For Quick Alerts
  ALLOW NOTIFICATIONS  
  For Daily Alerts

  ತೆರೆಮೇಲೆ ಚೆಸ್ ಮಾಂತ್ರಿಕ ವಿಶ್ವನಾಥ್ ಆನಂದ್ ಬಯೋಪಿಕ್; ನಾಯಕ ಯಾರು?

  |

  ಬಾಲಿವುಡ್ ನಲ್ಲಿ ಈಗಾಗಲೇ ಸಾಕಷ್ಟು ಸಾಧಕರ ಬಯೋಪಿಕ್ ತೆರೆಮೇಲೆ ಬಂದಿದೆ. ಇದೀಗ ಮತ್ತೊಂದು ಬಯೋಪಿಕ್ ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹೌದು, ಭಾರತದ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಅವರ ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಜ್ಜಾಗಿದೆ.

  ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ಬಯೋಪಿಕ್ ಅನೌನ್ಸ್ ಆಗಿದ್ದು, ನಿರ್ದೇಶಕ ಆನಂದ್ ಎಲ್ ರೈ ಸಾರಥ್ಯದಲ್ಲಿ ಈ ಬಯೋಪಿಕ್ ಮೂಡಿಬರುತ್ತಿದೆ. ಈ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅಧಿಕೃತ ಪಡಿಸಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  ದಿಗ್ಗಜ ನೃತ್ಯ ಸಂಯೋಜಕಿ ಸರೋಜ್ ಖಾನ್ ಬಯೋಪಿಕ್!ದಿಗ್ಗಜ ನೃತ್ಯ ಸಂಯೋಜಕಿ ಸರೋಜ್ ಖಾನ್ ಬಯೋಪಿಕ್!

  ವಿಶೇಷ ಎಂದರೆ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಬಾಲಿವುಡ್ ನಲ್ಲಿ ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ವಿಶ್ವನಾಥನ್ ಆನಂದ್ ಪಾತ್ರದಲ್ಲಿ ನಟ ಅಭಿಷೇಕ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿನಿಮಾತಂಡದಿಂದ ಬಹಿರಂಗವಾಗಿಲ್ಲ.

  ಸದ್ಯ ಸಿನಿಮಾ ಬಹಿರಂಗವಾಗಿದೆಯಷ್ಟೆ. ಮುಂದಿನ ವರ್ಷ ಕಲಾವಿದರು ಮತ್ತು ಉಳಿದ ತಂತ್ರಜ್ಞರ ಮಾಹಿತಿ ಬಹಿರಂಗವಾಗಲಿದೆ. ವಿಶ್ವನಾಥನ್ ಚೆಸ್ ನಲ್ಲಿ ಒಟ್ಟು 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅದರ ಹಿನ್ನಲೆಯಲ್ಲೇ ಸಿನಿಮಾ ಮೂಡಿಬರಲಿದ್ದು, ಸದ್ಯ ಸ್ಕ್ರಿಪ್ಟಿಂಗ್ ಹಂತದಲ್ಲಿದೆಯಂತೆ. 2021 ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಿನಿಮಾ ಸೆಟ್ಟಿರುವ ಸಾದ್ಯತೆ ಇದೆ.

  Lockdown ನಲ್ಲಿ ಕೆಲಸ ಕಳೆದುಕೊಂಡವರ ನೆರವಿಗೆ ಬಂದ Sonu Sood | Filmibeat Kannada

  ಆನಂದ್ ಎಲ್ ರೈ ಸದ್ಯ ಅತ್ರಂಗಿ ರೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ತಮಿಳು ನಟ ಧನುಷ್ ಮತ್ತು ಸಾರಾ ಅಲಿ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಈ ಸಿನಿಮಾ ಮುಗಿಸಿ ಬಯೋಪಿಕ್ ಕೈಗೆತ್ತಿಕೊಳ್ಳಲಿದ್ದಾರೆ.

  English summary
  Anand L Rai to Direct Chess Grandmaster Vishwanth Anand's Biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X