ಜಯಾ ಬಚ್ಚನ್ ಗೆ 'ಐ ಲವ್ ಯೂ' ಎಂದು ಹೇಳಲಿಲ್ಲವಂತೆ ಅಮಿತಾಬ್: ಕಾರಣ ಏನು?

ನಟ ಅಮಿತಾಬ್ ಬಚ್ಚನ್-ಜಯಾ ಬಚ್ಚನ್ ದಾಂಪತ್ಯಕ್ಕೆ 47 ವರ್ಷ ತುಂಬಿದೆ. ಜೂನ್ 3, 1973 ರಲ್ಲಿ ವಿವಾಹವಾದ ಅಮಿತಾಬ್-ಜಯಾಗೆ ಈಗ ಮುದ್ದಾದ ಮೊಕ್ಕಳು ಸಹ ಇದ್ದಾರೆ.

ಹಲವು ವರ್ಷಗಳಿಂದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ನಿರೂಪಕರಾಗಿರುವ ಅಮಿತಾಬ್ ಆ ಶೋ ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಖಾಸಗಿ ವಿಷಯಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಪ್ರಸ್ತುತ 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 12 ನಡೆಸಿಕೊಡುತ್ತಿರುವ ಅಮಿತಾಬ್ ಬಚ್ಚನ್, ಇತ್ತೀಚಿನ ಎಪಿಸೋಡ್ ಒಂದರಲ್ಲಿ ಸ್ಪರ್ಧಾಳುವಿನ ಜೊತೆಗೆ ತಮ್ಮ ವಿವಾಹ, ಪ್ರೇಮದ ಬಗ್ಗೆ ಮಾತನಾಡಿದ್ದಾರೆ. ಮದುವೆಗೆ ಮುನ್ನಾ ಪ್ರೇಮಪತ್ರಗಳನ್ನು ಬರೆಯುತ್ತಿತ್ತುದಾಗಿಯೂ ಹೇಳಿಕೊಂಡಿದ್ದಾರೆ ಅಮಿತಾಬ್.

ಸ್ಪರ್ಧಿ ಯೋಗೇಶ್ ಪಾಂಡೆ ಕೇಳಿದ ಪ್ರಶ್ನೆ

ಸ್ಪರ್ಧಿ ಯೋಗೇಶ್ ಪಾಂಡೆ ಕೇಳಿದ ಪ್ರಶ್ನೆ

ಯೋಗೇಶ್ ಪಾಂಡೆ ಎಂಬ ಬಿಹಾರಿ ಸ್ಪರ್ಧಿಯೊಬ್ಬ ಅಮಿತಾಬ್ ಜೊತೆಗೆ ಹಾಟ್‌ಸೀಟ್‌ನಲ್ಲಿ ಕುಳಿತುಕೊಂಡಿದ್ದ. ಆತನ ನಿಶ್ಚಿತಾರ್ಥ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತಂತೆ ಹಾಗಾಗಿ ಆತ ತನ್ನ ಭಾವಿ ಪತ್ನಿಯೊಡನೆ ಕದ್ದು ಮುಚ್ಚಿ ಫೋನಿನಲ್ಲಿ ಮಾತನಾಡುತ್ತಾರಂತೆ, 'ನೀವು ಮದುವೆ ಆಗುವ ಮುನ್ನಾ ಜಯಾ ಬಚ್ಚನ್ ಜೊತೆ ಹೇಗೆ ಮಾತನಾಡುತ್ತಿದ್ದಿರಿ' ಎಂದು ಆತ ಅಮಿತಾಬ್ ಅವರನ್ನು ಪ್ರಶ್ನೆ ಮಾಡಿದ.

