twitter
    For Quick Alerts
    ALLOW NOTIFICATIONS  
    For Daily Alerts

    ನೋವಿನಲ್ಲಿದ್ದರೂ ವಿರುಷ್ಕಾ ರಿಸೆಪ್ಶನ್ನಿಗೆ ಬಂದ ಅಮಿತಾಬ್

    By Bharath Kumar
    |

    ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಭುಜದ ನೋವಿನಿಂದ ಬಳಲುತ್ತಿದ್ದು, ಆ ನೋವಿನಲ್ಲೂ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಶೂಟಿಂಗ್ ಸೆಟ್ ನಲ್ಲಿ ತೂಕದ ವಸ್ತು ಎತ್ತಿದ್ದರಿಂದ ಅಮಿತಾಬ್ ಗೆ ಹಳೆಯ ನೋವು ಮತ್ತೆ ಕಾಡಿದೆಯಂತೆ. ಇದರಿಂದ ಎಡಭುಜದ ನೋವು ಹೆಚ್ಚಾಗಿದೆ. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೂಡ ಪಡೆದುಕೊಂಡಿರುವ ಅಮಿತಾಬ್ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಅದ್ಭುತ ಕಲಾವಿದ ಬಚ್ಚನ್ ಅವರ ಅದ್ಭುತ ಸಿನಿಮಾಗಳ ಜೊತೆ ಒಂದು ಸುತ್ತುಅದ್ಭುತ ಕಲಾವಿದ ಬಚ್ಚನ್ ಅವರ ಅದ್ಭುತ ಸಿನಿಮಾಗಳ ಜೊತೆ ಒಂದು ಸುತ್ತು

    Amitabh Bachchan suffering from Shoulder Injury

    ಮುಂಬೈನಲ್ಲಿ ನಡೆದ ವಿರುಷ್ಕಾ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಅಮಿತಾಬ್ ಬಚ್ಚನ್ ತಮ್ಮ ಫ್ಯಾಮಿಲಿ ಜೊತೆಯಲ್ಲಿ ಆಗಮಿಸಿದ್ದರು. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅಮಿತಾಬ್ ಮಗಳು ಶ್ವೇತಾ ಬಚ್ಚನ್ ಮತ್ತು ಮಕ್ಕಳು ನವಜೋಡಿಗೆ ಶುಭಕೋರಿದರು.

    'IFFI 2017' ಪ್ರಶಸ್ತಿ ಪ್ರಕಟ : 'ವರ್ಷದ ವ್ಯಕ್ತಿತ್ವ ಪ್ರಶಸ್ತಿ'ಗೆ ಭಾಜನರಾದ ಬಚ್ಚನ್'IFFI 2017' ಪ್ರಶಸ್ತಿ ಪ್ರಕಟ : 'ವರ್ಷದ ವ್ಯಕ್ತಿತ್ವ ಪ್ರಶಸ್ತಿ'ಗೆ ಭಾಜನರಾದ ಬಚ್ಚನ್

    ಸದ್ಯ, ಅಮೀರ್ ಖಾನ್ ಅಭಿನಯಿಸುತ್ತಿರುವ 'ಥಗ್ಸ್ ಹಿಂದೂಸ್ತಾನ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸುತ್ತಿದ್ದಾರೆ. ಅದಾದ ನಂತರ ಚಿರಂಜೀವಿ ಅಭಿನಯದ ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲೂ ಬಿಗ್-ಬಿ ವಿಶೇಷ ಪಾತ್ರವನ್ನ ನಿರ್ವಹಿಸಲಿದ್ದಾರೆ.

    English summary
    The 75-year-old actor Amitabh Bachchan took to his personal blog, where he said that the injury recently got aggravated after some heavy-lifting on a film's sets. Amitabh Bachchan is currently under medication and applying ice compresses to his injury.
    Wednesday, December 27, 2017, 19:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X