twitter
    For Quick Alerts
    ALLOW NOTIFICATIONS  
    For Daily Alerts

    ಅಮಿತಾಬ್ ಬಚ್ಚನ್ ಬಾಡಿಗಾರ್ಡ್‌ಗೆ ಕೋಟ್ಯಂತರ ಆದಾಯ: ತನಿಖೆಗೆ ಆದೇಶ

    |

    ಅಮಿತಾಬ್ ಬಚ್ಚನ್ ದೇಶದ ವಿವಿಐಪಿ ಸೆಲೆಬ್ರಿಟಿ. ಅವರಿಗೆ ಎಕ್ಸ್ ಕ್ಯಾಟಗರಿ ಭದ್ರತೆಯನ್ನು ಸರ್ಕಾರವೇ ಒದಗಿಸಿದೆ. ಜೊತೆಗೆ ಖಾಸಗಿ ಭದ್ರತೆಯನ್ನು ಸಹ ಅಮಿತಾಬ್ ಬಚ್ಚನ್ ಹೊಂದಿದ್ದಾರೆ.

    ಸರ್ಕಾರ ಒದಗಿಸಿರುವ ಬಾಡಿಗಾರ್ಡ್‌ಗೆ ಸರ್ಕಾರವೇ ಸಂಬಳ ನೀಡುತ್ತದೆ. ಆದರೆ ಅಮಿತಾಬ್ ಬಚ್ಚನ್‌ರ ಸರ್ಕಾರಿ ಬಾಡಿಗಾರ್ಡ್‌ ವರ್ಷಕ್ಕೆ ಕೋಟ್ಯಂತರ ಹಣ ಗಳಿಸುತ್ತಿದ್ದಾರೆ. ಈ ವಿಷಯ ಮಾಧ್ಯಮಗಳಿಂದ ಬಹಿರಂಗವಾದ ಕೂಡಲೇ ಸರ್ಕಾರವು ಅಮಿತಾಬ್ ಬಚ್ಚನ್‌ರ ಸರ್ಕಾರಿ ಬಾಡಿಗಾರ್ಡ್‌ ಅನ್ನು ಎತ್ತಂಗಡಿ ಮಾಡಿದೆ.

    2015 ರಿಂದಲೂ ಜಿತೇಂಧರ್ ಶಿಂಧೆ ಅಮಿತಾಬ್ ಬಚ್ಚನ್‌ರ ಸರ್ಕಾರಿ ಬಾಡಿಗಾರ್ಡ್ ಆಗಿದ್ದರು. ಹೆಡ್‌ ಕಾನ್‌ಸ್ಟೇಬಲ್ ಆಗಿದ್ದ ಇವರು ಬಹಳ ಒಳ್ಳೆಯ ಬಾಡಿಗಾರ್ಡ್ ಎಂಬ ಹೆಸರನ್ನೂ ಪಡೆದಿದ್ದರು. ಆದರೆ ಇವರ ಆದಾಯ ಈಗ ಕಣ್ಣು ಕುಕ್ಕಿದ್ದು ಅಕ್ರಮ ಸಂಪತ್ತು ಗಳಿಸಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.

    ಜಿತೇಂಧರ್ ಶಿಂಧೆ ವರ್ಷಕ್ಕೆ 1.25 ಕೋಟಿ ರು ಆದಾಯ ಗಳಿಸುತ್ತಿದ್ದಾರಂತೆ. ಸರ್ಕಾರಿ ಸಂಬಳದಲ್ಲಿ ವರ್ಷಕ್ಕೆ ಇಷ್ಟೋಂದು ಹಣ ಗಳಿಸುವುದು ಅಸಾಧ್ಯ. ಹಾಗಾಗಿ ಇದು ಅಕ್ರಮ ಗಳಿಕೆ ಎಂದು ಪೊಲೀಸ್ ಇಲಾಖೆ ಗುಮಾನಿ ವ್ಯಕ್ತಪಡಿಸಿದ್ದು, ಶಿಂಧೆಯ ಆದಾಯದ ರಹಸ್ಯ ಬಯಲಾಗುತ್ತಿದ್ದಂತೆ ಅವರನ್ನು ಬಚ್ಚನ್‌ರ ಬಾಡಿಗಾರ್ಡ್ ಹುದ್ದೆಯಿಂದ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ.

