2012 ರ ಸೂಪರ್ ಹಿಟ್ ಸಿನಿಮಾ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಆಲಿಯಾ ಭಟ್, ವರುಣ್ ಧವನ್, ಸಿದ್ಥಾರ್ಥ್ ಮಲ್ಹೋತ್ರ ಎಂಬ ತ್ರಿವಳಿ ಕಲಾವಿದರು ಸೂಪರ್ ಸ್ಟಾರ್ ಆಗಿ ಬೆಳದು ನಿಂತರು. ಇದೀಗ, ಈ ಚಿತ್ರದ 'ಸ್ಟೂಡೆಂಟ್ ಆಫ್ ದಿ ಇಯರ್-2' ಚಿತ್ರದ ಫೋಸ್ಟರ್ ಬಿಡುಗಡೆಯಾಗಿದೆ.
'ಭಾಗಿ-2' ಚಿತ್ರದ ಮೂಲಕ ಅಬ್ಬರಿಸುತ್ತಿರುವ ಟೈಗರ್ ಶ್ರಾಫ್ ಈ ಚಿತ್ರದ ನಾಯಕರಾಗಿದ್ದು, ಇಬ್ಬರ ಹೀರೋಯಿನ್ಸ್ ಚಿತ್ರದಲ್ಲಿದ್ದಾರೆ. ತಾರಾ ಸುತಾರಿಯಾ ಮತ್ತು ಅನನ್ಯ ಪಾಂಡೆ ಟೈಗರ್ ಶ್ರಾಫ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ. ಈ ಇಬ್ಬರು ನಟಿಯರಿಗೂ ಇದು ಚೊಚ್ಚಲ ಸಿನಿಮಾ.
2012ರಲ್ಲಿ ತೆರೆಕಂಡಿದ್ದ ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಒಬ್ಬರೇ ನಾಯಕಿಯಿದ್ದರು. ಆದ್ರೀಗ, ಒಬ್ಬರೇ ನಾಯಕನಿದ್ದು, ಇಬ್ಬರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ, ಅನನ್ಯ ಪಾಂಡೆ ಬಾಲಿವುಡ್ ನ ಖ್ಯಾತ ನಟ ಚಂಕಿ ಪಾಂಡೆ ಅವರ ಮಗಳು.
ಈಗಾಗಲೇ 'ಸ್ಟೂಡೆಂಟ್ ಆಫ್ ದಿ ಇಯರ್-2' ಚಿತ್ರದಲ್ಲಿ ಈ ಮೂವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ರಿವಿಲ್ ಆಗಿದೆ. ಮೂರು ಜನರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಮತ್ತೊಂದು ರೊಮ್ಯಾಂಟಿಕ್ ಲವ್ ಸ್ಟೋರಿಗೆ ಬಾಲಿವುಡ್ ಸಜ್ಜಾಗಿದೆ.
ಮೊದಲ ಚಿತ್ರವನ್ನ ನಿರ್ದೇಶನ ಮಾಡಿದ್ದ ಕರಣ್ ಜೋಹರ್ ಎರಡನೇ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಪುನೀತ್ ಮಲ್ಹೋತ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈ ವರ್ಷದ ಅಂತ್ಯದಲ್ಲಿ ಸಿನಿಮಾ ತೆರೆಗೆ ತರುವ ತಯಾರಿಯಲ್ಲಿದೆ ಚಿತ್ರತಂಡ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.