ಎರಡನೇ ಮದ್ವೆಯಾಗಿ ಇನ್ನೂ ಮೂರು ತಿಂಗಳಾಗಿಲ್ಲ, ಆಗ್ಲೇ ನಾನು ಗರ್ಭಿಣಿಯೆಂದ ದಿ ವಿಲನ್ ನಾಯಕಿ ಆಮಿ ಜಾಕ್ಸನ್...!
ಮದುವೆ ಮುನ್ನ ಗರ್ಭಿಣಿಯಾಗುವುದು ಈಗೀಗ ತುಂಬಾನೇ ಕಾಮನ್. ಅದರಲ್ಲಿಯೂ ಚಿತ್ರರಂಗದಲ್ಲಿ ಇದು ಸರ್ವೆ ಸಾಮಾನ್ಯ. ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ, ಆಲಿಯಾ ಭಟ್, ನೇಹಾ ಧೂಪಿಯಾ ಹೀಗೆ ಹಲವಾರು ನಾಯಕಿಯರು ಈ ಟ್ರೆಂಡ್‌ನ ಫಾಲೋ ಮಾಡಿದ್ದಾರೆ. ಆ ಪೈಕಿ ಆ್ಯಮಿ ಜಾಕ್ಸನ್ ಕೂಡ ಒಬ್ಬರು.
ಹೌದು, ಆ್ಯಮಿ ಜಾಕ್ಸನ್.. 14 ವರ್ಷದ ಹಿಂದೆ ಕಾಲಿವುಡ್ ಸಿನಿಮಾ ಮೂಲಕ, ಚಿತ್ರರಂಗ ಪ್ರವೇಶಿಸಿದ ಲಂಡನ್ ಮೂಲದ ಕಿನ್ನರಿ. ಕನ್ನಡದಲ್ಲಿ ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಎದುರು ನಾಯಕಿಯಾಗಿ ಅಭಿನಯಿಸಿದ್ದವರು ಇವರು. ಆದರೆ ವಿಲನ್‌ನಂಥಾ ದೊಡ್ಡ ಚಿತ್ರದಲ್ಲಿ ನಟಿಸಿ, ಅದು ಬಿಡುಯಗಡೆಯಾದರೂ ಕೂಡಾ ಆ್ಯಮಿ ಜಾಕ್ಸನ್ ಗೆ ತಾನು ಯಾವ ಭಾಷೆಯ ಚಿತ್ರದಲ್ಲಿ ನಟಿಸಿದ್ದೆಂಬುದೇ ಗೊತ್ತಿರಲಿಲ್ಲ ಅನ್ನುವುದು ಬೇರೆ ವಿಚಾರ. ಇಂಥಾ ಆ್ಯಮಿ ಜಾಕ್ಸನ್ ಮದುವೆ ಮುನ್ನವೇ ಗರ್ಭಿಣಿಯಾಗುವ ಮೂಲಕ ಅನೇಕರನ್ನ ನಿಬ್ಬೇರಗಾಗಿಸಿದ್ದರು. 2019ರಲ್ಲಿ ವ್ಯಾಪಕ ಚರ್ಚೆಗೀಡಾದರು.

ಆಗ ಉದ್ಯಮಿ ಜಾರ್ಜ್ ಪನಯಿಟೊ ಜೊತೆ ಕೈ ಹಿಡಿದು ಸುತ್ತಾಡ್ತಾನೇ, ಮದುವೆ ಮುನ್ನವೇ ಗಂಡು ಮಗುಗೆ ಜನ್ಮ ನೀಡಿದ್ದ ಆ್ಯಮಿ ಜಾಕ್ಸನ್ ... ತಮ್ಮಿಬ್ಬರ ಪ್ರೀತಿಯ ಸಂಕೇತವಾದ ಮಗನಿಗೆ ಆ್ಯಂಡ್ರಿಯಾಸ್ ಎಂದು ನಾಮಕರಣ ಮಾಡಿ, ಜಾರ್ಜ್ ಜೊತೆ ಸಂಬಂಧ ಕಡಿದುಕೊಂಡರು. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜಾರ್ಜ್ ಜೊತೆ ಇದ್ದ ತಮ್ಮ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದರು.