    ಐದು ವರ್ಷಕ್ಕಿಂತ ಹೆಚ್ಚು ಹುದ್ದೆಯಲ್ಲಿರುವಂತಿಲ್ಲ

    ಐದು ವರ್ಷಕ್ಕಿಂತ ಹೆಚ್ಚು ಹುದ್ದೆಯಲ್ಲಿರುವಂತಿಲ್ಲ

    ಮುಂಬೈ ಪೊಲಿಸರು ಅಮಿತಾಬ್ ಬಚ್ಚನ್‌ಗೆ ಎಕ್ಸ್ ಕ್ಯಾಟಗರಿ ಭದ್ರತೆ ಒದಗಿಸಿದ್ದು, ಬಾಡಿಗಾರ್ಡ್‌ಗಳು ಐದು ವರ್ಷಕ್ಕಿಂತಲೂ ಒಬ್ಬನೇ ವ್ಯಕ್ತಿಯ ಸೇವೆಯಲ್ಲಿರಬಾರದು ಎಂಬ ನಿಯಮವಿದೆ. ಆದರೆ ಶಿಂಧೆ ಅಮಿತಾಬ್ ಬಚ್ಚನ್‌ರ ಬಾಡಿಗಾರ್ಡ್ ಆಗಿ ನಿಯೋಜನೆಗೊಂಡು ಈಗಾಗಲೇ ಆರು ವರ್ಷ ದಾಟಿದೆ. ಇದು ಸಹ ನಿಯಮದ ಉಲ್ಲಂಘನೆ ಆಗಿದ್ದು ಈ ಅಂಶವನ್ನೂ ಪರಿಗಣಿಸಿ ಶಿಂಧೆಯನ್ನು ವರ್ಗಾವಣೆ ಮಾಡಲಾಗಿದೆ.

    ಭದ್ರತಾ ಸಂಸ್ಥೆ ಹೊಂದಿರುವ ಶಿಂಧೆ ಪತ್ನಿ

    ಭದ್ರತಾ ಸಂಸ್ಥೆ ಹೊಂದಿರುವ ಶಿಂಧೆ ಪತ್ನಿ

    ಜಿತೇಂಧರ್ ಶಿಂಧೆಯ ಪತ್ನಿ ಹೆಸರಿನಲ್ಲಿ ಭದ್ರತಾ ಸಂಸ್ಥೆಯೊಂದು ಇದೆ. ಸೆಲೆಬ್ರಿಟಿಗಳಿಗೆ ಖಾಸಗಿ ಭದ್ರತೆಯನ್ನು ಈ ಸಂಸ್ಥೆ ಒದಗಿಸುತ್ತದೆ. ಜೊತೆಗೆ ವಿಶೇಷ ಖಾಸಗಿ ಇವೆಂಟ್‌ಗಳಿಗೆ ಸಹ ಈ ಸಂಸ್ಥೆ ಭದ್ರತೆ ಒದಗಿಸುತ್ತದೆ. ಸಂಸ್ಥೆ ಜಿತೇಂಧರ್ ಶಿಂಧೆ ಪತ್ನಿಯ ಹೆಸರಿನಲ್ಲಿದೆಯಾದರೂ ಸಂಸ್ಥೆಯನ್ನು ಶಿಂಧೆಯೇ ಚಲಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಂಸ್ಥೆ ಕಟ್ಟಲು ಹಣ ಎಲ್ಲಿಂದ ಬಂತು ಎಂಬ ಮಾಹಿತಿಯನ್ನು ಶಿಂಧೆ ಪೊಲೀಸ್ ಇಲಾಖೆಗೆ ನೀಡಿಲ್ಲ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

    ಸೆಲೆಬ್ರಿಟಿ ಬಾಡಿಗಾರ್ಡ್‌ಗಳು ಕೋಟ್ಯಂತರ ಸಂಬಳ ಪಡೆಯುವುದು ಹೊಸದೇನಲ್ಲ

    ಸೆಲೆಬ್ರಿಟಿ ಬಾಡಿಗಾರ್ಡ್‌ಗಳು ಕೋಟ್ಯಂತರ ಸಂಬಳ ಪಡೆಯುವುದು ಹೊಸದೇನಲ್ಲ

    ಬಾಲಿವುಡ್‌ನ ಸೆಲೆಬ್ರಿಟಿಗಳ ಬಾಡಿಗಾರ್ಡ್‌ಗಳು ಕೋಟ್ಯಂತರ ರೂಪಾಯಿ ಸಂಬಳ ಪಡೆಯುವುದು ಆಶ್ಚರ್ಯ ಪಡುವ ಸಂಗತಿಯೇ ಅಲ್ಲ. ಸಲ್ಮಾನ್ ಖಾನ್ ಬಾಡಿಗಾರ್ಡ್ ಯಾವುದೇ ಐಎಎಸ್, ಐಪಿಎಸ್ ಅಧಿಕಾರಿ ಪಡೆಯುವುದರ ಹತ್ತು ಪಟ್ಟು ಸಂಬಳವನ್ನು ತಿಂಗಳಿಗೆ ಪಡೆಯುತ್ತಾರೆ. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರ ಬಾಡಿಗಾರ್ಡ್ ಸಹ ಕೋಟ್ಯಂತರ ಹಣವನ್ನು ಸಂಬಳವಾಗಿ ಪಡೆಯುತ್ತಾರೆ. ಆದರೆ ಅಮಿತಾಬ್ ಬಚ್ಚನ್ ಪ್ರಕರಣದಲ್ಲಿ ಶಿಂಧೆ ಬಚ್ಚನ್‌ರ ಖಾಸಗಿ ಬಾಡಿಗಾರ್ಡ್ ಅಲ್ಲ ಬದಲಿಗೆ ಮುಂಬೈ ಪೊಲೀಸರು ನಿಯೋಜಿಸಿರುವ ಸರ್ಕಾರಿ ಬಾಡಿಗಾರ್ಡ್ ಹಾಗಾಗಿ ಅವರ ಸಂಬಳದ ಬಗ್ಗೆ ಗುಮಾನಿ ಎದ್ದು ತನಿಖೆಗೆ ಆದೇಶಿಸಲಾಗಿದೆ.

    ಅಮಿತಾಬ್ ಬಚ್ಚನ್ ಕಾರು ಬೆಂಗಳೂರಿನಲ್ಲಿ ವಶ

    ಅಮಿತಾಬ್ ಬಚ್ಚನ್ ಕಾರು ಬೆಂಗಳೂರಿನಲ್ಲಿ ವಶ

    ಒಲ್ಲದ ಕಾರಣಗಳಿಗಾಗಿ ಅಮಿತಾಬ್ ಬಚ್ಚನ್‌ರ ಹೆಸರು ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಬೆಂಗಳೂರು ಸಂಚಾರಿ ಪೊಲೀಸರು, ಆರ್‌ಟಿಓ ಅಧಿಕಾರಿಗಳು ಅಮಿತಾಬ್ ಬಚ್ಚನ್‌ ಒಡೆತನದ ದುಬಾರಿ ರೋಲ್ಸ್ ರಾಯ್ಸ್ ಕಾರನ್ನು ವಶಪಡಿಸಿಕೊಂಡಿದ್ದರು. ಮೂರು ವರ್ಷದ ಹಿಂದೆ ಬಚ್ಚನ್‌ರಿಂದ ಕಾರು ಖರೀದಿಸಿದ್ದ ಉದ್ಯಮಿ ದಾಖಲೆಗಳನ್ನು ವರ್ಗಾವಣೆ ಮಾಡಿಸದೆ ಹಾಗೆಯೇ ಚಲಾಯಿಸುತ್ತಿದ್ದ. ಅಲ್ಲದೆ ವಿಮೆ, ತೆರಿಗೆ ಯಾವುದನ್ನೂ ಕಟ್ಟಿರಲಿಲ್ಲ ಹಾಗಾಗಿ ವಾಹನವನ್ನು ಪೊಲೀಸರು ಸೀಜ್ ಮಾಡಿದರು.

    English summary
    Amitabh Bachchan's police bodyguard Jitendhar Shindhe's annual income is more than 1.25 crore rs. Mumbai police transfers Shindhe after his income related news gone viral.
    Friday, August 27, 2021, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X