ಹೇಳೋದು ಸಿದ್ಧಾಂತ ಮಾಡೋದು ರಾದ್ಧಾಂತ ; ಕ್ರಿಸ್ ರಾಕ್‌ಗೆ ವಿಲ್ ಸ್ಮಿತ್‌ ಕಪಾಳಮೋಕ್ಷ ಮಾಡಿದ್ದಾಗ ಕಂಗನಾ ಹೇಳಿದ್ದೇನು..?

By ಫಿಲ್ಮಿಬೀಟ್ ಡೆಸ್ಕ್

ಚಿತ್ರಕ್ಕೆ ಮತ್ತು ಪಾತ್ರಕ್ಕೆ ತನು-ಮನ ಅರ್ಪಿಸುವುದಲ್ಲದೇ ಪ್ರಬಲ ಶಕ್ತಿಗಳ ಮುಂದೆ ತನ್ನ ವ್ಯಕ್ತಿತ್ವಕ್ಕೆ ಮಸಿ ತಗುಲದಂತೆ ಬಾಲಿವುಡ್ ನಲ್ಲಿ ಸ್ಟಾರ್ ಪಟ್ಟವನ್ನು ಅಲಂಕರಿಸಿದವರು ಕಂಗನಾ ರಣಾವತ್. ಹಿಮಾಚಲದ ಪ್ರದೇಶದ ಮಂಡಿಯಿಂದ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಗೆದ್ದು ಚರಿತ್ರೆಯನ್ನ ಸೃಷ್ಟಿಸಿದ ಕಂಗನಾ ರಣಾವತ್ ಅವರನ್ನ ಮೊನ್ನೆ ಅಭಿನಂದಿಸುವ ಬದಲು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕುಲ್ವಿಂದರ್ ಕೌರ್ ಎಂಬ ಸಿಐಎಸ್ಎಫ್ ಮಹಿಳಾ ಪೇದೆಯು ಕಪಾಳ ಮೋಕ್ಷ ಮಾಡಿದ್ದರು.

ಆ ನಂತರ ಕೂಡಲೇ ಮಹಿಳಾ ಯೋಧೆ ಕುಲ್ವಿಂದರ್ ಕೌರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆ ಬಳಿಕ ಕ್ರಮ ಕೈಗೊಂಡು ಕುಲ್ವಿಂದರ್ ಕೌರ್ ಅವರನ್ನು ಅಮಾನತು ಮಾಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ವಿಚಾರದಲ್ಲಿ ವ್ಯಾಪಕ ಚರ್ಚೆಯನ್ನ ಮಾಡಲಾಯಿತು. ಕೆಲವರು ಕಂಗನಾ ಪರ ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ಕುಲ್ವಿಂದರ್ ಕೌರ್ ಅವರಿಗೆ ಜೈಕಾರ ಹಾಕಿದರು. ಇನ್ನೂ ತಮ್ಮ ಮೇಲೆ ನಡೆದ ಈ ಹಲ್ಲೆಯಿಂದ ವಿಚಲಿತಗೊಂಡ ಕಂಗನಾ ಬಾಲಿವುಡ್‌ ವಿರುದ್ಧ ಹರಿಹಾಯ್ದಿದ್ದರು. ತಮ್ಮ ಬೆಂಬಲಕ್ಕೆ ಬಾರದ ಹಿಂದಿ ಚಿತ್ರರಂಗದ ವಿರುದ್ಧ ಸಿಡಿದೆದ್ದಿದ್ದರು.

an-old-post-of-kangana-ranaut-supporting-will-smiths-slap-on-chris-rock-went-viral

ಆದರೆ.. ಇದೆಲ್ಲದರ ನಡುವೆ ಈಗ ಕಂಗನಾ ನಡೆಯನ್ನ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎಂಬ ಮಾತನ್ನ ದೊಡ್ಡವರು ನಿಮ್ಮ ಅಂತವರನ್ನು ನೋಡಿಯೇ ಹೇಳಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ 2022ರಲ್ಲಿ ನಡೆದ ಘಟನೆ ಮತ್ತುಕಂಗನಾ ಅವತ್ತು ನೀಡಿದ್ದ ಪ್ರತಿಕ್ರಿಯೆ

