ಅಮಿತಾಬ್ ಬಚ್ಚನ್ ಮನೆಯಲ್ಲಿ ಕೊರೊನಾ ಕೇಸ್ ಪತ್ತೆ: ಆತಂಕದಲ್ಲಿ ಕುಟುಂಬ

ಅಮಿತಾಬ್ ಬಚ್ಚನ್ ಮನೆಗೆ ಮತ್ತೆ ಕೊರೊನಾ ವಕ್ಕರಿಸಿದೆ. ಈ ಬಾರಿ ಕುಟುಂಬದ ಸದಸ್ಯರಿಗಲ್ಲ ಆದರೆ ಅಮಿತಾಬ್ ಬಚ್ಚನ್ ಮನೆ ಸಿಬ್ಬಂದಿಯೊಬ್ಬರು ಕೊರೊನಾ ಪಾಸಿಟಿವ್ ಆಗಿದ್ದಾರೆ.

ಅಮಿತಾಬ್ ಬಚ್ಚನ್ ಮನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಅವರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆಗಿವೆ. ಬಚ್ಚನ್ ಮನೆಯ ಸದಸ್ಯರಿಗೆ ನಿಯಮಿತವಾಗಿ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ. ಹೀಗೆ ಪರೀಕ್ಷೆ ಮಾಡಿಸಿದಾಗ ಒಬ್ಬರಿಗೆ ಕೊರೊನಾ ಇರುವುದು ಪತ್ತೆಯಾಗಿದೆ.

ತಮ್ಮ ಮನೆಯ ನೌಕರನೊಬ್ಬನಿಗೆ ಕೊರೊನಾ ಬಂದಿರುವ ಬಗ್ಗೆ ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, 'ಮನೆಯಲ್ಲಿ ಕೋವಿಡ್ ಪರಿಸ್ಥಿತಿ ಉಂಟಾಗಿದೆ' ಎಂದಿದ್ದರು. ಇದಕ್ಕೆ ಹೊರತಾಗಿ ಇನ್ನಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿರಲಿಲ್ಲ. ಆದರೆ ಬಿಎಂಸಿ ಹೇಳಿರುವಂತೆ ಬಚ್ಚನ್ ಮನೆಯ ಸಿಬ್ಬಂದಿ ಒಬ್ಬರಿಗೆ ಕೋವಿಡ್ ಧೃಡವಾಗಿದೆ.

Amitabh Bachchan Staff Tested COVID 19 Positive

ಮುಂಬೈನ ಜುಹು ಏರಿಯಾದಲ್ಲಿ ಅಮಿತಾಬ್ ಬಚ್ಚನ್ ಎರಡು ಬಂಗ್ಲೆಗಳನ್ನು ಹೊಂದಿದ್ದಾರೆ. 'ನಿರೀಕ್ಷಣಾ' ಹಾಗೂ 'ಜಲ್ಸಾ' ಎರಡೂ ಬಂಗಲೆಗಳಲ್ಲಿ ಒಟ್ಟು 31 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಎರಡೂ ಬಂಗ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ನೌಕರನಿಗೆ ಕೊರೊನಾ ಪಾಸಿಟಿವ್ ಆಗಿದೆ. ಆದರೆ ಅದು ಒಮಿಕ್ರಾನ್ ತಳಿ ಅಲ್ಲವೆಂದು ಬಿಎಂಸಿ ಹೇಳಿದೆ.

ಇದೀಗ ಅಮಿತಾಬ್ ಬಚ್ಚನ್ ಮನೆಯ ಇತರ ಸಿಬ್ಬಂದಿಯನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿಟ್ಟು ಐಸೋಲೆಶನ್‌ಗೆ ಒಳಪಡಿಸಲಾಗಿದೆ. ಜೊತೆಗೆ ಅಮಿತಾಬ್ ಬಚ್ಚನ್ ಮತ್ತು ಕುಟುಂಬದವರಿಗೂ ಐಸೋಲೇಶನ್‌ಗೆ ಒಳಗಾಗುವಂತೆ ಹಾಗೂ ನಿಯಮಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಲಾಗಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಅಮಿತಾಬ್ ಬಚ್ಚನ್ ಮನೆಯ ಸದಸ್ಯರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್, ಮೊಮ್ಮಗಳು ಆರಾಧ್ಯಾಗೂ ಕೊರೊನಾ ಪಾಸಿಟಿವ್ ಆಗಿತ್ತು. ಎಲ್ಲರನ್ನೂ ಮುಂಬೈನ ಕೋಕಿಲಾಬೇನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಶ್ವರ್ಯಾ ರೈ ಹಾಗೂ ಆರಾಧ್ಯ ಬೇಗ ಗುಣಮುಖರಾದರು. ಆ ಬಳಿಕ ಅಮಿತಾಬ್ ಬಚ್ಚನ್ ಗುಣಮುಖರಾದರು. ಆದರೆ ಅಸ್ತಮಾ ಕಾಯಿಲೆ ಹೊಂದಿದ್ದ ಅಭಿಷೇಕ್ ಬಚ್ಚನ್ ಬೇಗ ಗುಣಮುಖರಾಗಲಿಲ್ಲ. ಕೊರೊನಾ ಕಾಯಿಲೆಯು ಬಚ್ಚನ್ ಕುಟುಂಬವನ್ನು ಬಹಳ ಹೈರಾಣ ಮಾಡಿತ್ತು. ಇದೀಗ ಮತ್ತೆ ಬಚ್ಚನ್ ಮನೆಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಕುಟುಂಬ ಸದಸ್ಯರಿಗೆ ಆತಂಕ ತಂದಿದೆ.

More from Filmibeat

English summary
Amitabh Bachchan staff tested COVID 19 positive. BMC said its not Omicron. Bachchan has 31 staff workers in his bungalow, all are isolated in covid care center.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X