16 ವರ್ಷ ಜೊತೆಯಿದ್ದ ಸಾಕು ನಾಯಿ ನಿಧನ, ಭಾವುಕಗೊಂಡು ನೆನಪುಗಳನ್ನು ಹಂಚಿಕೊಂಡ ನಟಿ..!
ಸಾಕಷ್ಟು ಜನ ಮುದ್ದು ಮುದ್ದಾದ ನಾಯಿಗಳನ್ನು ಮನೆಮಕ್ಕಳಂತೆ ಪ್ರೀತಿಕೊಟ್ಟು, ಹಾರೈಕೆ ಮಾಡಿ ಸಾಕಿರುತ್ತಾರೆ. ಸಾಕಿದ ಶ್ವಾನಗಳೊಂದಿಗೆ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತಾರೆ. ಹೀಗಾಗಿಯೇ ಮನೆಯ ಒಬ್ಬ ಸದಸ್ಯನಂತೆ ಇರುವ ನಾಯಿ ಸಾವನ್ನಪ್ಪಿದಾಗ ವಿಪರೀತ ದುಃಖ ಪಡುತ್ತಾರೆ. ತಮ್ಮ ಮುದ್ದು ನಾಯಿಯನ್ನೂ ನೆನೆದು ಕಣ್ಣೀರಾಗುತ್ತಾರೆ. ಅನನ್ಯಾ ಪಾಂಡೆ ಇದಕ್ಕೆ ಮತ್ತೊಂದು ಉದಾಹರಣೆ.
ಹೌದು, ಚಂಕಿ ಪಾಂಡೆಯ ಮಗಳೆನ್ನುವ ಕಾರಣಕ್ಕೆ, ಚಿತ್ರರಂಗವನ್ನು ಅನಾಯಾಸವಾಗಿ ಪ್ರವೇಶಿಸಿದ ಅನನ್ಯಾ ಪಾಂಡೆ ಅವರ ಮನೆಗೆ 2008ರಲ್ಲಿ ನಾಯಿಮರಿ ಬಂದಿತ್ತು. ಆಗಿನ್ನೂ ಅನನ್ಯಾ ಪಾಂಡೆಗೆ ಹತ್ತರ ಪ್ರಾಯ ಇರಬೇಕಷ್ಟೇ. ಅಲ್ಲಿಂದ ಇಲ್ಲಿಯವರೆಗೆ ಹದಿನಾರು ವರ್ಷ ಅನನ್ಯಾ ಪಾಂಡೆ ಬದುಕಿನ ಬಹುಮುಖ್ಯ ಭಾಗವಾಗಿದ್ದ ಈ ನಾಯಿ ಮರಿಗೆ, ಚಂಕಿ ಪಾಂಡೆ ಮನೆ ಮಂದಿಯೆಲ್ಲ ಸೇರಿ ಆಗ ಪಡ್ಜ್ ಎಂದು ನಾಮಕರಣವನ್ನೂ ಮಾಡಿದ್ದರು.

ಆದರೆ ಈಗ ಪಡ್ಜ್ ಅಸುನೀಗಿದೆ. ಹೀಗಾಗಿಯೇ ದುಃಖ ತಡೆಯಲಾಗದೇ ಅನನ್ಯ ಪಾಂಡೆ ಫಡ್ಜ್ ಜೊತೆ ತಾವು ಮಾಡಿದ ಹದಿನಾರು ವರ್ಷಗಳ ಪ್ರಯಾಣವನ್ನು, ಫೋಟೋ ಹಂಚಿಕೊಳ್ಳುವ ಮೂಲಕ ನೆನಪು ಮಾಡಿಕೊಂಡಿದ್ದಾರೆ. ರೆಸ್ಟ್ ಇನ್ ಪೀಸ್ ಪಡ್ಜ್ ನಾನು ನಿನ್ನನ್ನು ಪ್ರೀತಿಸುತ್ತೇನೆ ಫೈಟರ್, ಹದಿನಾರು ವರ್ಷ ನಿನ್ನ ಜೊತೆ ಕಳೆದ ಕ್ಷಣಗಳೆಲ್ಲವೂ ಖುಷಿಯಿಂದ ಕೂಡಿದ್ದವು ನಿನ್ನನ್ನೂ ನಾನು ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನನ್ಯಾ ಪಾಂಡೆ ಬರೆದುಕೊಂಡಿದ್ಧಾರೆ.
ಇನ್ನೂ ಅನನ್ಯಾ ಪಾಂಡೆ ಅವರ ಸಾಕು ನಾಯಿ ಪಡ್ಜ್ ನಿಧನಕ್ಕೆ ಅನೇಕರು ಸಂತಾಪವನ್ನೂ ಸೂಚಿಸಿದ್ದು, ಅನನ್ಯಾ ಪಾಂಡೆಯ ಚಿತ್ರರಂಗದ ಸಹೋದ್ಯೋಗಿಗಳಾದ ಇಶಾ ಗುಪ್ತಾ, ಪುಲ್ಕಿಟ್ ಸಾಮ್ರಾಟ್, ಮಹೀಪ್ ಕಪೂರ್, ಗಾಯಕ ಅರ್ಮಾನ್ ಮಲ್ಲಿಕ್, ಶ್ವೇತಾ ಬಚ್ಚನ್, ಶನಾಯಾ ಕಪೂರ್, ಸೇರಿ ಅನೇಕರು ಹಾರ್ಟ್ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಅಂದ್ಹಾಗೇ ಅನನ್ಯಾ ಪಾಂಡೆ ಕಳೆದ ಮೇನಲ್ಲಿ ಮತ್ತೊಂದು ನಾಯಿ ಮರಿಯನ್ನು ದತ್ತು ಪಡೆದಿದ್ದರು. ಅದಕ್ಕೆ ಇವರು ಇಟ್ಟಿರುವ ಹೆಸರು ರಿಯಟ್.

ಉಳಿದಂತೆ ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಅನನ್ಯಾ ಪಾಂಡೆಗೆ ಚಿತ್ರರಂಗದಲ್ಲಿ ಈ ಐದು ವರ್ಷದಲ್ಲಿ ಯಶಸ್ಸು ಸಿಕ್ಕಿದ್ದು ಕಡಿಮೆ. ವಿಜಯ್ ದೇವರಕೊಂಡ ಜೊತೆ ಅಭಿನಯಿಸಿದ್ದ ಲೈಗರ್ ಚಿತ್ರದ ಮೇಲೆ ಅನನ್ಯಾ ಪಾಂಡೆಗೆ ನಿರೀಕ್ಷೆಗಳಿದ್ದವಾದರೂ, ಆ ನಿರೀಕ್ಷೆ ಹುಸಿಯಾಯಿತು. ಲೈಗರ್ ಚಿತ್ರದಲ್ಲಿನ ಅಭಿನಯಕ್ಕೆ ಅನನ್ಯಾ ಪಾಂಡೆ ಅವರನ್ನು ವಿಪರೀತ ಟ್ರೋಲ್ ಕೂಡ ಮಾಡಲಾಗಿತ್ತು.
ಸದ್ಯಕ್ಕೆ ಅನನ್ಯಾ ಪಾಂಡೆ CTRL ಎಂಬ ಚಿತ್ರವೊಂದರಲ್ಲಿ ನಟಿಸುತ್ತಿದ್ಧಾರೆ. ಈ ಚಿತ್ರ ಹೊರತು ಪಡಿಸಿದರೆ ಶಂಕರಾ ಎಂಬ ಇನ್ನೊಂದು ಚಿತ್ರ ಅನನ್ಯಾ ಪಾಂಡೆ ಅವರ ಕೈಯಲ್ಲಿದೆ. ಸೋಲಿನ ಸುಳಿಯಲ್ಲಿ ಸಿಲುಕಿರುವ ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವೆರಡು ಸಿನಿಮಾ ಹೊರತು ಅನನ್ಯಾ ಪಾಂಡೆ ಹೇಳಿಕೊಳ್ಳುವಂತಹ ಕೆಲಸ ಸದ್ಯಕ್ಕೆ ಯಾವುದು ಇಲ್ಲ.


Click it and Unblock the Notifications