ಹೌದು, ಅಸಲಿಗೆ ಹಾಲಿವುಡ್ ನಟ ವಿಲ್ ಸ್ಮಿತ್ 2022ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಹಾಸ್ಯನಟ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿದ್ದರು. ತನ್ನ ಪತ್ನಿಯ ಬೋಳು ತಲೆಯ ಬಗ್ಗೆ ಅಪಹಾಸ್ಯ ಮಾಡಿದ ಕಾರಣಕ್ಕೆ ಕುಪಿತರಾದ ವಿಲ್ ಸ್ಮಿತ್ ಅವರು ಕ್ರಿಸ್ ರಾಕ್‌ ಕೆನ್ನೆಗೆ ಬಾರಿಸಿದ್ದರು.

an-old-post-of-kangana-ranaut-supporting-will-smiths-slap-on-chris-rock-went-viral

ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಅಲೋಪೆಸಿಯಾ ಎಂಬ ಕೂದಲು ಉದುರುವ ಕಾಯಿಲೆಯಿಂದ ಬಳಲುತ್ತಿದ್ದು ಆ ಸಮಯದಲ್ಲಿ ಅವರು ತಲೆ ಬೋಳಿಸಿಕೊಂಡಿದ್ದರು. ಇನ್ನು ವಿಲ್ ಸ್ಮಿತ್ ಬಳಿಕ ಕ್ರಿಸ್‌ ರಾಕ್‌ಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದರು.

ಆ ಘಟನೆ ನಡೆದ ಸಂದರ್ಭದಲ್ಲಿ ಕಂಗನಾ ರನೌತ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ ಮಾಡಿದ್ದು ವಿಲ್ ಸ್ಮಿತ್ ಪರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿದ್ದರು, ಕಪಾಳಮೋಕ್ಷ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದರು. ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು ನೆಟ್ಟಿಗರು ಈಗ ಕಂಗನಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ

"ಕಂಗನಾ ರನೌತ್ ಪ್ರಕಾರ ವಿಲ್ ಸ್ಮಿತ್ ತನ್ನ ಪತ್ನಿಯ ತಮಾಷೆ ಮಾಡಿದ್ದಕ್ಕಾಗಿ ಯಾರಿಗಾದರೂ ಹೊಡೆಯಬಹುದು. ಆದರೆ ಇನ್ನೊಬ್ಬ ಮಹಿಳೆ ತನ್ನ ತಾಯಿಯನ್ನು '100 ರೂಪಾಯಿಗೆ ಹೋಗುವವರು' ಎಂದು ಕರೆದಿದ್ದಕ್ಕೆ ಮತ್ತು ತನ್ನ ರೈತ ತಂದೆಯ ಶಿರಚ್ಛೇದ ಮಾಡುವಂತೆ ಹೇಳಿದ್ದಕ್ಕೆ ಹೊಡೆಯಲು ಸಾಧ್ಯವಿಲ್ಲವೇ? ಬೂಟಾಟಿಕೆಗೂ ಮಿತಿಯಿದೆ" ಎಂದು ಎಕ್ಸ್‌ನಲ್ಲಿ ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್‌ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿರುವುದನ್ನು ಕೆಲವರು ಟೀಕಿಸಿದರೆ ಇನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ ಆಕ್ರೋಶ ಅರ್ಥವಾಗುತ್ತದೆ, ಆದರೆ ಹೊಡೆಯುವುದು ಸರಿಯಲ್ಲ ಎಂದಿದ್ದಾರೆ. ಸಿಐಎಸ್‌ಎಫ್ ಕಾನ್ಸ್‌ಟೇಬಲ್‌ನ ಕೃತ್ಯವನ್ನು ಬೆಂಬಲಿಸಿದ ಜನರ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರನೌತ್‌ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಗನಾರ ಹಳೆಯ ಪೋಸ್ಟ್‌ನಲ್ಲಿ ರಿಟ್ವೀಟ್ ಮಾಡಿದ್ದಾರೆ.

More from Filmibeat

English summary
In the midst of the recent controversy surrounding the Will Smith and Chris Rock incident at the Oscars, social media users have resurfaced an older post by Kangana Ranaut where she supported Will Smith's action of slapping Chris Rock. Netizens are now pointing out what they perceive as hypocrisy in her stance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X