twitter
    For Quick Alerts
    ALLOW NOTIFICATIONS  
    For Daily Alerts

    ಸೋನಂ ಧರಿಸಿದ್ದ ಲೆಹೆಂಗಾ ತಯಾರು ಮಾಡೋಕೆ ಬೇಕಾಗಿದ್ದು ಬರೋಬ್ಬರಿ 18 ತಿಂಗಳು.!

    By Harshitha
    |

    ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ಸೋನಂ ಕಪೂರ್ ಬಾಲಿವುಡ್ ನ ಸ್ಟೈಲ್ ಐಕಾನ್. ಎಲ್ಲೇ ಹೋದರೂ, ಸ್ಟೈಲ್ ಮೇನ್ಟೇನ್ ಮಾಡೋದ್ರಲ್ಲಿ ನಟಿ ಸೋನಂ ಕಪೂರ್ ಎತ್ತಿದ ಕೈ. ಅನೇಕ ಫ್ಯಾಶನ್ ಈವೆಂಟ್ ಗಳಲ್ಲಿ ಶೋ ಸ್ಟಾಪರ್ ಆಗಿರುವ ಸೋನಂ ಕಪೂರ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ತಮ್ಮ ಜೀವನದ ಅತ್ಯಮೂಲ್ಯ ಘಟ್ಟಕ್ಕೆ ಕಾಲಿಡುವ ಶುಭ ಸಂದರ್ಭದಂದು ಸೋನಂ ಕಪೂರ್ ಯಾವ ರೀತಿಯ ಉಡುಗೆ ತೊಡಬಹುದು ಎಂದು ಅಭಿಮಾನಿಗಳು ಕಾಯ್ತಿದ್ದರು.

    ನಿನ್ನೆ (ಮೇ 7) ಸಂಜೆ ಸನ್ ಟೆಕ್, ಸಿಗ್ನೇಚರ್ ಐಲ್ಯಾಂಡ್ ನಲ್ಲಿ ನಟಿ ಸೋನಂ ಕಪೂರ್ ರವರ ಮೆಹಂದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮ ನೆರವೇರಿತು. ಸಂಗೀತ್ ಸೆರೆಮನಿಯಲ್ಲಿ ಬಿಳಿ ಲೆಹಂಗಾ ತೊಟ್ಟು ನಟಿ ಸೋನಂ ಕಪೂರ್ ಅಕ್ಷರಶಃ ಯುವರಾಣಿಯಂತೆ ಕಂಗೊಳಿಸಿದರು.

    ಅಸಲಿಗೆ, ಸೋನಂ ತೊಟ್ಟಿದ್ದ ಲೆಹಂಗಾ ತಯಾರು ಮಾಡೋಕೆ 18 ತಿಂಗಳು ಬೇಕಾಯ್ತು ಅನ್ನೋದು ನಿಮಗೆ ಗೊತ್ತಾ.? ಸೋನಂ ತೊಟ್ಟಿದ್ದ ಲೆಹಂಗಾ ಕುರಿತ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ ಓದಿರಿ...

    ಚಿಂಕಂಕಾರಿ ಲೆಹಂಗಾ

    ಚಿಂಕಂಕಾರಿ ಲೆಹಂಗಾ

    ಸಾಂಪ್ರದಾಯಿಕ ಉಡುಗೆಗಳನ್ನ ತಯಾರು ಮಾಡುವುದರಲ್ಲಿ ಭಾರತದಲ್ಲಿಯೇ ಹೆಸರುವಾಸಿ ಆಗಿರುವ ಡಿಸೈನರ್ ಗಳಾದ ಅಬು ಜಾನಿ ಹಾಗೂ ಸಂದೀಪ್ ಕೋಸ್ಲಾ ಸಿದ್ದಪಡಿಸಿದ ಬಿಳಿ ಬಣ್ಣದ ಲೆಹಂಗಾದಲ್ಲಿ ನವ ವಧು ಸೋನಂ ಕಪೂರ್ ಮಿಂಚಿದರು.

    ಇದೋ ಇಲ್ಲಿದೆ ನೋಡಿ ಸೋನಂ ಕಪೂರ್ ಮದುವೆಯ ಆಹ್ವಾನ ಪತ್ರಿಕೆಇದೋ ಇಲ್ಲಿದೆ ನೋಡಿ ಸೋನಂ ಕಪೂರ್ ಮದುವೆಯ ಆಹ್ವಾನ ಪತ್ರಿಕೆ

    18 ತಿಂಗಳು ಬೇಕಾಯಿತು

    18 ತಿಂಗಳು ಬೇಕಾಯಿತು

    ಚಿಂಕಂಕಾರಿ ಹಾಗೂ ಸಿಗ್ನೇಚರ್ ಮಿರರ್ ವರ್ಕ್ ಹೊಂದಿರುವ ಈ ಬಿಳಿ ಲೆಹಂಗಾ ತಯಾರು ಮಾಡೋಕೆ ಬರೋಬ್ಬರಿ 18 ತಿಂಗಳು ತೆಗೆದುಕೊಂಡಿದ್ದರಂತೆ ಅಬು ಜಾನಿ ಹಾಗೂ ಸಂದೀಪ್ ಕೋಸ್ಲಾ.

    ಬ್ರೇಕಿಂಗ್ ನ್ಯೂಸ್: ಮೇ 8 ರಂದು ನಡೆಯಲಿದೆ ಸೋನಂ ಕಪೂರ್ ವಿವಾಹಬ್ರೇಕಿಂಗ್ ನ್ಯೂಸ್: ಮೇ 8 ರಂದು ನಡೆಯಲಿದೆ ಸೋನಂ ಕಪೂರ್ ವಿವಾಹ

    ಎರಡು ವರ್ಷಗಳ ಹಿಂದೆ ಆರ್ಡರ್ ಮಾಡಿದ್ದರಂತೆ ಸೋನಂ.!

    ಎರಡು ವರ್ಷಗಳ ಹಿಂದೆ ಆರ್ಡರ್ ಮಾಡಿದ್ದರಂತೆ ಸೋನಂ.!

    ಇಂಥದ್ದೇ ಲೆಹಂಗಾ ಬೇಕು ಅಂತ ಎರಡು ವರ್ಷಗಳ ಹಿಂದೆಯೇ ನಟಿ ಸೋನಂ ಕಪೂರ್ ಆರ್ಡರ್ ಕೊಟ್ಟಿದ್ದರಂತೆ.

    ಮದುವೆ ಆದ್ಮೇಲೆ ಲಂಡನ್ ನಲ್ಲಿ ಸೆಟಲ್ ಆಗ್ತಾರೆ ಕಪೂರ್ ಕುಟುಂಬದ ಕುಡಿ.!ಮದುವೆ ಆದ್ಮೇಲೆ ಲಂಡನ್ ನಲ್ಲಿ ಸೆಟಲ್ ಆಗ್ತಾರೆ ಕಪೂರ್ ಕುಟುಂಬದ ಕುಡಿ.!

    ಅಮ್ಮನ ನೆಕ್ಲೇಸ್ ತೊಟ್ಟಿದ್ದ ಸೋನಂ

    ಅಮ್ಮನ ನೆಕ್ಲೇಸ್ ತೊಟ್ಟಿದ್ದ ಸೋನಂ

    ಸಂಗೀತ ಕಾರ್ಯಕ್ರಮಕ್ಕಾಗಿ ತಮ್ಮ ತಾಯಿ ಸುನೀತಾ ಕಪೂರ್ ರವರ ಮುತ್ತು ಹಾಗೂ ಕುಂದನ್ ಮಿಶ್ರಿತ ಚೋಕರ್ ನೆಕ್ಲೇಸ್ ತೊಟ್ಟಿದ್ದರು ನಟಿ ಸೋನಂ ಕಪೂರ್.

    English summary
    Bollywood Actress Sonam Kapoor is getting married to Anand Ahuja today (May 8th) in Mumbai. Here is an interesting story about Sonam Kapoor's mehendi lehenga. Have a look.
    Tuesday, May 8, 2018, 12:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X