ಹೀಗೆ ಜಾರ್ಜ್ ಪನಯಿಟೊ ಅವರಿಂದ ದೂರವಾದ ನಂತರ ಆಮಿ ಜಾಕ್ಸನ್ ಉದ್ಯಮಿ ಎಡ್ ವೆಸ್ಟ್‌ವಿಕ್ ಜೊತೆ ಪ್ರೀತಿಯಲ್ಲಿ ಬಿದ್ದರು. ಕೆಲ ಕಾಲ ಜೊತೆಯಲ್ಲಿ ಸುತ್ತಾಡಿದರು. ಕಳೆದ ಆಗಸ್ಟ್‌ನಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆ ಕೂಡ ಆದರು. ಸದ್ಯದ ಸಮಾಚಾರ ಏನೆಂದರೆ ಮದುವೆಯಾಗಿ ಇನ್ನೂ ನಾಲ್ಕು ತಿಂಗಳಾಗಿಲ್ಲ. ಆಗಲೇ ಆಮಿ ಜಾಕ್ಸನ್ ಮತ್ತೊಮ್ಮೆ ಗರ್ಭಿಣಿಯಾಗಿದ್ಧಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಈ ಖುಷಿ ವಿಚಾರವನ್ನು ತಮ್ಮ ಸಮಸ್ತ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್ವಿಕ್ ಅವರಿಗೆ ಅನೇಕರು ಶುಭಾಶಯಗಳನ್ನು ಹೇಳುತ್ತಿದ್ದಾರೆ. ಇನ್ನೂ ಕೆಲವರು ಆ್ಯಮಿ ಜಾಕ್ಸನ್ ಕಾಲೆಳೆಯುತ್ತಿದ್ದಾರೆ. ಮದ್ವೆಯಾಗಿ ಇನ್ನೂ ಮೂರು ತಿಂಗಳಾಗಿಲ್ಲ ಆಗಲೇ ಗರ್ಭಿಣಿಯಾದರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಗರ್ಭಿಣಿಯಾದ ವಿಚಾರ ಗೊತ್ತಾದ ನಂತರ ಮದ್ವೆಯಾಗಿದ್ದಾ ಹೇಗೆ ಎಂದು ಪ್ರಶ್ನೆಯನ್ನು ಕೂಡ ಕೇಳುತ್ತಿದ್ದಾರೆ. ಇನ್ನುಳಿದಂತೆ ಆಮಿ ಜಾಕ್ಸನ್ ಮತ್ತು ಎಡ್‌ವೆಸ್ಟ್‌ವಿಕ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಇನ್ನೂ ವೃತ್ತಿಯಲ್ಲಿ ನಟ, ಸಂಗೀತಗಾರನಾಗಿರುವ ಎಡ್ ವೆಸ್ಟ್‌ವಿಕ್ ಗಾಸಿಪ್ ಗರ್ಲ್‌ನಲ್ಲಿ ಚಕ್ ಬಾಸ್ ಪಾತ್ರಕ್ಕಾಗಿ ಮತ್ತು ವೈಟ್ ಗೋಲ್ಡ್ ಟಿವಿ ಸರಣಿಯಲ್ಲಿ ವಿನ್ಸೆಂಟ್ ಸ್ವಾನ್ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.
ಇನ್ನೂ.ಕನ್ನಡದ 'ದಿ ವಿಲನ್', ಸೇರಿ ಸಿಂಗ್ ಈಸ್ ಬ್ಲಿಂಗ್, ಏಕ್ ದೀವಾನಾ ಥಾ ಮುಂತಾದ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ 'ಐ', ಮದ್ರಾಸಿಪಟ್ಟಣಂ ಸೇರಿ ಅನೇಕ ಸಿನಿಮಾಗಳ ಮೂಲಕ ಸೌತ್ ಸಿನಿ ಪ್ರೇಮಿಗಳ ಮನಗೆದ್ದ ಈ ಚೆಲುವೆ ಚಿತ್ರರಂಗದಿಂದ ದೂರವಾಗಿ ಅನೇಕ ದಿನಗಳಾಗಿವೆ. ವಿದ್ಯುತ್ ಜಾಮ್ವಾಲ್ ಜೊತೆ ಕ್ರ್ಯಾಕ್ ಎಂಬ ಚಿತ್ರವೇ ಕೊನೆ ಆ ನಂತರ ಆಮಿ ಜಾಕ್ಸನ್ ಮತ್ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಬಣ್ಣ ಹಚ್ಚಿಲ್ಲ. ಬದಲಿಗೆ ವ್ಯೆಯಕ್ತಿಕ ಜೀವನದಲ್ಲಿಯೇ ಆರಾಮಾಗಿ ನೆಮ್ಮದಿಯಾಗಿ ಇದ್ದಾರೆ ಆಮಿ ಜಾಕ್ಸನ್. ಒಟ್ನಲ್ಲಿ ಸದ್ಯಕ್ಕೆ ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ತಮ್ಮ ಅಭಿಮಾನಿಗಳಿಗೆ ಮತ್ತು ಹಿತೈಶಿಗಳಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.


Click it and Unblock the Notifications











