ಫ್ರೆಂಡ್‌ಶಿಪ್‌ ಡೇ ದಿನ ಗೆಳೆಯರೊಟ್ಟಿಗೆ ಸೇರಿ ಹಿಮಾಲಯ ಹತ್ತಲು ಹೊರಟ ಅಮಿತಾಬ್ ಬಚ್ಚನ್!

ಇನ್ನೆರಡು ತಿಂಗಳಿಗೆ ನಟ ಅಮಿತಾಬ್ ಬಚ್ಚನ್ ವಯಸ್ಸು 80 ಆಗುತ್ತದೆ. ಇದು ಮಂಚಕ್ಕೆ ಅಂಟಿಕೊಳ್ಳುವ ವಯಸ್ಸು ಆದರೆ ಈ ವಯಸ್ಸಲ್ಲಿ ಅಮಿತಾಬ್ ಬಚ್ಚನ್ ಹಿಮಾಲಯ ಹತ್ತುತ್ತಿದ್ದಾರೆ!

ಅಮಿತಾಬ್ ಬಚ್ಚನ್ ತಮ್ಮ ಇಳಿವಯಸ್ಸಿನಲ್ಲಿಯೂ ಸದೃಢವಾಗಿ ಇರುವುದು ನೋಡಿರುವವರಿಗೆ ಇದು ಆಶ್ಚರ್ಯವೇನೂ ಎನಿಸುವುದಿಲ್ಲವೇನೋ ಆದರೆ ಅವರ ಅಭಿಮಾನಿಗಳಿಗೆ ಮಾತ್ರ ಇದು ಆತಂಕಕಾರಿ ಸುದ್ದಿ. ಎಷ್ಟೇ ಸದೃಢವಾಗಿದ್ದರೂ ಹಿಮಾಲಯ ಹತ್ತುವುದು ಸುಲಭ ಸಾಧ್ಯವಲ್ಲ, ಅದೂ 80 ರ ವಯಸ್ಸಲ್ಲಂತೂ ಬಹುತೇಕ ಅಸಾಧ್ಯ ಹೀಗಿದ್ದಾಗ ಬಚ್ಚನ್ ಸಾಹೇಬರು ಈ ಸಾಹಸಕ್ಕೆ ಕೈ ಹಾಕಿದ್ದೇಕೆ ಎಂಬ ಪ್ರಶ್ನೆ ಸಹಜ.

ಅಮಿತಾಬ್ ಬಚ್ಚನ್ ನಿಜವಾಗಿಯೂ ಹಿಮಾಲಯ ಬೆಟ್ಟ ಹತ್ತಲೇನೂ ಹೋಗುತ್ತಿಲ್ಲ. ಇಂದು ಸ್ನೇಹಿತರ ದಿನದಂದು ಅಮಿತಾಬ್ ಬಚ್ಚನ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪೋಸ್ಟರ್‌ನಲ್ಲಿ ಅಮಿತಾಬ್ ಬಚ್ಚನ್ ತಮ್ಮಿಬ್ಬರು ಗೆಳೆಯರೊಟ್ಟಿಗೆ ಹಿಮಾಲಯ ಏರುತ್ತಿದ್ದಾರೆ.

'ಊಂಚಾಯಿ' (ಎತ್ತರ) ಹೆಸರಿನ ಹೊಸ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದು, ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಗೆಳೆಯರ ಪಾತ್ರದಲ್ಲಿ ಹಿರಿಯ ನಟ ಅನುಪಮ್ ಖೇರ್ ಹಾಗೂ ಬೊಮನ್ ಇರಾನಿ ನಟಿಸುತ್ತಿದ್ದಾರೆ. ಇಂದು ಬಿಡುಗಡೆ ಆಗಿರುವ ಸಿನಿಮಾದ ಪೋಸ್ಟರ್‌ನಲ್ಲಿ ಈ ಮೂವರೂ ಒಟ್ಟಿಗೆ ಹಿಮಾಲಯ ಏರುತ್ತಿರುವ ಚಿತ್ರ ಇದೆ.

'ಊಂಚಾಯಿ' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಅನುಪಮ್ ಖೇರ್, ಬೊಮನ್ ಇರಾನಿಯ ಜೊತೆಗೆ ನೀನಾ ಗುಪ್ತಾ, ಸಾರಿಕಾ ಹಾಗೂ ಪರಿಣಿತಿ ಚೋಪ್ರಾ ಸಹ ಇದ್ದಾರೆ. ಸಿನಿಮಾವು ಇದೇ ವರ್ಷ ನವೆಂಬರ್‌ನಲ್ಲಿ ತೆರೆಗೆ ಬರಲಿದ್ದು, ಸಿನಿಮಾವನ್ನು ನೇಪಾಳ, ದೆಹಲಿ ಸೇರಿದಂತೆ ಇನ್ನೂ ಕೆಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಸಿನಿಮಾವನ್ನುಸ ಸೂರಜ್ ಬರ್ಜಾತಿಯಾ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ರಾಜಶ್ರೀ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿದೆ.

Amitabh Bachchans New Movie Uunchai Movie Poster Released

ರಾಜಶ್ರೀ ಪ್ರೊಡಕ್ಷನ್ಸ್ ಅವರ 60ನೇ ಸಿನಿಮಾ ಇದಾಗಿರುವ ಜೊತೆಗೆ ಈ ವರ್ಷ ರಾಜೇಶ್ವರಿ ಪ್ರೊಡಕ್ಷನ್ಸ್ 75ನೇ ವಾರ್ಷಿಕೋತ್ಸವವನ್ನು ಸಹ ಆಚರಿಸಿಕೊಳ್ಳುತ್ತಿರುವುದು ವಿಶೇಷ.

ಅಮಿತಾಬ್ ಬಚ್ಚನ್ ತಮ್ಮ 80ನೇ ವಯಸ್ಸಿನಲ್ಲಿಯೂ ಬಿಡುವಿಲ್ಲದೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ 'ಬ್ರಹ್ಮಾಸ್ತ್ರ' ಬಿಡುಗಡೆಗೆ ಸಿದ್ಧವಾಗಿದೆ ಅದರ ಬೆನ್ನಲ್ಲೆ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಕೌಟುಂಬಿಕ ಕತೆ ಹೊಂದಿರುವ 'ಗುಡ್ ಬೈ' ಸಿನಿಮಾ ತೆರೆಗೆ ಬರಲಿದೆ. ಅದರ ಬಳಿಕ 'ಊಂಚಾಯಿ' ಆ ಬಳಿಕ 'ಆದಿಪುರುಷ್' ಆ ಬಳಿಕ ಪ್ರಭಾಸ್ ಜೊತೆ ನಟಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾಗದಲ್ಲಿ ಸಹ ಬಚ್ಚನ್ ನಟಿಸುತ್ತಿದ್ದಾರೆ.

More from Filmibeat

English summary
Amitabh Bachchan starer new movie Uunchai movie poster released. Anupam Kher and Boman Irani also acting in the same movie along with Bachchan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X