Bollywood Party: ಅನನ್ಯಾ ಬಿಕಿನಿ, ಕಾಜೊಲ್ ಆಫ್ ಶೋಲ್ಡರ್, ಕತ್ರಿನಾ ದುಬಾರಿ ಡ್ರೆಸ್ ಟ್ರೋಲ್!

ಬಾಲಿವುಡ್‌ನಲ್ಲಿ ಪಾರ್ಟಿಗಳು ನಡೆಯುವುದು ಸಾಮಾನ್ಯ. ಅದರೆ ಎಲ್ಲಾ ಪಾರ್ಟಿಗಳಲ್ಲಿ ಎಲ್ಲರೂ ಸೇರುವುದಿಲ್ಲ. ಆದರೆ ಕೆಲವೊಂದು ಪಾರ್ಟಿಗಳಲ್ಲಿ ಬಹುತೇಕ ಎಲ್ಲಾ ಸಿನಿಮಾತಾರೆಯರು ಸೇರಿಕೊಳ್ಳುತ್ತಾರೆ. ಹಾಗೆ ಇತ್ತೀಚೆಗೆ ದೊಡ್ಡ ಪಾರ್ಟಿ ಒಂದರಲ್ಲಿ, ಬಾಲಿವುಡ್‌ ತಾರೆಯರು ಮಿಂಚಿದ್ದಾರೆ. ಸಿನಿಮಾ ತಾರೆಯರ ಪಾರ್ಟಿ ಅಂದರೆ ಅಲ್ಲಿ ಅವರ ಕಾಸ್ಟ್ಯೂಮ್‌ಗಳೇ ಮುಖ್ಯ ಆಕರ್ಷಣೆ ಆಗಿರುತ್ತವೆ.

ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆ 'ಧರ್ಮಾ' ಪ್ರೊಡಕ್ಷನ್ಸ್ ಸಿಎಓ ಅಪೂರ್ವ ಮೆಹ್ತಾ ಹುಟ್ಟುಹಬ್ಬದ ಪಾರ್ಟಿ ನಡೆದಿದೆ. ಈ ಪಾರ್ಟಿಯಲ್ಲಿ ಅನೇಕ ಹೆಸರಾಂತ ತಾರೆಯರು ಭಾಗಿ ಆಗಿದ್ದಾರೆ. ಆ ಪೈಕಿ ಕೆಲವರೂ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಅದು ಮತ್ಯಾವ ಕಾರಣಕ್ಕೂ ಅಲ್ಲಾ ಬದಲಿಗೆ ತಮ್ಮ ಉಡುಪಿನಿಂದಾಗಿ.

ಪಾರ್ಟಿಯಲ್ಲಿ ಸಿನಿಮಾ ತಾರೆಯರು ಹೆಚ್ಚಾಗಿ ವಿಭಿನ್ನವಾದ ಕಾಸ್ಟ್ಯೂಮ್‌ಗಳನ್ನು ಹಾಕಿಕೊಳ್ಳುತ್ತಾರೆ. ಅದರಲ್ಲೂ ಡಿಸೈನರ್ ಮತ್ತು ಹೆಚ್ಚು ದುಬಾರಿ ಬೆಲೆಯ ಬಟ್ಟೆಗಳನ್ನು ಹಾಕಿಕೊಂಡು ಪೋಸ್ ಕೊಡ್ತಾರೆ. ಈ ಪಾರ್ಟಿಯಲ್ಲಿ ಇಬ್ಬರು ನಟಿಯರು ಹಾಕಿಕೊಂಡ ಉಡುಪುಗಳು ಈಗ ಬೇಜಾನ್ ಟ್ರೋಲ್‌ ಆಗುತ್ತಿವೆ.

ಪಾರ್ಟಿಯಲ್ಲಿ ಅನನ್ಯಾ ಬಿಕಿನಿ ಅವತಾರ!

ಬಾಲಿವುಡ್‌ ತಾರೆಯರು ಹೆಚ್ಚು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ತಾರೆಯರ ಫೋಟೊಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ಮಾತ್ರ ನಟಿ ಅನನ್ಯ ಪಾಂಡೆ. ಇದಕ್ಕೆ ಕಾರಣ ಆಕೆಯ ವಿಚಿತ್ರವಾದ ಕಾಸ್ಟ್ಯೂಮ್. ಅತ್ತ ಬಿಕಿನಿಯೂ ಅಲ್ಲಾ, ಇತ್ತ ಪಾರ್ಟಿ ವೇರ್ ಕೂಡ ಅಲ್ಲ. ಅಂತಹ ಡ್ರೆಸ್ ಕೊಟ್ಟಿದ್ದರು ಅನನ್ಯ ಪಾಂಡೆ. ಬಿಕಿನಿ ತೊಡುವ ಬದಲು ಈ ರೀತಿ ಬಟ್ಟೆ ಹಾಕಿದ್ದಾರೆ ಎಂದು ಎಲ್ಲರೂ ಟ್ರೋಲ್ ಮಾಡಲಾಗುತ್ತಿದೆ. ಇದು ಫ್ಯಾಷನ್ ಲೋಕದ ದೊಡ್ಡ ದುರಂತ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಅನನ್ಯಾ ಜೊತೆ ವಿಜಯ್ ದೇವರಕೊಂಡ ಪುಲ್ ಮಿಂಚಿಂಗ್!

ಪಾರ್ಟಿಯಲ್ಲಿ ಅನನ್ಯಾ ಎಲ್ಲೇ ಓಡಾಡಿದರು ಆಕೆಗಿಂತ, ಆಕೆಯ ವಿಚಿತ್ರ ಡ್ರೆಸ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇನ್ನೂ ನಟಿ ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಇರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿಜಯ್ ಮತ್ತು ಅನನ್ಯಾ ಮಸ್ತ್ ಮಾತಿನಲ್ಲಿ ಮುಳುಗಿದ್ದಾರೆ. ಈ ಜೋಡಿ ಒಟ್ಟಿಗೆ 'ಲೈಗರ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಆಫ್ ಶೋಲ್ಡರ್ ಹಾಕಿದ ಕಾಜಲ್ ಟ್ರೋಲ್!

ನಟಿ ಕಾಜೊಲ್ ಕೂಡ ಅಪೂರ್ವ ಮೆಹ್ತಾ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಕಾಜೊಲ್ ನಿಂತುಕೊಂಡು ಫೋಟೊಗೆ ಪೋಸ್ ಕೊಟ್ಟಿಲ್ಲ. ಕಾಜೊಲ್ ಕಾರು ಹತ್ತುವಾಗ ವಿಡಿಯೋ ಮಾಡಲಾಗಿದೆ. ಪಾರ್ಟಿಗೆ ಕಾಜೊಲ್ ಕಪ್ಪು ಬಣ್ಣದ ಆಫ್ ಶೋಲ್ಡರ್ ಬ್ಯಾಕ್ ಪುಲ್ ಟಾಪ್ ಧರಿಸಿ ಬಂದಿದ್ದರು. ಅಂದರೆ ಈ ಟಾಪ್‌ ಕುತ್ತಿಗೆ ಭಾಗದಲ್ಲಿ ಓಪನ್ ಆಗಿತ್ತು. ಭುಜದ ತನಕ ಬಟ್ಟೆ ಇರುವುದಿಲ್ಲ. ಈ ಬಟ್ಟೆಯಲ್ಲಿ ಕಾಜೊಲ್ ದಪ್ಪಾ ಕಾಣುತ್ತಿದ್ದಾರೆ. ಹಾಗಾಗಿ ಆಕೆಯನ್ನು ಟ್ರೋಲ್ ಮಾಡಲಾಗಿದೆ. ಈ ರೀತಿ ಬಟ್ಟೆ ಕಾಜೊಲ್‌ಗೆ ಶೂಟ್ ಆಗುವುದಿಲ್ಲ ಎಂದು ಟೀಕೆ ಮಾಡಲಾಗುತ್ತಿದೆ.

ಕತ್ರಿನಾ ಕೊಟ್ಟಳು 83 ಸಾವಿರ ಬೆಲೆಯ ಬಟ್ಟೆ!

ಇನ್ನು ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿ ಕೂಡ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದೆ. ವಿಕ್ಕಿ ಕೌಶಲ್ ಅಪ್ಪು ಬಣ್ಣದ ಸೂಟ್ ಧರಿಸಿದ್ದರು. ಅದರೆ ವಿಕ್ಕಿಗಿಂತ ಹೆಚ್ಚಾಗಿ ಕಣ್ಣಿಗೆ ಬಿದ್ದಿದ್ದು ಕತ್ರಿನಾ ಕೈಫ್ ಕಾಸ್ಟ್ಯೂಮ್. ನಟಿ ಕತ್ರಿನಾ ತೊಟ್ಟ ಉಡುಪು ಸಿಕ್ಕಾಪಟ್ಟೆ ಸಿಂಪಲ್ ಆಗಿ ಕಾಣುತ್ತಿತ್ತು. ಈ ಬಟ್ಟೆಗೆ ಬಾಡಿ ಹಗ್ಗಿಂಗ್ ಡ್ರೆಸ್ ಎಂದು ಕರೆಯುತ್ತಾರೆ. ಸರಳವಾಗಿ ಕಾಣುವ ಈ ಬಟ್ಟೆಯ ಬೆಲೆ 83 ಸಾವಿರ ರೂ. ಹಾಗಾಗಿ ಪಾರ್ಟಿಯಲ್ಲಿ ಕ್ಯಾಟ್ ಉಡುಪು ಕೂಡ ಹೆಚ್ಚಾಗಿ ಗಮನ ಸೆಳೆದಿದೆ.

More from Filmibeat

English summary
Ananya Panday, Katrina Kaif, Kajol Gets Trolled For Her Bold Outfit At Apoorva Mehta's Birthday Party, know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X