ಅಮಿತಾಬ್ ಬಚ್ಚನ್ 'ಸ್ಟಾರ್ ಆಫ್ ದ ಮಿಲೇನಿಯಂ'
ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ಮತ್ತೊಂದು ಅಪರೂಪದ ಗೌರವ ವರಿಸಿದೆ. ಬಿಗ್ ಸ್ಟಾರ್ ಎಂಟರ್ ಟೈನ್ ಮೆಂಟ್ ಅವಾರ್ಡ್ಸ್ 2013 ಅವರನ್ನು 'ಸಹಸ್ರಮಾನದ ನಟ'ನಾಗಿ ಆಯ್ಕೆ ಮಾಡಿದೆ. ಈ ಮೂಲಕ ಬಿಗ್ ಬಿ ಅವರಿಗೆ ಸಿಕ್ಕಿದ ಅಪರೂದ ಅವಕಾಶವಿದು.
'ಸತ್ಯಾಗ್ರಹ' ಚಿತದಲ್ಲಿನ ಅಮೋಘ ಅಭಿನಯಕ್ಕಾಗಿ ಈ ಪ್ರಶಸ್ತಿಯನ್ನು ಮುಂಬೈನ ಅಂಧೇರಿಯ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯನು ಸ್ವೀಕರಿಸಿದ ಎಪ್ಪತ್ತೊಂದರ ಹರಯದ ಬಿಗ್ ಬಿ ಅಭಿಮಾನಿಗಳ ಅಭಿಮಾನ ಕಂಡು ಕ್ಷಣಕಾಲ ಭಾವುಕರಾದರು. [ಬ್ರಾಡ್ ಪಿಟ್ ಚಿತ್ರದಲ್ಲಿ ಬಿಗ್ ಬಿ]

ಇತ್ತೀಚೆಗಷ್ಟೇ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಹೇಳಿದ್ದರು. 'ದಿ ಗ್ರೇಟ್ ಗಾಟ್ಸ್ ಬಿ 'ಚಿತ್ರದಲ್ಲಿ ಅಭಿನಯಿಸಿದ್ದು ಗೊತ್ತೇ ಇದೆ. ಈ ಬಾರಿ ಗ್ರೆಗರಿ ಡೇವಿಡ್ ರಾಬರ್ಟ್ ಬರೆದಿರುವ ಕಾದಂಬರಿ ಆಧಾರಿತ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)
More from Filmibeat
English summary
Megastar Amitabh Bachchan was honoured with the Star of the Millennium award at the Big Star Entertainment Awards 2013 here. He says he was "embarrassed" when the audience stood for him as he received the award.


Click it and Unblock the Notifications











