'ಮದುವೆಯಾಗೋಣ ಬಾ' ಎಂದು ಮತ್ತೊಂದು ಮದುವೆಗೆ ಇಟಲಿಗೆ ಹಾರಿದ ದಿ ವಿಲನ್ ನಾಯಕಿ ಆಮಿ ಜಾಕ್ಸನ್..!
ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಯೌವ್ವನದ ಹುಚ್ಚುಕೊಡಿ ಮನಸಿನ ಇವತ್ತಿನ ಅನೇಕ ಯುವಕ-ಯುವತಿಯರಿಗೆ ಲವ್ ಅನ್ನೋದು ಶೋಕಿ. ಇವಳಿಲ್ಲದ್ರೆ ಅವಳು, ಅವನು ಇಲ್ಲಂದ್ರೆ ಮತ್ತೊಬ್ಬ.. ಹಂಗಾಗೇ ಈ ಪ್ರೀತೀಲೂ ನಾನಾ ವೆರೈಟಿಗಳು ಬಂದ್ಬಿಟ್ಟಿವೆ.ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ನಮ್ಮ ಯೂತ್ಸ್ ನಡೆಸ್ತಾರೆ. ಕೆಲ ಹೆಣ್ ಮಕ್ಕಳೂ ಕೂಡ ಇವನಾ ಇಲ್ಲಾ ಅವನಾ ಅಂತ ಯೋಚ್ನೆ ಮಾಡ್ತಾನೇ ಮುಂದಿರುವ ಲೈಫ್‌ನೇ ಮರೆತು ಬಿಡ್ತಾರೆ. ಇಂಥೋರಗೆಲ್ಲ ಈ ಲೈಫೇ ಒಂದ್ ಥರಾ ಸೆಕೆಂಡ್ ಹ್ಯಾಂಡ್ ಇದ್ದಂಗೆ. ಇದಕ್ಕೆ ಆ್ಯಮಿ ಜಾಕ್ಸನ್ ಸದ್ಯದ ಉದಾಹರಣೆ.
ಹೌದು. 14 ವರ್ಷದ ಹಿಂದೆ ಕಾಲಿವುಡ್ ಸಿನಿಮಾ ಮೂಲಕ, ಚಿತ್ರರಂಗ ಪ್ರವೇಶಿಸಿದ ಲಂಡನ್ ಮೂಲದ ಆ್ಯಮಿ ಜಾಕ್ಸನ್.. ಕನ್ನಡದಲ್ಲಿ ದಿ ವಿಲನ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ ವಿಲನ್‌ನಂಥಾ ದೊಡ್ಡ ಚಿತ್ರದಲ್ಲಿ ನಟಿಸಿ, ಅದು ಬಿಡುಯಗಡೆಯಾದರೂ ಕೂಡಾ ಆ್ಯಮಿ ಜಾಕ್ಸನ್ ಗೆ ತಾನು ಯಾವ ಭಾಷೆಯ ಚಿತ್ರದಲ್ಲಿ ನಟಿಸಿದ್ದೆಂಬುದೇ ಗೊತ್ತಿರಲಿಲ್ಲ ಅನ್ನುವುದು ಬೇರೆ ವಿಚಾರ. ಇಂಥ ಆ್ಯಮಿ ಜಾಕ್ಸನ್ ಮದುವೆ ಮುನ್ನವೇ ಗರ್ಭಿಣಿಯಾಗುವ ಮೂಲಕ ಅನೇಕರನ್ನ ನಿಬ್ಬೇರಗಾಗಿಸಿದ್ದರು. 2019ರಲ್ಲಿ ವ್ಯಾಪಕ ಚರ್ಚೆಗೀಡಾದರು.

ಆದರೆ, ಅದೇನಾಯ್ತೋ.. ಉದ್ಯಮಿ ಜಾರ್ಜ್ ಪನಯಿಟೊ ಜೊತೆ ಕೈ ಹಿಡಿದು ಸುತ್ತಾಡ್ತಾನೇ, ಮದುವೆ ಮುನ್ನವೇ ಗಂಡು ಮಗುಗೆ ಜನ್ಮ ನೀಡಿದ್ದ ಆ್ಯಮಿ ಜಾಕ್ಸನ್ ... ತಮ್ಮಿಬ್ಬರ ಪ್ರೀತಿಯ ಸಂಕೇತವಾದ ಮಗನಿಗೆ ಆ್ಯಂಡ್ರಿಯಾಸ್ ಎಂದು ನಾಮಕರಣ ಮಾಡಿ, ಜಾರ್ಜ್ ಜೊತೆ ಸಂಬಂಧ ಕಡಿದುಕೊಂಡರು. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜಾರ್ಜ್ ಜೊತೆ ಇದ್ದ ತಮ್ಮ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದರು.
ಇಂಥಾ ಆಮಿ ಜಾಕ್ಸನ್ ಈಗ ಎಡ್ ವೆಸ್ಟ್‌ವಿಕ್ ಜೊತೆ ಮದುವೆಗೆ ಸಿದ್ಧರಾಗಿದ್ದಾರೆ. ಭಾವಿ ಪತಿಯ ತುಟಿಗೆ ತುಟಿಯೊತ್ತಿ ನಾವು ಮದುವೆಯಾಗೋಣ್ವಾ ಬೇಬಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮದುವೆಯಾಗುವ ಸುಳಿವು ನೀಡಿದ್ದಾರೆ.

ಇನ್ನೂ ಸದ್ಯಕ್ಕೆ ಇವರು ಇಬ್ಬರು ಇಟಲಿಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಈ ನಡುವೆ ಈಗಾಗಲೇ ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ಮದುವೆಯಾಗಿದ್ದು, ಇಟಲಿಯಲ್ಲಿ ಮದುವೆ ನಂತರದ ಪಾರ್ಟಿಗಳನ್ನೂ ಹಮ್ಮಿಕೊಂಡಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಆಮಿ ಜಾಕ್ಸನ್ ಅವರ ಕೆಲ ಫೋಟೋಗಳು ವೈರಲ್ ಆಗುತ್ತಿವೆ.
ಒಟ್ನಲ್ಲಿ ಸದ್ಯಕ್ಕೆ ಆಮಿ ಜಾಕ್ಸನ್ ಮತ್ತೊಮ್ಮೆ ಮದುವೆಯ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆಗೀಡಾಗಿದ್ದಾರೆ. ಉಳಿದಂತೆ ಆಮಿ ಜಾಕ್ಸನ್ ಮದುವೆಯ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರರಂಗದ ಸ್ನೇಹಿತರು ಆಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್‌ಗೆ ಶುಭಾಶಯಗಳನ್ನೂ ಕೋರುತ್ತಿದ್ದಾರೆ.


Click it and Unblock the Notifications











