»   » ಅಮಿತಾಬ್ ಬಚ್ಚನ್ 'ಷಮಿತಾಬ್' ಗೆಟಪ್ ಬಹಿರಂಗ

ಅಮಿತಾಬ್ ಬಚ್ಚನ್ 'ಷಮಿತಾಬ್' ಗೆಟಪ್ ಬಹಿರಂಗ

Posted By:
Subscribe to Filmibeat Kannada

ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ವಿಭಿನ್ನ ರೀತಿಯ ಪಾತ್ರಗಳನ್ನು ಪೋಷಿಸುತ್ತಾ ಬಂದಿದ್ದಾರೆ. 'ಪಾ' (2009) ಚಿತ್ರದಲ್ಲಿ ಎಳೆಯ ವಯಸ್ಸಿನಲ್ಲೇ ಮುದಿತನ ತರುವ ಒಂದು ವಿಚಿತ್ರ ಕಾಯಿಲೆ 'ಪ್ರೊಜೇರಿಯಾ'ದಿಂದ ನರಳುವ ಪಾತ್ರದಲ್ಲಿ ಅಭಿನಯಿಸಿ ಎಲ್ಲರನ್ನು ಬೆಕ್ಕಸ ಬೆರಗಾಗಿಸಿದ್ದರು.

ಈಗ ಅವರು 'ಷಮಿತಾಬ್' ಎಂಬ ಚಿತ್ರದಲ್ಲಿ ತಮ್ಮ ವಯಸ್ಸಿಗೆ ಹತ್ತಿರವಾದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್ ಭಿನ್ನವಾಗಿದ್ದು ಮತ್ತೊಂದು ವೈವಿಧ್ಯಮಯ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರಕ್ಕೆ ಆರ್ ಬಾಲ್ಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. [ಕನ್ನಡ ತಾರೆಗಳೊಂದಿಗೆ ಅಮಿತಾಬ್ ಬಚ್ಚನ್ ನಂಟು]


ಚಿತ್ರದ ಪಾತ್ರವರ್ಗದಲ್ಲಿ ಧನುಷ್, ಕಮಲ್ ಹಾಸನ್ ಸಹ ಅಭಿನಯಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಅಮಿತಾಬ್ ಅವರ ಲುಕ್ ಹೇಗಿದೆ ಎಂಬ ಫೊಟೋಗಳು ಬಹಿರಂಗವಾಗಿವೆ. ಹಾಗಾಗಿ 'ಷಮಿತಾಬ್' ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಉಂಟಾಗಿದೆ.

ನೆರತ ಗಡ್ಡ, ಕೆದರಿದ ತಲೆಗೂದಲ ಗೆಟಪ್ ನಲ್ಲಿರುವ ಅವರ ಫೋಟೋಗಳನ್ನು ನೋಡಿದರೆ ಚಿತ್ರದಲ್ಲಿ ಅವರದು ಹುಚ್ಚನ ಪಾತ್ರ ಇರಬಹುದೇ ಎಂಬ ಅನುಮಾನ ಮೂಡುತ್ತದೆ. ಆದರೆ ಅಮಿತಾಬ್ ಅವರ ಪಾತ್ರದ ಬಗ್ಗೆ ಗೊತ್ತಾಗಬೇಕಾದರೆ ಸ್ವಲ್ಪ ಸಮಯ ಕಾಯಲೇಬೇಕು.
Amitabh Bachchan

ಅಮಿತಾಬ್ ಅವರು ಈ ಹಿಂದೆ ಬಾಲ್ಕಿ ಅವರ ಜೊತೆ 'ಚೀನಿ ಕುಮ್' ಹಾಗೂ 'ಪಾ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚೀನಿ ಕುಮ್ ಚಿತ್ರದಲ್ಲಿ ಕುದುರೆಬಾಲದ ಜುಟ್ಟಿನ ಗೆಟಪ್ ನಲ್ಲಿ ಹಾಗೂ 'ಪಾ' ಚಿತ್ರದ 'ಪ್ರೊಜೇರಿಯಾ' ಕಾಯಿಲೆಯಿಂದ ನರಳುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)
English summary
Bollywood's mega star Amitabh Bachchan is all busy with his upcoming movie Shamitabh and looks like Big B is gearing up for something really new. The movie Shamitabh directed by R Balki will feature Dhanush and Kamal Haasan along with Big B and has already become a much talked about movie. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada