Rashmika-Amitabh: ರಶ್ಮಿಕಾ ವಿಡಿಯೋ ವೈರಲ್? ಕೇಸ್ ಹಾಕಬೇಕು ಎಂದು ಅಮಿತಾಬ್ ಬಚ್ಚನ್ ಆಗ್ರಹ

ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ಕಳೆದರಡು ದಿನಗಳಿಂದ ಫೇಕ್ ವಿಡಿಯೋವೊಂದು ವೈರಲ್ ಆಗುತ್ತಿದೆ. ಬೇರೆ ಯುವತಿಯ ವಿಡಿಯೋ ರಶ್ಮಿಕಾ ಮುಖ ಮಾರ್ಪ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ. ಈ ವಿಡಿಯೋದಲ್ಲಿರೋದು ರಶ್ಮಿಕಾ ಮಂದಣ್ಣ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಅದು ಆಕೆಯ ವಿಡಿಯೋ ಅಲ್ಲ.

ಸೆಲೆಬ್ರೆಟಿಗಳ ಫೋಟೊ, ವಿಡಿಯೋನ ಮಾರ್ಪ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ತೇಲಿ ಬಿಡುತ್ತಾರೆ. ರಶ್ಮಿಕಾ ಮಂದಣ್ಣ ವಿಚಾರದಲ್ಲೂ ಅದೇ ನಡೆದಿದೆ. ಝರಾ ಪಟೇಲ್ ಎಂಬ ಯುವತಿಯ ಹಾಟ್ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗುತ್ತಿದೆ. ಈ ವಿಡಿಯೋ ಬಗ್ಗೆ ಪತ್ರಕರ್ತ ಅಮಿತ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಎರಡು ವಿಡಿಯೋಗಳನ್ನು ಹಂಚಿಕೊಂಡು ವೈರಲ್ ವಿಡಿಯೋ ಸತ್ಯಾಸತ್ಯತೆಯನ್ನು ಬಯಲು ಮಾಡಿದ್ದರು.

Amitabh Bachchan urges to legle action on Rashmika Mandannas Viral Deepfake Video

ರಶ್ಮಿಕಾಗೆ ಕಳಂಕ ತರಲು ಈ ರೀತಿ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಈಗ ಪ್ರತಿಕ್ರಿಯಿಸಿದ್ದಾರೆ. ಕೂಡಲೇ ಈ ಬಗ್ಗೆ ಕಾನೂನಾತ್ಮಕವಾಗಿ ದೂರು ದಾಖಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಪತ್ರಕರ್ತ ಅಮಿತ್ ಟ್ವೀಟ್ ರೀ ಟ್ವೀಟ್ ಮಾಡಿ ಬಿಗ್‌ ಬಿ "ಹೌದು ಇದು ಕಾನೂನಾತ್ಮಕವಾಗಿ ಬಲವಾದ ಪ್ರಕರಣ" ಎಂದು ಬರೆದುಕೊಂಡಿದ್ದಾರೆ.

ಅಸಲಿ ವಿಚಾರ ಏನು ಅಂದರೆ ಝರಾ ಪಟೇಲ್ ಎಂಬ ಯುವತಿ ತುಂಡು ಬಟ್ಟೆಯಲ್ಲಿ ಲಿಫ್ಟ್ ಒಳಗೆ ಪ್ರವೇಶಿಸಿರುವುದನ್ನು ನೋಡಬಹುದು. ಡೀಪ್ ನೆಕ್ ಡ್ರೆಸ್‌ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಆದರೆ ಆಕೆಯ ಮುಖವನ್ನು ರಶ್ಮಿಕಾ ಮಂದಣ್ಣ ರೀತಿ ಬದಲಿಸಲಾಗಿದೆ. ಕೆಲವರು ಇದನ್ನು ನೋಡಿ ರಶ್ಮಿಕಾ ಮಂದಣ್ಣ ಇಷ್ಟು ಹಾಟ್ ಆಗಿ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರಾ? ಎಂದು ಹುಬ್ಬೇರಿಸಿದ್ದಾರೆ. ಆದರೆ ಮಾರ್ಪ್ ವಿಡಿಯೋದಲ್ಲಿ ಯುವತಿ ಲಿಫ್ಟ್‌ ಒಳಗೆ ಬರುವ ವೇಳೆ ಆಕೆಯ ಮುಖವನ್ನು ರಶ್ಮಿಕಾ ರೀತಿ ಬದಲಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

Amitabh Bachchan urges to legle action on Rashmika Mandannas Viral Deepfake Video

ಈ ವೀಡಿಯೋ ತೇಲೆಬಿಟ್ಟವರ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ತಂತ್ರಜ್ಞಾನ ಬಳಸಿ ಯಾರು ಏನು ಬೇಕಾದರೂ ಮಾಡಬಹುದಾ? ಇದನ್ನು ತಡೆಯೋಕೆ ಸಾಧ್ಯವಿಲ್ಲವೇ? ತಂತ್ರಜ್ಞಾನ ದಿನದಿಂದ ದಿನಕ್ಕೆ ಮಾರಕವಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

'ಗುಡ್‌ ಬೈ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ತಂದೆ- ಮಗಳಾಗಿ ನಟಿಸಿದ್ದರು. ಬಾಲಿವುಡ್ ಪ್ರವೇಶಿಸಿದ ಬಹಳ ಕಡಿಮೆ ಅವಧಿಯಲ್ಲಿ ಬಿಗ್‌ ಬಿ ಜೊತೆ ನಟಿಸೋ ಅವಕಾಶ ಗಿಟ್ಟಿಸಿ ರಶ್ಮಿಕಾ ಎಲ್ಲರ ಹುಬ್ಬೇರಿಸಿದ್ದರು. ವಿಕಾಸ್ ಬೇಹ್ಲ್ ನಿರ್ದೇಶನದ ಈ ಫ್ಯಾಮಿಲಿ ಡ್ರಾಮಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ರಶ್ಮಿಕಾ, ಬಾಲಿವುಡ್ ಶೆಹನ್ ಶಾ ಜೊತೆ ನಟಿಸಿ ಗೆದ್ದರು. ಕೊಡಗಿನ ಬೆಡಗಿ ನಟನೆಯನ್ನು ಅಮಿತಾಬ್ ಕೂಡ ಮೆಚ್ಚಿದ್ದರು.

More from Filmibeat

English summary
Amitabh Bachchan reacts to Rashmika Mandanna's Viral Deepfake Video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X