'ಮಾನಿಕೆ ಮಾಗೆ ಹಿತೆ' ಹಾಡನ್ನು ಹಿಂದಿಯಲ್ಲಿ ಹಾಡಿದ ಫಡ್ನವಿಸ್ ಪತ್ನಿ ಅಮೃತಾ

ಶ್ರೀಲಂಕಾ ಮೂಲದ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿದ 'ಮಾನಿಕೆ ಮಾಗೆ ಹಿತೆ' ಹಾಡು ಈಗಾಗಲೇ ಸೊಷಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಹಾಡು ಕೇವಲ ಶ್ರೀಲಂಕಾ ಮಾತ್ರವಲ್ಲದೇ ಭಾರತದಲ್ಲೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈ ಹಾಡನ್ನು ಸಾಕಷ್ಟು ಮಂದಿ ತಮ್ಮದೇ ಶೈಲಿಯಲ್ಲಿ ಹಾಡುತ್ತಿದ್ದು ಅವುಗಳು ಕೂಡ ಫೇಮಸ್ ಆಗುತ್ತಿದೆ. ಇದೀಗ ಈ ಪ್ರಖ್ಯಾತ ಹಾಡು ಮಾನಿಕೆ ಮಾಗೆ ಹಿತೆ ಹಾಡನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಹಾಡಿದ್ದಾರೆ. ಅದು ಮೂಲ ಭಾಷೆಯ ಹಾಡನ್ನಲ್ಲ. ಬದಲಾಗಿ ಮಾನಿಕೆ ಮಾಗೆ ಹಿತೆ ಹಾಡನ್ನು ಹಿಂದಿ ಅವತರಣಿಕೆಯಲ್ಲಿ ಹಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಪತ್ನಿ ಅಮೃತಾ ಫಡ್ನಾವೀಸ್ ಸಾಕಷ್ಟು ಹಾಡುಗಳನ್ನು ಈಗಾಗಲೇ ಹಾಡಿದ್ದಾರೆ. ಈಗ ಸಾಕಷ್ಟು ವೈರಲ್ ಆಗಿರುವ ಯೋಹನಿ ದಿಲೋಕಾ ಡಿ ಸಿಲ್ವಾ ಹಾಡಿರುವ ಹಾಡನ್ನು ಹಿಂದಿಯಲ್ಲಿ ಅಮೃತಾ ಫಡ್ನಾವೀಸ್ ಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಮೂಲಕ ಮತ್ತಷ್ಟು ಸುದ್ದಿಯಾಗುತ್ತಿದ್ದಾರೆ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್.

ಇತ್ತೀಚೆಗಷ್ಟೇ ಮಾನಿಕೆ ಮಾಗೆ ಹಿತೆ ಹಾಡನ್ನು ಹಾಡಿರುವ ಅಮೃತಾ ಫಡ್ನಾವೀಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಶೇರ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೀವ್ಸ್ ಪಡೆದುಕೊಂಡಿರುವ ಈ ಹಾಡಿಗೆ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೇ ಸಾಕಷ್ಟು ಕಮೆಂಟ್‌ಗಳು ಹರಿದು ಬರುತ್ತಿದ್ದು, ಇದು ಅಮೃತ ಫಡ್ನಾವೀಸ್‌ಗು ಖುಷಿ ನೀಡಿದೆ. ಸಾಕಷ್ಟು ಮಂದಿ ಈ ಹಾಡನ್ನು ತಮ್ಮ ವಾಲ್‌ ಗಳಲ್ಲಿ ಶೇರ್ ಮಾಡಿಕೊಂಡು ಖುಷಿಪಡುತ್ತಿದ್ದಾರೆ.

