ಅಮ್ಮನ ಹಳೆಯ ಚಿತ್ರಗಳನ್ನು ಹಂಚಿಕೊಂಡ ಅಮಿತಾಬ್ ಬಚ್ಚನ್
ನಟ ಅಮಿತಾಬ್ ಬಚ್ಚನ್ ತಮ್ಮ ತಾಯಿಯ ಹಳೆಯ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮಿತಾಬ್ ಹಂಚಿಕೊಂಡಿರುವ ಚಿತ್ರ ಈಗ ಸಖತ್ ವೈರಲ್ ಆಗಿದೆ. ಅಮಿತಾಬ್ ಬಚ್ಚನ್ ತಾಯಿ ತೇಜಿ ಬಚ್ಚನ್ ಅವರ 13ನೇ ಪುಣ್ಯ ತಿಥಿ ಇಂದು (ಡಿಸೆಂಬರ್ 22) ಅದೇ ನೆನಪಿನಲ್ಲಿ ಅಮ್ಮನ ಹಳೆಯ ಬ್ಲ್ಯಾಕ್ ಆಂಡ್ ವೈಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅಮಿತಾಬ್ ಬಚ್ಚನ್.
1950-55 ರ ಸಮಯದಲ್ಲಿ ತೆಗೆದ ಹಳೆಯ ಚಿತ್ರಗಳು ಸೇರಿ ಹಲವು ಚಿತ್ರಗಳನ್ನು ಅಮಿತಾಬ್ ಬಚ್ಚನ್ ಹಂಚಿಕೊಂಡಿದ್ದಾರೆ. ಅಮ್ಮನೊಂದಿಗೆ ಅಮಿತಾಬ್ ಬಚ್ಚನ್ ಸಹ ನಿಂತಿರುವ ಈ ಚಿತ್ರಗಳನ್ನು ಅಮಿತಾಬ್ ಬಚ್ಚನ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
'ನೆನಪಿಗೆ ಯೋಗ್ಯವಾದ ಈ ದಿನ, ಸುಮ್ಮನೆ ಚಿತ್ರಗಳನ್ನು ನೋಡಿ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತೇನೆ. ಅಲಹಾಬಾದ್‌ನ ಆ ದಿನಗಳು. ನೈನಿತಾಲ್‌ನ ಬೋರ್ಡಿಂಗ್ ಶಾಲೆ, ನಂತರ ದೆಹಲಿ, ಮುಂಬೈ. ಪ್ರತಿ ಘಟ್ಟವೂ ವೈವಿಧ್ಯಪೂರ್ಣ. ಸದಾ ನಮ್ಮೊಂದಿಗೆ ಇದ್ದುಬಿಡುವ ವಿಶೇಷ ಶಕ್ತಿಯೊಂದು ತಾಯಂದಿರಿಗೆ ಇದೆ. ನಾನು ಆಕೆಯನ್ನು ಮತ್ತೆ ಜೀವಂತ ನೋಡಲಾರೆನು ಆದರೆ ಆಕೆ ಎಂದೂ ನನ್ನೊಂದಿಗೆ ಇದ್ದಾಳೆ' ಎಂದಿದ್ದಾರೆ ಅಮಿತಾಬ್ ಬಚ್ಚನ್.

