For Quick Alerts
  ALLOW NOTIFICATIONS  
  For Daily Alerts

  ವಯಸ್ಸಾಗಿದ್ದರು ಕಿರಿಯ ನಟಿಯರೊಂದಿಗೆ ರೊಮ್ಯಾನ್ಸ್ ಮಾಡ್ತಾರೆ: ಅಮೃತಾ ರಾವ್

  |

  ಮದುವೆ ಆಗಿ ಮಕ್ಕಳಾದ ಮೇಲೆ ಎಷ್ಟೇ ಪ್ರತಿಭಾವಂತ ನಟಿಯರಾಗಿದ್ದರೂ ಅವರಿಗೆ ಅವಕಾಶಗಳು ಕಡಿಮೆ ಆಗಿಬಿಡುತ್ತವೆ. ಆದರೆ ನಟರ ವಿಷಯದಲ್ಲಿ ಹೀಗಿಲ್ಲ. ಈ ವಿಷಯದ ಬಗ್ಗೆ ಆಗಾಗ್ಗೆ ಕೆಲವು ನಟಿಯರು ದನಿ ಎತ್ತುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್ ನಟಿ ಅಮೃತಾ ರಾವ್ ಇದೇ ವಿಷಯದ ಬಗ್ಗೆ ತಮ್ಮ ಅಸಮಾಧಾನ ಹೊರಗೆ ಹಾಕಿದ್ದಾರೆ.

  'ಸಿನಿಮಾ ರಂಗದಲ್ಲಿ ಲಿಂಗ ಸಮಾನತೆ ಇಲ್ಲ' ಎಂದಿರುವ ಅಮೃತಾ ರಾವ್, ಮಹಿಳೆ ಹಾಗೂ ಪುರುಷರ ವಿಷಯದಲ್ಲಿ ಸಾಕಷ್ಟು ಭೇದ-ಭಾವ ಸಿನಿಮಾ ರಂಗದಲ್ಲಿ ಇದೆ ಎಂದಿದ್ದಾರೆ.

  ನಾಯಕ ನಟರು ಮದುವೆ ಆಗಿ ಮಕ್ಕಳಾದರೆ ಅವರ ವೃತ್ತಿಯಲ್ಲಿ ಯಾವುದೇ ಏರಿಳಿತವಾಗುವುದಿಲ್ಲ, ಅದೇ ನಟಿಯೊಬ್ಬರು ಮದುವೆ ಆಗಿ ಮಕ್ಕಳಾದರೆ ಅವರಿಗೆ ಅವಕಾಶಗಳು ಕಡಿಮೆ ಆಗುತ್ತವೆ ಇದು ಸಿನಿಮಾ ರಂಗದ ಇಬ್ಭಗೆ ನೀತಿ ಎಂದು ಕಿಡಿ ಕಾರಿದ್ದಾರೆ ಅಮೃತಾ.

  ಸ್ವತಃ ತಾಯಿಯಾಗಿರುವ ಅಮೃತಾ ರಾವ್, 'ಬದಲಾವಣೆ ಎಂಬುದು ಮಹಿಳೆಯರಿಗೆ ಮಾತ್ರವೇ ಏಕೆ ಪುರುಷರಿಗೇಕಿಲ್ಲ? ಮದುವೆಯಾಗಿ ಎರಡೆರಡು ಮಕ್ಕಳಾದ ನಟರೂ ಸಹ ಯುವ ನಟಿಯರೊಟ್ಟಿಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡುತ್ತಾರೆ. ಮದುವೆಯಾದ ಮೇಲೆ ನಟರ ಜೀವನ ಬದಲಾಗುವುದಿಲ್ಲ ಆದರೆ ನಟಿಯರ ಜೀವನ ಮಾತ್ರ ಬದಲಾಗುತ್ತದೆ ಎಂದು ನಿರ್ಣಯಿಸಿರುವುದು ಏಕೆ?' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