Amruta Fadnavis breaking the internet with her hindi version of the viral song Manike Mage Hithe

ಇನ್ನು ಈ ಹಾಡನ್ನು ಪೋಸ್ಟ್ ಮಾಡಿರುವ ಅಮೃತಾ ಫಡ್ನವೀಸ್ "ಬಿಸಿಬಿಸಿಯಾದ ರಾಜಕೀಯ ಬೆಳವಣಿಗೆ ನಡುವೆ ಈ ಕೂಲ್ ಹಾಡನ್ನು ಕೇಳುತ್ತಾ ಚಿಲ್ ಮಾಡಿ" ಎಂದು ಬರೆದುಕೊಂಡಿದ್ದಾರೆ. ಹಿಂದಿ ಅವತರಣಿಕೆಯ ಈ ಹಾಡು ಕೇವಲ 1.51 ನಿಮಿಷ ಇದ್ದು, ಹಾಡು ರಿಲೀಸ್ ಆದ ದಿನ ಯೂಟ್ಯೂಬ್‌ನಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿದ್ದಾರೆ.

ಮಾನಿಕೆ ಮಾಗೆ ಹಿತೆ ಹಾಡು ಯೂಟ್ಯೂಬ್‌ನಲ್ಲಿ 18ಕೋಟಿಗೂ ಹೆಚ್ಚು ವೀಕ್ಷಣೆಯಾಗಿದ್ದು, ಸಾಕಷ್ಟು ಕಡೆಗಳಲ್ಲಿ ವೈರಲ್ ಕೂಡ ಆಗುತ್ತಿದೆ. ಯೋಹಾನಿ ಈ ಹಾಡಿಗೆ ಸಿಗುತ್ತಿರುವ ಪ್ರಶಂಸೆಗೆ ಸಂತಸ ಗೊಂಡಿದ್ದು, ಸಾಕಷ್ಟು ಹೆಸರುವಾಸಿ ಕೂಡ ಆಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಯೋಹಾನಿ ಕೆಲ ದಿನಗಳ ಹಿಂದೆ ಹಿಂದಿಯ ಬಿಗ್ ಬಾಸ್ ಸೀಸನ್ 15ರ ವೀಕೆಂಡ್ ಶೋನಲ್ಲಿ ಸಲ್ಮಾನ್ ಖಾನ್ ಜೊತೆ ವೇದಿಕೆ ಕೂಡ ಹಂಚಿಕೊಂಡಿದ್ದರು. ಇದೇ ಸಂದರ್ಭದಲ್ಲಿ ತಾನು ಬಾಲಿವುಡ್ ಎಂಟ್ರಿಯಾಗುತ್ತಿರುವ ಬಗ್ಗೆ ತಿಳಿಸಿರುವ ಯೋಹಾನಿ ಮಾನಿಕೆ ಮಾಗೆ ಹಿತೆ ಹಾಡನ್ನು ಹಿಂದಿ ಅವತರಣಿಕೆಯಲ್ಲೂ ಹಾಡೋದಾಗಿ ತಿಳಿಸಿದ್ದಾರೆ.

Amruta Fadnavis breaking the internet with her hindi version of the viral song Manike Mage Hithe

ಇದಿಷ್ಟೇ ಅಲ್ಲದೇ ಮಾನಿಕೆ ಮಾಗೆ ಹಿತೆ ಹಾಡು ಬೇರೆ ಬೇರೆ ಭಾಷೆ ಗಳಲ್ಲಿಯೂ ಮೂಡಿಬರಲು ಸಜ್ಜಾಗುತ್ತಿದೆ. ಖ್ಯಾತ ಗಾಯಕರು ಈ ಹಾಡಿನ ಡಬ್ಬಿಂಗ್ ಅವತರಣಿಕೆಯನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ. ಹೀಗೆ ಮಾನಿಕೆ ಮಾಗೆ ಹಿತೆ ಹಾಡಿನ ಮೂಲಕ ಗಾಯಕಿ ಯೋಹನಿ ದಿಲೋಕಾ ಡಿ ಸಿಲ್ವಾ ಭಾರಿ ಪ್ರಖ್ಯಾತಿಯನ್ನು ಪಡೆಯುತ್ತಿದ್ದು, ಮತ್ತಷ್ಟು ಹಾಡುಗಳನ್ನು ತಯಾರು ಮಾಡುವ ಸಿದ್ಧತೆಯಲ್ಲಿದ್ದಾರೆ.

More from Filmibeat

English summary
Amruta Fadnavis breaking the internet with her hindi version of the viral song Manike Mage Hithe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X