ಬಿಟೌನ್ ಅಂಗಳಕ್ಕೆ ಮತ್ತೊಂದು ಸ್ಟಾರ್ ನಟನ ಮೊಮ್ಮಗ ಎಂಟ್ರಿ
ಸ್ಟಾರ್ ಗಳ ಮಕ್ಕಳು ಹಾಗೂ ಸಂಬಂಧಿಕರು ಚಿತ್ರರಂಗಕ್ಕೆ ಕಲಾವಿದರಾಗಿ ಕಾಲಿಡುವುದು ಸರ್ವೇ ಸಾಮಾನ್ಯ. ಸಾಕಷ್ಟು ವರ್ಷಗಳಿಂದ ಈ ಪದ್ದತಿ ಚಿತ್ರರಂಗದಲ್ಲಿ ನಡೆದುಕೊಂಡು ಬರುತ್ತಿದ್ದು ಬಾಲಿವುಡ್ ಅಂಗಳದಲ್ಲಿ ಅಭಿನಯದ ಮೂಲಕವೇ ಸಾಕಷ್ಟು ಸುದ್ದಿ ಮಾಡಿದ್ದ ನಟ ಅಮರೀಶ್ ಪುರಿ ಮೊಮ್ಮಗ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾನೆ.
ವರ್ಧನ್ ಪುರಿ ಬಾಲಿವುಡ್ ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಲು ಸಿದ್ದತೆ ಮಾಡಿಕೊಂಡಿದ್ದು ಬಾಲಿವುಡ್ ನಲ್ಲಿ ರೊಮ್ಯಾಂಟಿಕ್ ಹಾಗೂ ಥ್ರಿಲ್ಲರ್ ಸಿನಿಮಾಗಳ ಮೂಲಕ ಪ್ರಖ್ಯಾತಿ ಗಳಿಸಿರುವ ಜಯಂತಿಲಾಲ್ ಗಡಾ ನಿರ್ಮಾಣದ ಸಿನಿಮಾ ಮೂಲಕ ವರ್ಧನ್ ಪುರಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

ವರ್ಧನ್ ಪುರಿ ಅಭಿನಯದ ಸಿನಿಮಾ ನಾಯಕಿ ಮತ್ತು ನಿರ್ದೇಶಕರ ಹುಡುಕಾಟ ಶುರುವಾಗಿದ್ದು, ಸೆಪ್ಟೆಂಬರ್ ನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ ಇದೆಯಂತೆ. ಸದ್ಯ ಸಿನಿಮಾಗಾಗಿ ಟ್ರೈನಿಂಗ್ ಪಡೆಯುತ್ತಿದ್ದು ಹಾಲಿವುಡ್ ಸಿನಿಮಾದ ಒಂದು ಎಳೆಯನ್ನು ತೆಗೆದುಕೊಂಡು ಹೊಸ ಕಥೆಯನ್ನು ಬರೆಯಲಾಗಿದ್ಯಂತೆ.

ಸಾಕಷ್ಟು ಸ್ಟಾರ್ ಗಳ ಮಕ್ಕಳು ಚಿತ್ರರಂಗದಲ್ಲಿ ವೃತ್ತಿ ಆರಂಭ ಮಾಡಿ ಸಕ್ಸಸ್ ಪಡೆದವರು ಇದ್ದಾರೆ, ಏನು ಮ್ಯಾಜಿಕ್ ಮಾಡಲು ಸಾಧ್ಯವಾಗದೇ ಮನೆ ಕಡೆ ಮುಖ ಮಾಡಿರುವವರು ಇದ್ದಾರೆ. ವರ್ಧನ್ ಪುರಿ ನೋಡಿಲು ಸುಂದರವಾಗಿದ್ದು ತಾತನಂತೆ ಮೊಮ್ಮಗ ಅಭಿನಯಲ್ಲೇ ಅಭಿಮಾನಿಗಳನ್ನು ಪಡೆದುಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications