For Quick Alerts
  ALLOW NOTIFICATIONS  
  For Daily Alerts

  ಟೈಲರ್ ಮಾಡಿದ ತಪ್ಪು ಜನಪ್ರಿಯ ಸ್ಟೈಲ್ ಆಗಿಬಿಟ್ಟಿತು

  |

  ನಟ ಅಮಿತಾಬ್ ಬಚ್ಚನ್ ವಯಸ್ಸು ಈಗ 78 ವರ್ಷ. ಆದರೂ ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸಕ್ರಿಯವಾಗಿ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಾರೆ. ಸತತ 52 ವರ್ಷಗಳಿಂದಲೂ ಅಮಿತಾಬ್ ಬಚ್ಚನ್ ನಟಿಸುತ್ತಲೇ ಬಂದಿದ್ದಾರೆ.

  ನಟನಾಗಿ ವೃತ್ತಿ ಆರಂಭಿಸಿದ ಸಮಯದಲ್ಲಿ 'ಆಂಗ್ರಿ ಯಂಗ್ ಮ್ಯಾನ್' ಎಂದು ಕರೆಸಿಕೊಳ್ಳುತ್ತಿದ್ದ ಅಮಿತಾಬ್ ಬಚ್ಚನ್ ಕೋಟ್ಯಂತರ ಯುವ ಅಭಿಮಾನಿಗಳನ್ನು ತಮ್ಮ ವಿಶಿಷ್ಟ ಮ್ಯಾನರಿಸಂ, ನಟನೆ, ಸಿಡಿಗುಂಡಿನಂಥಹಾ ಧ್ವನಿ ಹಾಗೂ ಸ್ಟೈಲ್‌ನಿಂದ ಸೆಳೆದಿದ್ದರು.

  ಅಮಿತಾಬ್ ಬಚ್ಚನ್ ಯಾವುದಾದರೂ ಸಿನಿಮಾದಲ್ಲಿ ಒಂದು ಸ್ಟೈಲ್ ಮಾಡಿದರೆಂದರೆ ಮುಗಿಯಿತು. ಅದು ಕೆಲವೇ ದಿನಗಳಲ್ಲಿ ವೈರಲ್ ಆಗಿಬಿಡುತ್ತಿತ್ತು. ಬಾಯಲ್ಲಿ ಕಡ್ಡಿ ಕಚ್ಚುವ ಸ್ಟೈಲ್, ಪಾನ್ ಜಗಿಯುವ, ಉಗಿಯುವ ಸ್ಟೈಲ್, ಹೇರ್‌ಸ್ಟೈಲ್ ಅಮಿತಾಬ್ ಮಾಡಿದ್ದೆಲ್ಲವೂ ಅನುಕರಣೆ ಆಗುತ್ತಿತ್ತು. ಅಮಿತಾಬ್ ಮಾಡಿದ್ದ ಶರ್ಟ್‌ ಅನ್ನು ಸೊಂಟಕ್ಕೆ ಕಟ್ಟಿಕೊಳ್ಳುವ ಸ್ಟೈಲ್ ಅಂತೂ ಈಗಲೂ ಚಾಲ್ತಿಯಲ್ಲಿದೆ.

  ಸೂಪರ್ ಹಿಟ್ ಸಿನಿಮಾ 'ದೀವಾರ್'ನಲ್ಲಿ ಅಮಿತಾಬ್ ಬಚ್ಚನ್ ದೃಶ್ಯವೊಂದರಲ್ಲಿ ಶರ್ಟ್ ಅನ್ನು ಇನ್‌ಶರ್ಟ್ ಮಾಡದೆ, ಮೇಲಿನ ಗುಂಡಿ ಹಾಕದೆ ಸೊಂಟಕ್ಕೆ ಕಟ್ಟಿಕೊಂಡಿರುತ್ತಾರೆ. ಆ ನಂತರ ಆ ಸ್ಟೈಲ್ ಬಹಳವೇ ಫೇಮಸ್ ಆಗಿಬಿಟ್ಟಿತು. ಈಗಲೂ ಕೆಲವು ಸಿನಿಮಾಗಳಲ್ಲಿ ವಿಲನ್‌ ಪಾತ್ರಧಾರಿಗಳು ಇದೇ ಸ್ಟೈಲ್ ಅನ್ನು ಅನುಕರಿಸುತ್ತಾರೆ. ಆದರೆ ಈ ಸ್ಟೈಲ್‌ನ ಪ್ರಾರಂಭವಾದ ಹಿಂದಿನ ಆಸಕ್ತಿಕರ ಕತೆಯನ್ನು ಬಚ್ಚನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ''ಈ ಸ್ಟೈಲ್ ಪ್ರಾರಂಭವಾಗಿದ್ದರ ಹಿಂದೆ ದೊಡ್ಡ ಕತೆ ಇದೆ. ಅಂದಿನ ದಿನ ಚಿತ್ರೀಕರಣಕ್ಕೆ ಎಲ್ಲ ಸಿದ್ಧತೆ ಆಗಿತ್ತು. ನಾನು ಶರ್ಟ್ ಧರಿಸಿ ಸಿದ್ದನಾದೆ, ನೋಡಿದರೆ ಶರ್ಟ್‌ ಮೊಳಕಾಲಿನವರೆಗೂ ಉದ್ದವಿದೆ. ಇನ್ನೊಂದು ಶರ್ಟ್ ತರಿಸುವಷ್ಟು ಸಮಯ ನಮ್ಮ ಬಳಿ ಇರಲಿಲ್ಲ. ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಹಾಗಾಗಿ ನಾನು ಶರ್ಟ್‌ ಅನ್ನು ಎತ್ತಿ ನಡುವಿಗೆ ಕಟ್ಟಿಕೊಂಡೆ, ನಂತರ ಇದುವೇ ದೊಡ್ಡ ಸ್ಟೈಲ್ ಆಗಿಬಿಟ್ಟಿತು'' ಎಂದಿದ್ದಾರೆ ಅಮಿತಾಬ್ ಬಚ್ಚನ್.

  'ದೀವಾರ್' ಸಿನಿಮಾ 1975 ರಲ್ಲಿ ಬಿಡುಗಡೆ ಆಗಿತ್ತು. ಅಮಿತಾಬ್ ವೃತ್ತಿ ಜೀವನದ ಭಾರಿ ದೊಡ್ಡ ಹಿಟ್‌ಗಳಲ್ಲಿ ಈ ಸಿನಿಮಾ ಸಹ ಒಂದು. ಸಿನಿಮಾವನ್ನು ಯಶ್ ಚೋಪ್ರಾ ನಿರ್ದೇಶನ ಮಾಡಿದ್ದರು. ಕತೆ ಬರೆದಿದ್ದು ಸಲೀಂ-ಜಾವೇದ್.

  Dhanush ಅವರ ಸಂಭಾವನೆ ಈಗ ಎಷ್ಟು ಗೋತ್ತಾ | Filmibeat Kannada

  ಅಮಿತಾಬ್ ಬಚ್ಚನ್ ಪ್ರಸ್ತುತ ರಶ್ಮಿಕಾ ಮಂದಣ್ಣ ಜೊತೆಗೆ 'ಗುಡ್ ಬೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ 'ಬ್ರಹ್ಮಾಸ್ತ್ರ', 'ಜುಂಡ್' ಸಿನಿಮಾಗಳು ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ ಅಜಯ್ ದೇವಗನ್ ಜೊತೆಗೆ 'ಮೇ ಡೇ', 'ಜ್ಯುವೆಲ್ ಆಫ್ ಇಂಡಿಯಾ', 'ದಿ ಇಂಟರ್ನ್' ಇನ್ನೂ ಕೆಲವು ಸಿನಿಮಾಗಳಲ್ಲಿ ಬಚ್ಚನ್ ನಟಿಸುತ್ತಿದ್ದಾರೆ.

  English summary
  Actor Amitabh Bachchan tells story behind his iconic style in movie Deewar. He said that style happend due to tailor's mistake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X