ್ ವಿಚಾರದಲ್ಲಿ ದೊಡ್ಡ ಸುದ್ದಿಯಾಗಿದ್ದರು. ಮತ್ತೊಂದೆಡೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸಿನಿಮಾ ಹಾಗೂ ಮದುವೆ ವಿಚಾರಕ್ಕೆ ಚರ್ಚೆಯಾಗಿದ್ದರು. ಈಗ ಅಮಿತಾಬ್ ಬಚ್ಚನ್ ಮೊಮ್ಮಗಳ ಸರದಿ.

ಅಂದ್ಹಾಗೆ, ಅಮಿತಾಬ್ ಬಚ್ಚನ್ ಮೊಮ್ಮಗಳು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಬಾರಿ ಹಲವು ವಿಚಾರಗಳಲ್ಲಿ ಸುದ್ದಿಗೆ ಸಿಲುಕಿದ್ದಾರೆ. ಈಗ ಲೇಟೆಸ್ಟ್ ಏನಪ್ಪಾ ಅಂದ್ರೆ, ಸ್ನೇಹಿತನ ಜೊತೆ ಸಿನಿಮಾ ಹೋಗಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ. ಬರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರೇ ಸುದ್ದಿಯಾಗುತ್ತಿರಲಿಲ್ಲ. ಆದ್ರೆ, ಕ್ಯಾಮೆರಾ ಕಣ್ಣಿಗೆ ಬಿದ್ದ ಯುವಕ ಮುಖ ಮುಚ್ಚಿಕೊಂಡು ಅನುಮಾನಕ್ಕೆ ಕಾರಣವಾಗಿದ್ದಾರೆ. ಹಾಗಾದ್ರೆ, ಬಚ್ಚನ್ ಮೊಮ್ಮಗಳ ಸ್ನೇಹಿತ ಯಾರದು? ಮುಂದೆ ಓದಿ.....

ಸ್ನೇಹಿತನ ಜೊತೆ ಬಚ್ಚನ್ ಮೊಮ್ಮಗಳು ಸುತ್ತಾಟ

ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಮುಂಬೈನ ಪಿವಿಆರ್ ನಲ್ಲಿ ಸ್ನೇಹಿತನ ಜೊತೆ ಸಿನಿಮಾ ನೋಡಲು ಹೋಗಿದ್ದರು. ಇದು ಮಾಧ್ಯಮದವರು ಕ್ಯಾಮೆರಾ ಕಣ್ಣಲ್ಲಿ ಸರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದೆ.

ಬಚ್ಚನ್ ಮೊಮ್ಮಗಳ ಸ್ನೇಹಿತ ಯಾರು?

ನವ್ಯಾ ನವೇಲಿ ಜೊತೆಯಲ್ಲಿ ಸಿನಿಮಾ ನೋಡಲು ಹೋಗಿದ್ದ ಯುವಕ ಯಾರು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದ್ರೆ, ಆ ಯುವಕ ಕ್ಯಾಮೆರಾ ನೋಡಿದ ತಕ್ಷಣ ಮುಖ ಮುಚ್ಚಿಕೊಂಡಿರುವುದು ಈಗ ಅನುಮಾನಗಳಿಗೆ ಜಾಗ ಮಾಡಿಕೊಟ್ಟಿದೆ.

'ಸಮ್ ಥಿಂಗ್' ಇರಬಹುದಾ?

ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಬಚ್ಚನ್ ಮೊಮ್ಮಗಳು ಮತ್ತು ಆ ಯುವಕನ ಮಧ್ಯೆ ಸಮ್ ಥಿಂಗ್ ಏನೋ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಟೀಕಾಕಾರರಿಗೆ ಉತ್ತರ ಕೊಟ್ಟಿದ್ದ ತಾಯಿ

ಈ ಹಿಂದೆ ಕೂಡ ಹಲವು ಬಾರಿ ಬಚ್ಚನ್ ಮೊಮ್ಮಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾಗ ಅವರ ತಾಯಿ ಪತ್ರ ಮೂಲಕ ಪ್ರತಿಕ್ರಯಿಸಿದ್ದರು. ''ನನ್ನ ಮಗಳು ಪಬ್ಲಿಕ್ ಫಿಗರ್ ಅಲ್ಲ. ಪ್ರಭಾವಿ ನಟರ ಕುಟುಂಬದಿಂದ ಬಂದಿದ್ದಾಳೆ ಅಷ್ಟೆ. ಅವಳಿಗೆ ಹೊರಗಡೆ ಸ್ವತಂತ್ರವಾಗಿ ಸುತ್ತಾಡಬೇಕು ಎಂಬ ಆಸೆ ಇದೆ. ಹಾಗಂತ ಅದನ್ನೆ ದೊಡ್ಡ ವಿಷಯವಾಗಿ ಬಿಂಬಿಸುವುದು ಸರಿಯಲ್ಲ'' ಎಂದಿದ್ದರು.

English summary
Bollywood Actor Amitabh Bachchan’s Granddaughter Navya Naveli Goes on a Movie Date with a Mystery Guy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada