ಅಂಗಾಂಗ ವೈಫಲ್ಯಗೊಂಡಿದ್ದವು: ಆರೋಗ್ಯ ಸಮಸ್ಯೆ ಬಿಚ್ಚಿಟ್ಟ ಅಮಿತಾಬ್ ಬಚ್ಚನ್

ನಟ ಅಮಿತಾಬ್ ಬಚ್ಚನ್‌ ವಯಸ್ಸು 80 ಆಗಲು ಕೆಲವು ತಿಂಗಳಷ್ಟೆ ಬಾಕಿ ಇದೆ. ಪೂರ್ಣ ವಿಶ್ರಾಂತಿ ಬೇಡುವ ವಯಸ್ಸಿದು ಆದರೆ ಬಚ್ಚನ್ ಅವರ ಕೈಯಲ್ಲಿ ಈಗಲೂ ಐದಾರು ಸಿನಿಮಾಗಳಿವೆ. ಪ್ರತಿದಿನ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ.

ಕೆಲವು ದಿನಗಳ ಹಿಂದಷ್ಟೆ ಕೋವಿಡ್ ವಿರುದ್ಧ ಎರಡನೇ ಬಾರಿ ಹೋರಾಡಿ ಗೆದ್ದು ಬಂದಿದ್ದಾರೆ. ಪ್ರತಿ ದಿನ ತಪ್ಪದೆ ಜಿಮ್ ಮಾಡುತ್ತಾರೆ. ಆರೋಗ್ಯಪೂರ್ಣ ಆಹಾರ ಸೇವಿಸುತ್ತಾರೆ. ವಯಸ್ಸು 80 ಆದರೂ ಆರೋಗ್ಯವಾಗಿ ಇರುವಂತೆ ಕಾಣುತ್ತಾರಾದರೂ ಅವರನ್ನೂ ಕೆಲವು ವಯೋಸಹಜ ಅನಾರೋಗ್ಯಗಳು ಕಾಡುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ಅಮಿತಾಬ್ ಬಚ್ಚನ್ ಆಗಾಗ್ಗೆ ಬ್ಲಾಗ್‌ಗಳನ್ನು ಸಹ ಬರೆಯುವುದುಂಟು. ಬ್ಲಾಗ್‌ಗಳಲ್ಲಿ ಸಾಮಾನ್ಯವಾಗಿ ತಮ್ಮ ಖಾಸಗಿ ವಿಷಯಗಳ ಬಗ್ಗೆಯೂ ಬಚ್ಚನ್ ಬರೆಯುತ್ತಾರೆ. ಈ ಬಾರಿ ತಾವು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂಗತಿಯೊಂದರ ಬಗ್ಗೆ ಬರೆದಿದ್ದಾರೆ.

ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದ ಅವನಿ ಹೆಸರಿನ ಬಾಲಕಿಯ ಬಗ್ಗೆ ಬರೆದಿರುವ ಅಮಿತಾಬ್ ಬಚ್ಚನ್ ತಮ್ಮ ಜೀವನದಲ್ಲಿ ತಾವು ಅನುಭವಿಸಿದ್ದ ಸಮಸ್ಯೆಯೊಂದರ ಬಗ್ಗೆಯೂ ಬರೆದಿದ್ದಾರೆ.

ಒಮ್ಮೆ ಅಮಿತಾಬ್ ಬಚ್ಚನ್‌ರ ಕೆಲವು ಅಂಗಾಂಗಗಳು ಕೆಲಸ ಮಾಡುವುದನ್ನೇ ಸ್ಥಗಿತಗೊಳಿಸಿಬಿಟ್ಟಿದ್ದವಂತೆ. ಅದೊಂದು ಮೆಡಿಕಲ್ ಕಂಡೀಶನ್ ಎಂದು ಬಚ್ಚನ್‌ಗೆ ಹೇಳಲಾಗಿತ್ತಂತೆ. ಇನ್ನು ಜೀವನವೇ ಮುಗಿಯಿತು ಎಂದುಕೊಳ್ಳುವಾಗ ವೈದ್ಯರ ಶ್ರಮ, ಪ್ರೀತಿ ಪಾತ್ರರ, ಅಭಿಮಾನಿಗಳ ಹಾರೈಕೆಯಿಂದ ಅಂಗಾಂಗಗಳು ಮರಳಿ ಕೆಲಸ ಮಾಡಲು ಆರಂಭವಾದವಂತೆ.

Amitabh Bachchan Wrote About His Past Health Condition

''ಕೆಲವು ಅಂಗಾಗಳು ಕೆಲಸ ಮಾಡುವುದು ಸ್ಥಗಿತಗೊಳಿಸಿದ್ದವು. ಆ ವಿಷಯದ ಆಳಕ್ಕೆ ನಾನು ಹೋಗುವುದಿಲ್ಲ. ವಿವರವಾಗಿ ಹೇಳಿದರೆ ನಾನು ಸಿಂಪತಿ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದೇನೆ ಎಂದು ಭಾವಿಸುವ ಅಪಾಯವಿದೆ. ಸೂಕ್ತ ಚಿಕಿತ್ಸೆ ಹಾಗೂ ಪ್ರೀತಿ ಪಾತ್ರರ ಹಾರೈಕೆ, ಪ್ರಾರ್ಥನೆಗಳಿಂದ ಅಂಗಾಂಗಗಳು ಮತ್ತೆ ಕೆಲಸ ಮಾಡಲು ಆರಂಭಿಸಿದವು. ಮೊದಲಿನಂತೆ ಪೂರ್ಣವಾಗಿ ಕೆಲಸ ಮಾಡುವುದಿಲ್ಲವಾದರೂ ಇದ್ದುದರಲ್ಲಿ ಪರವಾಗಿಲ್ಲ'' ಎಂದಿದ್ದಾರೆ ಬಚ್ಚನ್.

ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ಅಮಿತಾಬ್ ಬಚ್ಚನ್ ನಟನೆಯ 'ಗುಡ್‌ ಬೈ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಬಚ್ಚನ್ ಮಗಳ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದೇ ತಿಂಗಳ ಒಂಬತ್ತರಂದು ಬಿಡುಗಡೆ ಆಗುತ್ತಿರುವ ರಣ್ಬೀರ್ ಕಪೂರ್- ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿಯೂ ಬಚ್ಚನ್ ನಟಿಸಿದ್ದಾರೆ. ಪ್ರಭಾಸ್ ನಟನೆಯ ಹೊಸ ಸಿನಿಮಾದಲ್ಲಿ ಬಚ್ಚನ್ ನಟಿಸುತ್ತಿದ್ದಾರೆ. ಹಾಲಿವುಡ್‌ನ 'ದಿ ಇಂಟರ್ನ್' ಹಿಂದಿ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಸೂರಜ್ ಬರ್ಜಾತಿಯಾ ನಿರ್ದೇಶನದ 'ಊಂಚಾಯಿಯಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ತೆರ ಯಾರ್ ಹೂ ಮೇ' ಹಾಗೂ ತಮಿಳಿನ 'ಉಯಿರಂದ ಮಣಿತನ್' ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ 'ಕೌನ್ ಬನೇಗಾ ಕರೋಡ್‌ಪತಿ ' ಶೋ ನಡೆಸಿಕೊಡುತ್ತಿದ್ದಾರೆ.

More from Filmibeat

English summary
Actor Amitabh Bachchan wrote about his past health condition. He said once he lost use of his limbs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X