ಸಾಕಷ್ಟು ಪ್ರೇಮ ಪತ್ರಗಳನ್ನು ಜಯಾ ಅವರಿಗೆ ಬರೆದಿದ್ದೆ: ಅಮಿತಾಬ್

ಸಾಕಷ್ಟು ಪ್ರೇಮ ಪತ್ರಗಳನ್ನು ಜಯಾ ಅವರಿಗೆ ಬರೆದಿದ್ದೆ: ಅಮಿತಾಬ್

ಇದಕ್ಕೆ ನಗುತ್ತಲೇ ಉತ್ತರಿಸಿದ ಅಮಿತಾಬ್ ಬಚ್ಚನ್, 'ನಾನಂತೂ ಫುಲ್‌ ಖುಲಂಖುಲ್ಲಾ, ನಿಮ್ಮ ಹಾಗೆ ಹೆದರಿ ಬೆದರಿ ಮಾತನಾಡುತ್ತಿರಲಿಲ್ಲ. ಮದುವೆ ಆಗುವ ಮುನ್ನಾ ಜಯಾ ಬಚ್ಚನ್ ಅವರಿಗೆ ಸಾಕಷ್ಟು ಪ್ರೇಮ ಪತ್ರಗಳನ್ನು ಬರೆಯುತ್ತಿದ್ದೆ. ಈಗಲೂ ಬರೆಯುತ್ತೇನೆ ಎಂದಿದ್ದಾರೆ ಅಮಿತಾಬ್.

ಜಯಾ ಅವರಿಗೆ ಐ ಲವ್ ಯೂ ಎಂದಿಲ್ಲ: ಅಮಿತಾಬ್

ಜಯಾ ಅವರಿಗೆ ಐ ಲವ್ ಯೂ ಎಂದಿಲ್ಲ: ಅಮಿತಾಬ್

'ಆದರೆ ನಾನು ಜಯಾ ಅವರಿಗೆ ಐ ಲವ್ ಯೂ ಎಂದು ಹೇಳಿಲ್ಲ. ಆದರೆ ಇಬ್ಬರೂ ಪರಸ್ಪರ ಪರಿಚಯದವರಾಗಿದ್ದೆವು, ಇಬ್ಬರೂ ಜೊತೆಗೆ ಕೆಲಸ ಮಾಡಿದ್ದೆವು, ಇಬ್ಬರ ಮನೆಗೂ ಹೋಗಿ-ಬರುವುದು ಮಾಡುತ್ತಿದ್ದೆವು. ಹೀಗೆ ಒಂದು ದಿನ ಕುಳಿತು ಮಾತನಾಡುತ್ತಾ 'ಇಬ್ಬರೂ ಮದುವೆ ಆಗಿಬಿಡೋಣ' ಎಂದುಕೊಂಡೆವು ಹಾಗೆಯೇ ಮದುವೆ ಆಗಿಬಿಟ್ಟೆವು' ಎಂದರು ಅಮಿತಾಬ್ ಬಚ್ಚನ್.

ಅದ್ಭುತವಾಗಿ ಶೋ ನಡೆಸಿಕೊಡುತ್ತಾರೆ ಅಮಿತಾಬ್

ಅದ್ಭುತವಾಗಿ ಶೋ ನಡೆಸಿಕೊಡುತ್ತಾರೆ ಅಮಿತಾಬ್

ಅಮಿತಾಬ್ ಬಚ್ಚನ್ ಬಹಳ ರಸವತ್ತಾಗಿ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಹಲವು ವಯೋಮಾನದ, ಹಲವು ಆಸಕ್ತಿಯ, ಭಾರತದ ಹಲವು ಪ್ರದೇಶಗಳಿಂದ, ಭಿನ್ನ-ಭಿನ್ನ ರೀತಿಯ ವ್ಯಕ್ತಿಗಳು ಶೋಗೆ ಬರುತ್ತಾರೆ ಎಲ್ಲರೊಂದಿಗೂ ಕೆಲವೇ ನಿಮಿಷಗಳಲ್ಲಿ ಆತ್ಮೀಯತೆ ಸಂಪಾದಿಸಿ ಸ್ಪರ್ಧಿಯು ಯಾವುದೇ ಹಿಂಜರಿಕೆ ಇಲ್ಲದಂತೆ ಆಡುವಂತೆ ಮಾಡುತ್ತಾರೆ.

More from Filmibeat

English summary
Amitabh Bachchan said he did not said Jaya Bachachan I Love You. He said he use to write love letters to Jaya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X