  '50,60, 70ರ ದಶಕದಲ್ಲಿ ಪರಿಸ್ಥಿತಿ ಹೀಗೆ ಇರಲಿಲ್ಲ. ನಟಿಯರಾದ ನೂತನ್, ಶರ್ಮಿಳಾ ಟ್ಯಾಗೊರ್ ಇನ್ನೂ ಹಲವು ನಟಿಯರು ಮದುವೆಯಾಗಿ ಮಕ್ಕಳಾದ ನಂತರವೂ ಮುಖ್ಯ ಪಾತ್ರಗಳಲ್ಲಿಯೇ ನಟಿಸುತ್ತಿದ್ದರು. ಹಲವಾರು ಅವಕಾಶಗಳು ಅವರಿಗೆ ದೊರಕುತ್ತಿದ್ದವು. ಆದರೆ 1980ರ ನಂತರ ಚಿತ್ರರಂಗದ ಚಿತ್ರಣ ಹಠಾತ್ತನೆ ಬದಲಾಯಿತು' ಎಂದಿದ್ದಾರೆ ಅಮೃತಾ ರಾವ್.

  'ನಮ್ಮ ಸಮಯದಲ್ಲಿ ಕಾಜೋಲ್ ಬಿಟ್ಟರೆ ಇನ್ನಾವ ನಟಿಯರೂ ಸಹ ಮದುವೆಯಾಗಿ ಮಕ್ಕಳಾದ ಮೇಲೂ ನಾಯಕಿ ಪಾತ್ರದಲ್ಲಿ ನಟಿಸಲಿಲ್ಲ. ನಾನು ಮತ್ತು ನನ್ನ ವಾರಗೆಯ ಹಲವು ನಟಿಯರು ಮದುವೆಯಾದ ನಂತರ ಸಿನಿಮಾದಿಂದ ದೂರವೇ ಉಳಿಯಬೇಕಾಯಿತು' ಎಂದಿದ್ದಾರೆ ಅಮೃತಾ.

  'ಮದುವೆಯಾಗಿ ಮಕ್ಕಳು ಹೊಂದಿದ ಸುಂದರ, ಪ್ರತಿಭಾವಂತ ನಟಿಯರು ಈಗಲೂ ಸಾಕಷ್ಟು ಮಂದಿ ಇದ್ದು ಅವರು ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚುವುದನ್ನು ನೋಡುವ ಆಸೆ ನನಗೆ ಇದೆ' ಎಂದಿದ್ದಾರೆ ಅಮೃತಾ ರಾವ್.

  ಸರಿಗಮಪ ಖ್ಯಾತಿಯ ಪೊಲೀಸ್ ಕಾನ್ಸ್ಟೇಬಲ್ ಸುಬ್ರಹ್ಮಣ್ಯ ಪತ್ನಿ ಕೊರೊನಾದಿಂದ ಸಾವು | Filmibeat Kannada

  2002 ರಲ್ಲಿ ನಟನೆ ಆರಂಭಿಸಿದ ಅಮೃತಾ ರಾವ್ ಶಾರುಖ್ ಖಾನ್, ಅಕ್ಷಯ್ ಕುಮಾರ್, ಶಾಹಿದ್ ಕಪೂರ್ ಅಂಥಹಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಕೆಲ ಕಾಲ ನಂಬರ್ 1 ನಟಿಯಾಗಿದ್ದರು. ಮಹೇಶ್ ಬಾಬು ಜೊತೆಗೆ ತೆಲುಗಿನಲ್ಲಿಯೂ ಸಿನಿಮಾ ಮಾಡಿದ್ದರು. 2013 ರ ಬಳಿಕ ನಟನೆಯಿಂದ ದೂರಾದ ಅಮೃತಾ ರಾವ್ 2019 ರಲ್ಲಿ ಮತ್ತೆ ನಟನೆಗೆ ಮರಳಿದ್ದಾರೆ. ಅವರ ನಟನೆಯ 'ದಿ ಲಿಜೆಂಡ್ ಆಫ್ ಕುನಾಲ್', 'ಸತ್ಸಂಗ್' ಸಿನಿಮಾಗಳು ಬಿಡುಗಡೆ ಆಗಬೇಕಿವೆ.

  English summary
  Amrita Rao talks about movie industry's Gender differentiation. She said aged male actors romancing with younger heroines.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X