For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್ ನಿವೃತ್ತಿ ಹೊಂದಬೇಕು: ಸಲ್ಮಾನ್ ಖಾನ್ ತಂದೆ

  |

  ಅಮಿತಾಬ್ ಬಚ್ಚನ್‌ಗೆ ವಯಸ್ಸಾಯಿತು ಅವರು ನಿವೃತ್ತಿಯಾಗಬೇಕು ಎಂದು ಸಲ್ಮಾನ್ ಖಾನ್ ತಂದೆ, ಖ್ಯಾತ ಚಿತ್ರಸಾಹಿತಿ ಸಲೀಂ ಖಾನ್ ಹೇಳಿದ್ದಾರೆ.

  ''ಅಮಿತಾಬ್ ಬಚ್ಚನ್ ತಮ್ಮ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ವೃತ್ತಿ ಜೀವನದಲ್ಲಿ ಅವರ ಸಾಧನೆ ದೊಡ್ಡದು. ಈಗ ಅವರು ನಿವೃತ್ತರಾಗಬೇಕು. ರೇಸ್‌ನಿಂದ ಅವರು ತಮ್ಮನ್ನು ತಾವು ದೂರ ಉಳಿಸಿಕೊಳ್ಳಬೇಕು'' ಎಂದಿದ್ದಾರೆ ಸಲೀಂ ಖಾನ್.

  ''ಅಮಿತಾಬ್ ಬಚ್ಚನ್ ತಮಗಾಗಿ ಕೆಲವು ವರ್ಷಗಳನ್ನಾದರೂ ಉಳಿಸಿಕೊಳ್ಳಬೇಕು, ತಮ್ಮ ಪ್ರೀತಿ ಪಾತ್ರರಿಗಾಗಿ ಕೆಲವು ಸಮಯ ತೆಗೆದಿಡಬೇಕು. ಇತರ ನಟರಂತೆ ಅವರು ಈ ವಯಸ್ಸಿನಲ್ಲಿಯೂ ರೇಸ್‌ನಲ್ಲಿ ಓಡುವಂತಾಗಬಾರದು. ವೃತ್ತಿ ಬದುಕಿನಲ್ಲಿ ಅದ್ಭುವಾದ ಇನ್ನಿಂಗ್ಸ್ ಅವರು ಆಡಿದ್ದಾರೆ. ಇದು ನಿವೃತ್ತರಾಗಲು ಸಕಾಲ'' ಎಂದಿದ್ದಾರೆ ಸಲೀಂ.

  ''ಅಮಿತಾಭ್ ಬಚ್ಚನ್ ಆಂಗ್ರಿ ಯಂಗ್ ಮ್ಯಾನ್. ಈಗಲೂ ಅವರು ಆಂಗ್ರಿ ಯಂಗ್ ಮ್ಯಾನ್. ಆದರೆ ಅಮಿತಾಬ್ ಬಚ್ಚನ್‌ಗೆ ಕೊಡಬಹುದಾದಂತಹಾ ಕತೆಗಳೇ ಈಗ ಇಲ್ಲ. ನಮ್ಮ ಸಿನಿಮಾಗಳು ತಾಂತ್ರಿಕವಾಗಿ ಬಹಳ ಮುಂದುವರೆದಿವೆ. ಆದರೆ ಒಳ್ಳೆಯ ಚಿತ್ರಕತೆಗಳು ಇಲ್ಲವಷ್ಟೆ'' ಎಂದಿದ್ದಾರೆ.

  ''ನಾನು ಸರಿಯಾದ ಸಮಯಕ್ಕೆ ನಿವೃತ್ತಿ ಪಡೆದುಕೊಂಡೆ. ನನ್ನ ಸಿನಿಮಾಯೇತರ ಗೆಳೆಯರು, ಕುಟುಂಬದವರೊಟ್ಟಿಗೆ ಆರಾಮದ ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ ಸಲೀಂ. ಅಮಿತಾಬ್ ಬಚ್ಚನ್‌ ಜೊತೆಗೆ ಹಲವು ವರ್ಷಗಳ ಕಾಲ ಸಲೀಂ ಕೆಲಸ ಮಾಡಿದ್ದಾರೆ. ಬಚ್ಚನ್ ನಟನೆಯ ಎವರ್‌ ಗ್ರೀನ್ ಸಿನಿಮಾಗಳಾದ 'ದೀವಾರ್', 'ಶೋಲೆ', 'ಜಂಜೀರ್', 'ನಮಕ್ ಹಲಾಲ್', 'ಡಾನ್', 'ಶಕ್ತಿ' ಇನ್ನೂ ಹಲವು ಸಿನಿಮಾಗಳಿಗೆ ಸಲೀಂ ಅವರು ಜಾವೇದ್ ಅಖ್ತರ್ ಜೊತೆಗೂಡಿ ಕತೆ, ಚಿತ್ರಕತೆ ಸಂಭಾಷಣೆಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಡಾ.ರಾಜ್‌ಕುಮಾರ್ ನಟಿಸಿರುವ 'ಪ್ರೇಮದ ಕಾಣಿಕೆ' ಸಿನಿಮಾಕ್ಕೆ ಕತೆಯನ್ನು ಇದೇ ಸಲೀಂ-ಜಾವೇದ್ ಬರೆದಿದ್ದಾರೆ.

  ಕೆಲವು ದಿನಗಳ ಹಿಂದೆ ಅಮಿತಾಬ್ ಬಚ್ಚನ್‌ 79ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಷ್ಟು ವರ್ಷ ವಯಸ್ಸಾದರೂ ಈಗಲೂ ಬ್ಯುಸಿಯಾಗಿರುವ ನಟ ಅವರು. ಬಚ್ಚನ್ ನಟನೆಯ 'ಗುಡ್‌ ಬೈ', 'ಬ್ರಹ್ಮಾಸ್ತ್ರ', 'ಜುಂಡ್' ಸಿನಿಮಾಗಳು ಬಿಡುಗಡೆ ಆಗಲಿವೆ. ಅದರ ಹೊರತಾಗಿ ತಮಿಳು, ತೆಲುಗಿನ ಒಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಇಂಗ್ಲೀಷ್‌ನ 'ದಿ ಇಂಟರ್ನ್' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಅಜಯ್ ದೇವಗನ್ ನಿರ್ದೇಶನದ 'ಮೇ ಡೇ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ತೇರಾ ಯಾರ್ ಹೂ ಮೇ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Salman Khan's father, writer Salim Khan said Amitabh Bachchan should retire from acting. He achieved lot of things in his life, he should back himself from race.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X