ಬಹಳ ಸುಂದರ ನನ್ನ ತಾಯಿ: ಅಮಿತಾಬ್
'ಬಹಳ ಸುಂದರ ನನ್ನ ತಾಯಿ, ಎಲ್ಲಾ ತಾಯಂದಿರೂ ಸುಂದರವೇ. ಆಗ ನಾನು ಬೆಳಿಗ್ಗೆಯೇ ಎದ್ದು ಕೆಲಸಕ್ಕೆ ಹೋಗುತ್ತಿದ್ದೆ. ತಡರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದೆ. ಅಮ್ಮನಿಗೆ ಅದು ಇಷ್ಟವೂ ಇತ್ತು. ನಾನು ಹೆಚ್ಚು ಕೆಲಸ ಮಾಡಬೇಕು, ದೊಡ್ಡವನಾಗಬೇಕು ಎಂಬುದು ಆಕೆಯ ಆಸೆ. ಅಮ್ಮ ಹೇಳುತ್ತಿದ್ದಳು, ನನ್ನ ಆಶೀರ್ವಾದ ಸದಾ ನಿನ್ನೊಂದಿಗೆ ಇರುತ್ತದೆ ಎಂದು, ಹಾಗೆಯೇ ಆಗಿದೆ' ಎಂದಿದ್ದಾರೆ ಅಮಿತಾಬ್ ಬಚ್ಚನ್.

ತಂದೆ ಹರಿವಂಶರಾಯ್ ಬಚ್ಚನ್ ಕವಿಯಾಗಿದ್ದವರು
ಅಮಿತಾಬ್ ಬಚ್ಚನ್ ತಂದೆ ಹರಿವಂಶರಾಯ್ ಬಚ್ಚನ್ ಪ್ರಖ್ಯಾತ ಸಾಹಿತಿ ಆಗಿದ್ದವರು. ಉಪನ್ಯಾಸಕರೂ ಆಗಿದ್ದರು ನಂತರ ರೆಡಿಯೋದಲ್ಲಿಯೂ ಕೆಲಸ ಮಾಡಿದ್ದರು. ತಮ್ಮ ತಂದೆಯವರ ಸಾಹಿತ್ಯ ಸಂಕಲನವನ್ನು ಹೊರತಂದಿದ್ದರು ಅಮಿತಾಬ್ ಬಚ್ಚನ್.

ಜುಂಡ್-ಬ್ರಹ್ಮಾಸ್ತ್ರ ಬಿಡುಗಡೆಗೆ ತಯಾರು
ಅಮಿತಾಬ್ ಬಚ್ಚನ್ ಗೆ ಇದೇ ಜೂನ್ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿತ್ತು, ಚೇತರಿಸಿಕೊಂಡ ಅಮಿತಾಬ್ ಬಚ್ಚನ್, ಇದೀಗ ಚಿತ್ರೀಕರಣಕ್ಕೆ ಮರಳಿದ್ದಾರೆ ಬಚ್ಚನ್. ಬಚ್ಚನ್ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ತಯಾರಿದೆ. ಬಚ್ಚನ್ ನಟನೆಯ ಜುಂಡ್ ಸಿನಿಮಾ ಸಹ ಬಿಡುಗಡೆಗೆ ರೆಡಿ ಇದೆ.
Recommended Video

ಸಾಲು-ಸಾಲು ಸಿನಿಮಾಗಳಲ್ಲಿ ಬಚ್ಚನ್ ನಟಿಸಲಿದ್ದಾರೆ
ಇದರ ಹೊರತಾಗಿ, ತಮಿಳಿನ ಪೊನ್ನಿಯನ್ ಸೆಲ್ವನ್, ಪ್ರಭಾಸ್-ದೀಪಿಕಾ ನಟಿಸುತ್ತಿರುವ ತೆಲುಗು ಸಿನಿಮಾ, ನಿವಾಸ್ ನಿರ್ದೇಶನದ ಗುಮ್‌ನಾಮ್, ಅಜಯ್ ದೇವಗನ್ ಜೊತೆಗೆ ಮೇ ಡೇ, ರೂಮಿ ನಿರ್ದೇಶನದ ಚೆಹೆರಾ, ತಮಿಳ್‌ವನನ್ ನಿರ್ದೇಶನದ ತೇರಾ ಯಾರ್ ಹೂ ಮೇ, ತಮಿಳಿನ ಉಯರಂದ ಮಣಿತ್ತನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಅಮಿತಾಬ್ ಬಚ್ಚನ್.


Click it and Unblock the Notifications











