»   » ಅಮಿತಾಬ್‌ರ ಎಬಿಸಿಎಲ್ ಕಚೇರಿ ಮೇಲೆ ದಾಳಿ

ಅಮಿತಾಬ್‌ರ ಎಬಿಸಿಎಲ್ ಕಚೇರಿ ಮೇಲೆ ದಾಳಿ

Posted By: Staff
Subscribe to Filmibeat Kannada
Amitabh Bachchan
ಮುಂಬೈ, ಮಾ.1: ಶುಕ್ರವಾರ ರಾತ್ರಿ ಅಮಿತಾಬ್ ಬಚ್ಚನ್ ಕಾರ್ಪೋರೇಷನ್ ಲಿ.(ಎಬಿಸಿಎಲ್) ಕಚೇರಿಯ ಮೇಲೆ  ಅಪರಿಚಿತರು ದಾಳಿ ಮಾಡಿದ್ದಾರೆ. ಅಮಿತಾಬ್‌ರ ಮುಂಬೈನ ಜುಹೂ ಪ್ರಾಂತ್ಯದಲ್ಲಿರುವ ನಿವಾಸ  'ಜಲ್ಸಾ' ಹಿಂಭಾಗದ ಅವರ  ಕಚೇರಿಯ ಮೇಲೆ ಬಿಯರ್ ಬಾಟಲ್‌ಗಳನ್ನು  ಎಸೆದು ಪರಾರಿಯಾಗಿದ್ದಾರೆ. 

ಮುಂಬೈಗೆ ವಲಸೆ ಬರುತ್ತಿರುವ ಉತ್ತರ ಭಾರತೀಯರ ವಿರುದ್ಧ  ಪ್ರತಿಭಟಿಸಿದಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾರ್ಯಕರ್ತರು ಅಮಿತಾಬ್ ಅವರ  ''ಪ್ರತೀಕ್ಷಾ'' ಮನೆಯ ಮೇಲೆ ಕಳೆದ ತಿಂಗಳಲ್ಲಿ ಬಾಟಲಿ ಎಸೆದು ಪರಾರಿಯಾಗಿದ್ದರು.ಈ ಘಟನೆ ಬೆನ್ನ ಹಿಂದೆಯೇ  ಇಂದು ಅಮಿತಾಬ್ ಕಚೇರಿ ಎಬಿಸಿಎಲ್ ಮೇಲೆ ದಾಳಿ ಮಾಡಲಾಗಿದೆ. ಸ್ಯಾಂಟ್ರೋ ಕಾರಿನಲ್ಲಿ ಬಂದ ನಾಲ್ಕು ಜನ  ಇಂದು ಅವರ ಕಚೇರಿ ಮೇಲೆ  ನಡೆದ ದಾಳಿ ಮಾಡಿರುವುದಾಗಿ ಅಮಿತಾಬ್ ಪೊಲೀಸರಿಗೆ ತಿಳಿಸಿದ್ದಾರೆ.

ಅಮಿತಾಬ್ ಅವರ ಎಬಿಸಿಎಲ್ ಕಚೇರಿಗೆ ಸೇರಿದ ಅದರ ಪಕ್ಕದಲ್ಲೇ ಇರುವ  ''ಜನಕ್ ಬಂಗಲೆ'' ಕಡೆಗೆ ಅಪರಿಚಿತರು ಬಿಯರ್ ಬಾಟಲಿ ಎಸೆದಿರುವುದಾಗಿ  ನಮಗೆ ಕರೆ ಬಂತು, ಪರಿಶೀಲನೆಗಾಗಿ ಪೊಲೀಸ್ ಅಧಿಕಾರಿಗಳನ್ನು  ಸ್ಥಳಕ್ಕೆ  ಕಳುಹಿಸಲಾಯಿತು ಎಂದು  ಉಪ ಪೊಲೀಸ್ ಕಮೀಷನರ್ ವಿನಯ್ ಚೌಬೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದರು. ಪ್ರಸ್ತುತ ''ಜನಕ್ ಬಂಗಲೆ'' ವ್ಯಾಯಾಮ ಶಾಲೆ ಹಾಗೂ ಎಬಿಸಿಎಲ್ ಕಚೇರಿಯಾಗಿ  ಬಳಕೆಯಾಗುತ್ತಿದೆ. (ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada